ಲಿಂಗಾಯತ ಧರ್ಮದ ಮೇಲೆ ಸಂಘಟಿತ ರಾಜಕೀಯ ದಾಳಿ

ಬೆಂಗಳೂರು

ಕನ್ನೇರಿ ಸ್ವಾಮಿಯ ನಡೆ ನುಡಿ ಲಿಂಗಾಯತ ಸಮಾಜದಲ್ಲಿ ಕೇವಲ ಅಸಮಾಧಾನವನ್ನಷ್ಟೇ ಅಲ್ಲ, ಒಂದು ಆತಂಕವನ್ನೂ ಹುಟ್ಟುಹಾಕಿದೆ.

ಹಣೆಗೆ ಕುಂಕುಮ ಹಚ್ಚಿಕೊಂಡು ‘ವೀರಶೈವ–ಲಿಂಗಾಯತ ಎಲ್ಲವೂ ಹಿಂದೂ ಧರ್ಮದೊಳಗೇ ಬರುತ್ತವೆ, ಬಸವತತ್ವ ಬಿಟ್ಟು ಕೆಲವರು ಹೊಸ ಧರ್ಮ ಕಟ್ಟಲು ಹೊರಟಿದ್ದಾರೆ; ಅವರ ಮಾತ ಕೇಳಬೇಡಿ” ಎಂದು ಕನ್ನೇರಿ ಸ್ವಾಮಿ ಮತ್ತೆ ಮತ್ತೆ ಹೇಳುತ್ತಿರುವುದು ಲಿಂಗಾಯತ ಧರ್ಮ, ಇತಿಹಾಸದ ಮೇಲೆ ನಡೆಯುತ್ತಿರುವ ಸಂಘಟಿತ ರಾಜಕೀಯ ದಾಳಿಯನ್ನು ತೋರಿಸುತ್ತದೆ.

12ನೇ ಶತಮಾನದಲ್ಲೇ ಬಸವಾದಿ ಶರಣರು ವೇದಾಧಾರಿತ ಧರ್ಮವನ್ನು ಪ್ರಶ್ನಿಸಿದರು. ಆಗಮಾಧಾರಿತ ಶೈವಾಚಾರಗಳನ್ನು ತಿರಸ್ಕರಿಸಿದರು. ಬಸವಣ್ಣ ಆಸಮಾನತೆಯಿಂದ ಕೂಡಿದ ವೈದಿಕರ ಯಜ್ಞೋಪವೀತವನ್ನು ಕಿತ್ತೆಸೆದು ಇದಕ್ಕೆ ಪರ್ಯಾಯವಾಗಿ ಮೇಲು ಕೀಳೆನ್ನದೆ ಎಲ್ಲರಿಗೂ ಇಷ್ಟಲಿಂಗ ಧಾರಣೆ ಮಾಡಿ ನಿಮ್ಮ ದೇಹವೇ ದೇವಾಲಯ ಎಂದರು. ಆ ಮೂಲಕ ದೇವಾಲಯ ಕೇಂದ್ರಿತ ಧರ್ಮವನ್ನು ಒಡೆದುಹಾಕಿದರು.

ಬ್ರಾಹ್ಮಣ ಪೌರೋಹಿತ್ಯಕ್ಕೆ ಸವಾಲು ಹಾಕಿದರು. ಜನ್ಮಾಧಾರಿತ ವರ್ಣಾಶ್ರಮವನ್ನು ತಳ್ಳಿಹಾಕಿದರು. ಇಷ್ಟೆಲ್ಲಾ ಆದರೂ ಕನ್ನೇರಿ ಶ್ರೀಗಳು ‘ಇದು ಹಿಂದೂ ಧರ್ಮದ ಒಳಗಿನ ಸುಧಾರಣೆ’ ಎಂದು ಹೇಳುವುದು ಇತಿಹಾಸದ ಮೇಲಿನ ಅತ್ಯಾಚಾರ ಅಲ್ಲವೇ?

ಒಂದು ಧರ್ಮ ತನ್ನ ಮೂಲ ಆಚರಣೆಗಳನ್ನೇ ತಿರಸ್ಕರಿಸಿದರೆ ಅದು ಸುಧಾರಣೆಯೇ? ಅಥವಾ ಹೊಸ ಧಾರ್ಮಿಕ ಪರಿಕಲ್ಪನೆಯೇ?

ಇಷ್ಟಲಿಂಗ ಹಿಂದೂ ಧರ್ಮದೊಳಗೆ ಸಿಗದ ತತ್ವ. ಇಷ್ಟಲಿಂಗ ಪೂಜಿಸುವವರಿಗೆ ದೇವಾಲಯವಿಲ್ಲ, ಅರ್ಚಕರೆಂಬ ಮಧ್ಯವರ್ತಿಗಳಿಲ್ಲ, ಜಾತಿ ಇಲ್ಲ, ಮೇಲಿನವ–ಕೆಳಗಿನವ ಎಂಬ ಹೇರಿಕೆ ಇಲ್ಲ. ಲಿಂಗಧಾರಣೆ ಮಾಡಿದ ಕ್ಷಣದಿಂದಲೇ ಇಲ್ಲಿ ಎಲ್ಲರೂ ಸಮಾನರು. ಈ ತತ್ವ ವೇದಗಳಲ್ಲಿ, ಆಗಮಗಳಲ್ಲಿ, ಪುರಾಣಗಳಲ್ಲಿಯೂ ಇಲ್ಲ.

ಜಾಗತಿಕ ಲಿಂಗಾಯತ ಮಹಾಸಭೆಯೂ ಸೇರಿದಂತೆ ಎಲ್ಲ ಬಸವಪರ ಸಂಘಟನೆಗಳ ನಿಲುವನ್ನು ವಕ್ರವಾಗಿ ಪ್ರದರ್ಶಿಸಲಾಗುತ್ತಿದೆ. ಲಿಂಗಾಯತ ಮುಖಂಡರು ಈ ಮೊದಲಿನಿಂದಲೂ ಅಸ್ತಿತ್ವದಲ್ಲಿ ಇರುವ ವೀರಶೈವ ಲಿಂಗಾಯತವನ್ನು ಒಡೆಯುವ ಮೂಲಕ ಹೊಸ ಧರ್ಮ ಕಟ್ಟುತ್ತಿದ್ದಾರೆ” ಎಂಬ ನಿರಂತರ ಅಪಪ್ರಚಾರ ನಡೆಯುತ್ತಿದೆ.

ಬಸವಪರ ಸಂಘಟನೆಗಳು ಪ್ರತಿಪಾದಿಸುತ್ತಿರುವುದು ಒಂದೇ ನಿಲುವನ್ನು. ಲಿಂಗಾಯತ ಧರ್ಮ ಈಗ ಹುಟ್ಟಿದದ್ದಲ್ಲ. ಇದು 12ನೇ ಶತಮಾನದಲ್ಲೇ ಸ್ವತಂತ್ರವಾಗಿ ಅಸ್ತಿತ್ವಕ್ಕೆ ಬಂದಿದೆ. ನಾವು ಹೊಸ ಧರ್ಮ ಕಟ್ಟುತ್ತಿಲ್ಲ. ಇರುವ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಕೇಳುತ್ತಿದ್ದೇವೆ.

ಹಿಂದುತ್ವ ಶಕ್ತಿಗಳು ನೇರವಾಗಿ ಬಸವಣ್ಣನ ವಿರುದ್ಧ ಮಾತನಾಡಲು ಸಾಧ್ಯವಿಲ್ಲ. ಆದ್ದರಿಂದ ಪಂಚಾಚಾರ್ಯ ಪರಂಪರೆಯ ಶೈವ ಮಠಾಧಿಪತಿಗಳನ್ನು ವೇದಿಕೆಗೆ ತರುತ್ತಿವೆ. ಲಿಂಗಾಯತರನ್ನೇ ಲಿಂಗಾಯತರ ವಿರುದ್ಧ ನಿಲ್ಲಿಸುತ್ತಿವೆ. ಇದು ಯಾವುದೇ ಧರ್ಮ ರಕ್ಷಣೆ ಅಲ್ಲ. ಇದು ಇಷ್ಟಲಿಂಗಧಾರಿಗಳ ಧರ್ಮದೊಳಗಿನ ರಾಜಕೀಯ ವಿಭಜನೆ.

ಬಸವಣ್ಣ ಎಂದಿಗೂ ಪಂಚಾಚಾರ್ಯ ವ್ಯವಸ್ಥೆಯನ್ನು ಅಂಗೀಕರಿಸಲಿಲ್ಲ. ಅವರು ವ್ಯಕ್ತಿಕೇಂದ್ರಿತ ಧರ್ಮವನ್ನು ಪ್ರತಿಪಾದಿಸಿದರು. ಇದನ್ನು ಮರೆಸಿ, ಪಂಚಾಚಾರ್ಯ ಪರಂಪರೆಯ ಹೆಸರಿನಲ್ಲಿ ಲಿಂಗಾಯತ ಧರ್ಮವನ್ನು ಹಿಂದೂ ಚೌಕಟ್ಟಿಗೆ ತಳ್ಳುವುದು ಬಸವ ದ್ರೋಹವಲ್ಲದೆ ಮತ್ತೇನು?

ಹಿಂದೂ ಮೂಲಭೂತವಾದಿಗಳು ವೀರಶೈವ ಮತ್ತು ವಚನಗಳನ್ನು ಪಚನ ಮಾಡಿಕೊಳ್ಳಲಾಗದೇ ರಾಯರ ವಿಗ್ರಹವನ್ನು ತಲೆ ಮೇಲೆ ಹೊತ್ತು ಮೆರೆದಾಡುವ ವಚನಾನಂದ ಹಾಗೂ ಕುಂಕುಮ ಬೊಟ್ಟಿನ ಶೃಂಗಾರ ಮಾಡಿಕೊಳ್ಳುವ ಕನ್ನೇರಿ ಸ್ವಾಮಿಗಳಂತಹವರನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ ಅಷ್ಟೆ!

ಆದರೆ ಈ ಪ್ರಯತ್ನಗಳು ವಿಫಲವಾಗುತ್ತವೆ ಎನ್ನುವುದರಲ್ಲಿ ಸಂದೇಹವೇ ಬೇಡ. ಕುಂಕುಮ ಹಚ್ಚುವುದರಿಂದ ಇಷ್ಟಲಿಂಗ ಮಾಯವಾಗುವುದಿಲ್ಲ. ಹಿಂದುತ್ವ ಘೋಷಣೆಯಿಂದ ವಚನಗಳ ಧ್ವನಿ ಮೌನವಾಗುವುದಿಲ್ಲ.

ಲಿಂಗಾಯತ ಧರ್ಮವನ್ನು ಉಳಿಸಿಕೊಂಡು ಬಂದವರು ಯಡಿಯೂರಪ್ಪ, ಶೆಟ್ಟರ್, ಬೊಮ್ಮಾಯಿ, ಜೊಲ್ಲೆ, ಯತ್ನಾಳ, ಖಂಡ್ರೆ ಕುಟುಂಬಗಳಲ್ಲ.

ಬಸದ ಧರ್ಮವನ್ನು ಕಾಪಾಡಿಕೊಂಡು ಬಂದವರು ವಚನಗಳನ್ನು ಪಾಲಿಸುತ್ತಿರುವ ಇಷ್ಟಲಿಂಗಧಾರಿ ಬಡ ಲಿಂಗಾಯತ ಧರ್ಮೀಯರು. ಜಗತ್ತಿನೆಲ್ಲೆಡೆಯ ಬಸವಾಭಿಮಾನಿಗಳು. ಇತಿಹಾಸದ ಉದ್ದಕ್ಕೂ ಅವರನ್ನು ದಾರಿ ತಪ್ಪಿಸಲು ಬಂದು ಸೋತವರೇ ಹೆಚ್ಚು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HxAWJ403uVgK5HFZlxTVut

Share This Article
11 Comments
  • ವಿರಸವ ತಾಳಿದವ
    ಸುಖ ಸುಮ್ಮನೆ
    ವರಸೆ ತೆಗೆದಿದ್ದಾನೆ
    ಬಾಯಿ ಬಾಯಿ ಬಡೆದು
    ಕೊಳ್ಳುತಿಯನು.
    ಅದು ಮತ್ತಾವದು ಅಲ್ಲ
    ವಿರಶವ.
    ಲಿಂಗಾಯತವನು
    ಅರಗಿಸಿ ಕೊಳ್ಳಲಾಗದ
    ರಣಹೇಡಿ ಪಲಾಯನವಾದಿ
    ಕುಂಡಿಚಿವುಟುವುದನ್ನು
    ಬಿಟ್ಟು, ಮತ್ತೇನು ಮಾಡುತಿಲ್ಲ.
    ಸಂಘಿ ಗುಲಾಮರ ಮಾತು ಕೇಳಿ
    ತನ್ನ ತನವನೆ ಮಾರಿ ಕೊಳ್ಳುತಿದೆ.
    ಇನ್ನಾದರು ಎಚ್ಚೆತ್ತು ಕೊಳ್ಳಿ
    ತಾಕತ್ತಿದ್ದರೆ, ನೀವು ಕೂಡ
    ಧರ್ಮದ ಮಾನ್ಯತೆ ಪಡೆಯಿರಿ
    ನಮ್ಮದೇನು ಅಭ್ಯಂತರವಿಲ್ಲ.
    ಇಲ್ಲದಿದ್ದರೆ, ಸುಮ್ಮನೆ
    ಲಿಂಗಾಯತಕೆ ಬೆಂಬಲಿಸಿ
    ಒಗ್ಗಟ್ಟಿನಲ್ಲಿ ಬಲವಿದೆ.
    ಆಗದಿದ್ದರೆ, ಹಿಂದೂಗಳಡಿ
    ಗುಲಾಮರಾಗಿ ಬಾಳಿ.
    ಅದಕ್ಕೂ‌‌, ಕೂಡ
    ನಮ್ಮದೇನು ಅಭ್ಯಂತರವಿಲ್ಲ.
    ಜೈ ಬಸವ ಜೈ ಲಿಂಗದೇವ
    ಭಾರತ ದೇಶ ಜೈ ಬಸವೇಶ

  • Thannadalladannu thandu thane srustisidhu antha samaja samajada mugda mansugalannu hadi thappisuthiruvudhu, samajadalli biruku modisuthiruvudhu yedhu kanuthade, yentha viparyasa yendre evara samrthabegaku nodidare evaru budivanthari??????

    • IDDADDU IDDANGE HELIDARE KELAVARIGE YEDEGE YEDDUBANDU GUDDIDANGE AAGUTTE! YENOO MAADOKE. AAGOLLA!

      • Yestamattige rajakiya maduthidera endare basvanna navra kiyalli namma karnatakada bavuta vannu kotidere, avrige adra kalpaneyu eralilla venisuthade edralle gothaguthade hagli bidi, janarige helbodu athava daddarige thilisi helabhavudu e edabidangi galige yenu madokagalla

      • ಇನ್ನೂ ಸುಮ್ಮನೆ ಪಾಠ ಹೇಳಿಕೊಂಡು ಸರಿಮಾಡುವ ಪ್ರಯತ್ನಗಳು ಪಲಿಸುವುದಿಲ್ಲ. ಇಂತಹವರಿಗೆ ಬುದ್ದಿಕಲಿಸಲು ಕಾನೂನಿನಲ್ಲಿ ಅವಕಾಶ ಇದೆ. ಕಾನೂನು ಹೋರಾಟ ಶುರುಮಾಡೋಣ. ನಾವು ಸಹ ಕೈಜೋಡಿಸುತ್ತೇವೆ

  • ಮೆಜಾರಿಟಿ ಯಾವ ಕಡೆ ಇದೆ ಅತ್ತ ಕಡೆ ಕನ್ನೇರಿ ಮತ್ತು ವಚಾನಂದ ಸ್ವಾಮಿ ನಡೆ.
    ನಮಗೆ ಬಸವಣ್ಣ ಒಂದು ದೊಡ್ಡ ಮೆಜಾರಿಟಿ

  • Only one point.
    Lord shiva is the only lord of Lingayst.
    Lord Shiva is a vedic good praised in centre of Yajurveda which is much older than basava tatva and the oldest dharma text .

    If you ditched Veda than you ditched Lord Shiva. If your tatva can survive without praying to lord Shiva than call yourselves as a separate Dharma. Or stop praying to Lord Shiva and pick a new God for your Dharma.

  • Rudra not Shiva was worshipped in the Vedic age.

    Rudra was a marginal animalistic, nature god

    Puranic Shiva, the way you understand, evolved much between 4th and 6th century.

    Sharanas rejected the Puranic Shiva, the one who lives in Kailasa.

    In history Shiva was also a generic name for the divine force. Ramanujacharya also used it in this sense. Sharanas also did the same.

    Please read, understand. Remove misconceptions about Lingayat religion.

    • Hindutva is not a religion its way if life. No aadi no antya. Earlier Britishers trued to divude and rule us. Now qe have only taken that task. Please realise and wake up

  • ವೇದಗಳಲ್ಲಿ ಬರುವ ರುದ್ರ, ಕೈಲಾಸಧಿಪತಿ ಶಿವ, ವೀರಶೈವರ ಸ್ಥಾವರ ಲಿಂಗ ಇವ್ಯಾವೂ ಇಷ್ಟಲಿಂಗದ ಪರಿಕಲ್ಪನೆಯಲ್ಲಿನ ಶಿವನಲ್ಲ. ಸುಮ್ಮನೆ ಹೇಳಿದ್ದನ್ನೇ ಹೇಳುತ್ತಾ ಚರ್ಚಿಸಿದ್ದನ್ನೇ ಚರ್ಚಿಸುತ್ತಾ ಸಮಯ ವ್ಯರ್ಥ ಮಾಡುವುದಕ್ಕಿಂತ ನಿಮ್ಮ ನಿಮ್ಮ ನಂಬಿಕೆಯಂತೆ ಆಚರಿಸಿಕೊಳ್ಳಿ. ಆದ್ರೆ, ಲಿಂಗಾಯತರನ್ನು ಅವರಿಷ್ಟಕ್ಕೆ ಅವರನ್ನು ಬಿಡಿ. ಬಸವಣ್ಣನವರ ಇಷ್ಟಲಿಂಗದ ಪರಿಕಲ್ಪನೆ ನಿಮಗೆ ಅರ್ಥವಾಗುವುದಿಲ್ಲ.

Leave a Reply

Your email address will not be published. Required fields are marked *