ಬಸವ ಸಂಸ್ಕೃತಿ ಅಭಿಯಾನಕ್ಕೆ ಹಿಂದುತ್ವ ಸಂಘಟನೆಗಳ ಉತ್ತರ
ವಿಜಯಪುರ
ಬಬಲೇಶ್ವರ ಪಟ್ಟಣದಲ್ಲಿ ಡಿಸೆಂಬರ್ 29ರಂದು ಬಸವಾದಿ ಶರಣರ ಹಿಂದೂ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಶಿರೋಳದ ರಾಮಾರೂಢ ಮಠದ ಶಂಕರಾರೂಢ ಸ್ವಾಮೀಜಿ ಹೇಳಿದರು.
ನಗರದಲ್ಲಿ ಈಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಹಿಂದೂ ಧರ್ಮ ಉಳಿಸಲು, ಸನಾತನ ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸಲು ಬಸವಾದಿ ಶರಣರ ಹಿಂದೂ ವೇದಿಕೆ ಈ ಸಮಾವೇಶ ಆಯೋಜಿಸಿದೆ. ಬೆಳಗಾವಿಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಸಮಾವೇಶ ನಡೆಯುತ್ತಿದೆ. ಜನರಿಗೆ ತಪ್ಪು ಕಲ್ಪನೆಯಾಗಿದೆ ಅದನ್ನು ಸರಿ ಪಡಿಸಬೇಕು,” ಎಂದರು.
ಅಕ್ಟೊಬರ್ 29 ಬೆಳಗಾವಿಯಲ್ಲಿ ನಡೆದ ಸಭೆಯಲ್ಲಿ ಬಸವ ಸಂಸ್ಕೃತಿ ಅಭಿಯಾನಕ್ಕೆ ಉತ್ತರವಾಗಿ ‘ಬಸವಾದಿ ಶರಣರ’ ಹಿಂದೂ ಸಮಾವೇಶ ನಡೆಸಲು ಹಿಂದುತ್ವ ಸಂಘಟನೆಗಳ ನಾಯಕರು ನಿರ್ಧರಿಸಿದ್ದರು. ಈ ಸಮಾವೇಶಗಳು ಸಚಿವ ಎಂ ಬಿ ಪಾಟೀಲ್ ಅವರ ಬಬಲೇಶ್ವರ ಕ್ಷೇತ್ರದಿಂದ ಶುರುವಾಗಿ ದಾವಣಗೆರೆಯಲ್ಲಿ ಸಮಾರೋಪಗೊಳ್ಳಲಿದೆ. ರಾಜ್ಯದ ಎಲ್ಲಾ ತಾಲೂಕುಗಳಲ್ಲೂ ಈ ಸಮಾವೇಶಗಳು ನಡೆಯಲಿವೆ, ಎಂದು ಯುವ ಬ್ರಿಗೇಡಿನ ಚಕ್ರವರ್ತಿ ಸೂಲಿಬೆಲೆ ಘೋಷಿಸಿದ್ದರು.
ಬೈಕ್ ರ್ಯಾಲಿ, ಸಮಾವೇಶ
ಡಿಸೆಂಬರ್ 29ರಂದು ವಿಜಯಪುರದ ದರಬಾರ್ ಹೈಸ್ಕೂಲ್ ಮೈದಾನದಿಂದ ಬಬಲೇಶ್ವರದವರೆಗೂ ಬೈಕ್ ಜಾಥಾ ತೆರಳಲಿದೆ. ನಂತರ ಸಂಜೆ 4.30ರಿಂದ 6.30ವರೆಗೆ ಶಾಂತೇಶ್ವರ ಮಠದ ಮೈದಾನದಲ್ಲಿ ಸಮಾವೇಶ ನಡೆಯಲಿದೆ.
“10,000 ಬೆಂಬಲಿಗರ ಜೊತೆ ಹಲವಾರು ಪೂಜ್ಯರು, ಮಠಾಧಿಪತಿಗಳು ಭಾಗವಹಿಸಲಿದ್ದಾರೆ. ಎಲ್ಲಾ ಪ್ರಮುಖರಿಗೆ ಅಹ್ವಾನ ನೀಡುತ್ತಿದ್ದೇವೆ, ಯಾರು ಯಾರು ಭಾಗವಹಿಸಲಿದ್ದಾರೆಂದು ಸಮಾವೇಶದ ದಿನವೇ ಗೊತ್ತಾಗುತ್ತದೆ.
ಬಿಜಾಪುರ, ಬಾಗಲಕೋಟೆ ಜಿಲ್ಲೆ ಶರಣರ ನಾಡು. ಆದ್ದರಿಂದ ಬಸವಾದಿ ಶರಣರ ಹಿಂದೂ ಸಮಾವೇಶ ಅಂತ ಕಾರ್ಯಕ್ರಮಕ್ಕೆ ಟೈಟಲ್ ಕೊಡಲಾಗಿದೆ. ಇಲ್ಲಿಯವರೆಗೆ ಬಸವಣ್ಣನವರ ಬಿಟ್ಟು ಹಿಂದೂ ಸನಾತನಿ ಸಮಾವೇಶಗಳು ನಡೆಯುತ್ತಿದ್ದವು. ಈಗ ಅವರನ್ನೂ ಸೇರಿಸಿಕೊಂಡು ಹಿಂದೂ ಸಮಾವೇಶ ಅಂತ ಮಾಡುತ್ತಾ ಇದ್ದೀವಿ. ಇದು ಹೊಸ ಶಬ್ದ,” ಎಂದು ಹುಬ್ಬಳ್ಳಿಯ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪತ್ರಕರ್ತರೊಡನೆ ಕಿರಿಕಿರಿ
ಸಮಾವೇಶದ ಉದ್ದೇಶದ ಬಗ್ಗೆ ಪತ್ರಕರ್ತರು ಕೇಳಿದಾಗ ಶರಣ ಸಾಹಿತ್ಯ, ವೇದ, ಉಪನಿಷತ್ತುಗಳ ಮಹಿಮೆಯ ಬಗ್ಗೆ ಜಾಗೃತಿ ಮೂಡಿಸಲು ಸಮಾವೇಶ ಮಾಡುತ್ತಿದ್ದೀವಿ, ಎಂದರು.
ಬಸವಾದಿ ಶರಣರು ವೇದಗಳನ್ನು ಒಪ್ಪುವುದಿಲ್ಲವಲ್ಲ ಎಂದು ಪತ್ರಕರ್ತರೊಬ್ಬರು ಕೇಳಿದಾಗ ಶರಣರು ಕೆಲವೊಂದನ್ನು ಒಪ್ಪಿಕೊಂಡಿದ್ರು ಮತ್ತೆ ಕೆಲವೊಂದನ್ನು ಬೇಡ ಅಂತ ಬಿಟ್ಟಿದ್ದರು ಅಷ್ಟೇ, ಎಂದು ಹೇಳಿದರು.
ಈ ವಿಷಯದ ಮೇಲೆ ಮತ್ತಷ್ಟು ಪ್ರಶ್ನೆಗಳು ಬಂದಾಗ, “ಸುದ್ದಿಗೋಷ್ಠಿ ಕರೆದಿರುವುದು ಸಮಾವೇಶಕ್ಕೆ ಆಹ್ವಾನಿಸಲು ಮಾತ್ರ, ಬೇರೆ ವಿಷಯಗಳ ಬಗ್ಗೆ ವಿವರವಾಗಿ ಚರ್ಚೆ ಮಾಡಲು ಬಂದಿಲ್ಲ.
ಸಮಾವೇಶದಲ್ಲಿಯೂ ವಚನ ವಿಶ್ಲೇಷಣೆ ಮಾಡುವುದಿಲ್ಲ. ವಚನಗಳ ಪ್ರದರ್ಶನ ಮಾಡುವುದಿಲ್ಲ, ವಚನಕಾರರ ಫೋಟೋಗಳು ಮಾತ್ರ ಇರುತ್ತವೆ. ಧರ್ಮ ಜಾಗೃತಿ ಮಾತ್ರ ನಮ್ಮ ಉದ್ದೇಶ,” ಎಂದು ಹೇಳಿ ಎದ್ದು ನಡೆದರು.
ಸುದ್ದಿಗೋಷ್ಠಿಯಲ್ಲಿ ಮಣ್ಣಿಕೇರಿಯ ವಿಜಯಸಿದ್ದೇಶ್ವರ ಸ್ವಾಮೀಜಿ, ಬುದ್ನಿಯ ಸಿದ್ದಾನಂದ ಸ್ವಾಮೀಜಿ ಉಪಸ್ಥಿತರಿದ್ದರು.
ಲಿಂಗಾಯತ ಮುಖಂಡರು ಟಾರ್ಗೆಟ್
ಬಸವ ಸಂಸ್ಕೃತಿ ಅಭಿಯಾನದ ಯಶಸ್ಸಿನ ನಂತರ ಜಾಗೃತರಾಗುತ್ತಿರುವ ಲಿಂಗಾಯತರನ್ನು ಮತ್ತೆ ಮಲಗಿಸಲು ಹಿಂದುತ್ವ ನಾಯಕರು ಪ್ರಯಾಸ ಪಡುತ್ತಿದ್ದಾರೆ ಎಂದು ಸಿಂದಗಿ ತಾಲ್ಲೂಕಿನ ರಾಷ್ಟ್ರೀಯ ಬಸವದಳದ ಸಂಗಣ್ಣ ಬ್ಯಾಕೋಡ ಹೇಳಿದರು.
“ಅಭಿಯಾನದಲ್ಲಿ ನೆರೆದ ಜನಸಾಗರ ಹಾಗೂ ಅಲ್ಲಿ ಲಿಂಗಾಯತರೆಲ್ಲಾ ನಾವು ಹಿಂದೂಗಳಲ್ಲ ಎಂದು ಹೇಳಿದ್ದು ಇವರ ತಲೆ ಕೆಡಿಸಿದೆ. ಅದಕ್ಕೆ ಲಿಂಗಾಯತರನ್ನೇ ಬಳಸಿಕೊಂಡು ಲಿಂಗಾಯತ ಮಠಾಧಿಪತಿಗಳನ್ನು, ನಾಯಕರನ್ನು ಬೆದರಿಸುವ ಪ್ರಯತ್ನ ನಡೆಯುತ್ತಿದೆ.
ಕನ್ನೇರಿ ಸ್ವಾಮಿ ಬಳಸಿಕೊಂಡು ಲಿಂಗಾಯತ ಪೂಜ್ಯರ ನಿಂದಿಸಿದ್ದಾರೆ. ಯತ್ನಾಳ್ ಬಳಸಿಕೊಂಡು ಸಚಿವ ಎಂ ಬಿ ಪಾಟೀಲ್ ನಿಂದಿಸಿದ್ದಾರೆ. ಈಗ ಅವರ ಕ್ಷೇತ್ರದಲ್ಲಿಯೇ ಈ ವಿಚಿತ್ರ ಹಿಂದೂ ಸಮಾವೇಶ ಮಾಡುತ್ತಿದ್ದಾರೆ. ಇದನ್ನೆಲ್ಲಾ ಲಿಂಗಾಯತರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಲಿಂಗಾಯತರು ಕೆರಳಿದಾಗಲೆಲ್ಲ ಬಿಜೆಪಿ, ಆರೆಸ್ಸೆಸ್ ಗೆ ರಾಜ್ಯದಲ್ಲಿ ಏನಾಗಿದೆ ಎಂದು ಅವರು ಮರೆತ್ತಿದ್ದಾರೆ,” ಎಂದು ಸಂಗಣ್ಣ ಬ್ಯಾಕೋಡ ಹೇಳಿದರು.
ಇದೇ ಹಿನ್ನಲೆಯಲ್ಲಿ ನಡೆದ ಬೆಳಗಾವಿ ಸಭೆಯಲ್ಲಿ ಲಿಂಗಾಯತರ ವಿರುದ್ಧ ಹೋರಾಡಲು ಕ್ಷತ್ರಿಯರು ಬೇಕೆಂದು ಸೂಲಿಬೆಲೆ ಕರೆ ಕೊಟ್ಟಿದ್ದ ವಿಡಿಯೋ ವೈರಲ್ ಆಗಿತ್ತು.

ನೀವು ಹಿಂದು ಸಮಾವೇಶ ಮಾಡಕೊಳ್ಳಿ ಮತ್ತೆನಾದರೂ ಮಾಡಕೊಳ್ಳಿ ನಮಗೆ ಅಭ್ಯಂತರ ಇಲ್ಲ ಆದರೆ ಗುರು ಬಸವಣ್ಣನವರ ಬಸವಾದಿ ಶರಣರ ಬಗ್ಗೆ ಏನಾದರೂ ಅವಹೆಳನವಾದರೆ ರಾಷ್ಟ್ರೀಯ ಬಸವ ದಳದ ಕಾರ್ಯಕರ್ತರು ಸುಮ್ಮನೆ ಇರಲ್ಲ ಇದು ನಿಮ್ಮ ತೆಲೆಯಲ್ಲಿ ಇರಲಿ ಅಷ್ಟೇ
ನೂರಕ್ಕೆ ನೂರು ಸತ್ಯ ಸತ್ಯ ಸತ್ಯ ಶರಣರೇ,ಶರಣು ಶರಣಾರ್ಥಿಗಳು
ಜೈ ಲಿಂಗಾಯತ ಜೈ ಬಸವಣ್ಣ ಜೈ ಬಸವಧರ್ಮ ಜೈ ಕನ್ನಡಧರ್ಮ
ಬಸವಣ್ಣ, ಅಲ್ಲಮ, ಅಕ್ಕ ಮಹಾದೇವಿ, ಚೌಡಯ್ಯ, ಹರಳಯ್ಯ, ಮಾಚಿದೇವ ರಂತಹ 770 ಅಮರ ಗಣಂಗಳ ಹೆಸರು ತೆಗೆದುಕೊಂಡು ಸಮಾವೇಶ ಮಾಡುವುದು ಅದಲ್ಲಿ ಸಮಾವೇಶದಲ್ಲಿ 90% ಲಿಂಗಾಯತರು ಇರಬೇಕು.
ಸಮಾವೇಶದಲ್ಲಿ ವಚನ ಪಠಣ ಮತ್ತು ವಿಶ್ಲೇಷಣೆ ಮಾಡಬೇಕು
ಲಿಂಗಾಯತ ಧರ್ಮದ, ಶರಣರ ಸಮಾವೇಶದಲ್ಲಿ ಅನ್ಯ ಧರ್ಮದವರಿಗೆ ನು ಕೆಲಸ❓
ವೇದಗಳ, ಭಗವದ್ಗೀತೆಯ ಕಾರ್ಯಕ್ರಮದಲ್ಲಿ ಲಿಂಗಾಯತರಿಗೆ ಪ್ರಾಮುಖ್ಯತೆ ಇರುತ್ತದೆಯೇ?
ವಿವೇಕಾಶೂನ್ಯ ಇಂತಹ ಸ್ವಾಮೀಜಿಗಳಿಂದ ಲಿಂಗಾಯತ ಧರ್ಮದ ಮಾನ್ಯತೆಗೆ ತಡೆ ಒಂದು ಕಡೆಯಾದರೆ. ಮತ್ತೊಂದು ಕಡೆ ಬಸವಾದಿಶರಣರ ಹೆಸರು ದೇಶಾದ್ಯಂತ ಪ್ರಚಾರಕ್ಕೆ ಬರುತ್ತದೆ ಎ೦ಬುದು ಖುಷಿಯ ವಿಚಾರ. ಆದರೆ ಇವರು ಏನೇ ಮಾಡಿದರು ಸಸರ್ವಶ್ರೇಷ್ಠ ಶರಣ ಚಿಂತನೆ ವಿಶ್ವಕ್ಕೆ ಹರಡುತ್ತಿದೆ.ಲಿಂಗಾಯತ ಧರ್ಮದ ಮುನ್ನೆಲೆಯ ರಾಜಕೀಯ ನಾಯಕರನ್ನ ಟಾರ್ಗೆಟ್ ಅದರಲ್ಲಿಯೂ ಎಂ.ಬಿ.ಪಾಟೀಲರನ್ನ ಟಾರ್ಗೆಟ್ ಮಾಡುತಿದ್ದಾರೆ ಇವರು ಏನೇ ಟಾರ್ಗೆಟ್ ಮಾಡಿದರೂ ಸಹ ಪಾಟೀಲರನ್ನ ಲಿಂಗಾಯತ ಧರ್ಮದ ಮುಖಂಡತ್ವದಿಂದ ಕೆಳ ಮಾಡಲು ಸಾಧ್ಯವಿಲ್ಲ
.ಸೂಲೆಬೆಲೆ ಮಾತು ಕೇಳಿಕೊಂಡು ದಾರಿತಪ್ಪುತ್ತಿರುವ ಇಂತಹ ಸ್ವಾಮೀಜಿಗಳ ವಿವೇಕಶೂನ್ಯಕ್ಕೆ ದಿಕ್ಕಾರವಿರಲಿ