ನ್ಯಾಮತಿ:
ತಾಲೂಕು ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ತಾಲೂಕು ರಾಷ್ಟ್ರೀಯ ಬಸವದಳ ಸಂಯುಕ್ತಾಶ್ರಯದಲ್ಲಿ ಜನವರಿ 25 ಭಾನುವಾರ ಶ್ರೀ ಮಹಾಂತೇಶ್ವರ ಕಲ್ಯಾಣ ಮಂಟಪದಲ್ಲಿ ಒಂದು ದಿನದ ಶರಣ ತತ್ವ ಕಮ್ಮಟವನ್ನು ಹಮ್ಮಿಕೊಳ್ಳಲಾಗಿದೆ.
ನಾಡಿನ ಅನುಭಾವಿಗಳಾದ ಸಿಂಧನೂರಿನ ಪಿ. ರುದ್ರಪ್ಪ ಅವರು “ಕಾಣುವ ದೃಷ್ಟಿ ಮಿತವೇ, ಸೃಷ್ಟಿಯ ಬಗ್ಗೆ ಶರಣರ ನಿಲುವು, ಶರಣರ ಆರಾಧನಾ ಮಾರ್ಗ, ಇತರೆ ಮಾರ್ಗಗಳಿಂದ ಬಸವ ಪಥ ಹೇಗೆ ಭಿನ್ನ?, ಬಸವಣ್ಣ ಯಾರು? ಹಾಗೂ ವಚನಾಧಾರಿತ ವಿಶ್ಲೇಷಣೆ”ವಿಷಯಗಳ ಬಗ್ಗೆ ತಿಳಿಸಲಿದ್ದಾರೆ.
ಹುಬ್ಬಳ್ಳಿಯ ಶರಣ ತತ್ವ ಪ್ರಚಾರಕರಾದ ಕರವೀರಶೆಟ್ಟರ ಅವರು ಇಷ್ಟಲಿಂಗ ಸ್ವರೂಪದ ಬಗ್ಗೆ ತಿಳಿಸಲಿದ್ದಾರೆ. ಹೊಸಪೇಟೆಯ ಬಸವ ಕೃಪಾನಿಧಿ ಆಶ್ರಮದ ಬಸವಕಿರಣ ಅವರು ಆಧ್ಯಾತ್ಮ ಸಾಧನೆಯಲ್ಲಿ ಪಂಚಾಚಾರಗಳ ಅವಶ್ಯಕತೆ ಕುರಿತಾಗಿ ವಿಷಯ ಮಂಡಿಸಲಿದ್ದಾರೆ.
ಅಂದು ಮುಂಜಾನೆ 9 ಗಂಟೆಗೆ ಕಮ್ಮಟದ ಉದ್ಘಾಟನೆಯು ಶರಣ ಎಸ್.ಆರ್ ಬಸವರಾಜಪ್ಪ ಅವರ ಅಧ್ಯಕ್ಷತೆಯಲ್ಲಿ ಜರುಗುವುದು. ದಾವಣಗೆರೆ ಜಿಲ್ಲಾ ರಾಷ್ಟ್ರೀಯ ಬಸವದಳ ಅಧ್ಯಕ್ಷ ನಾರೇಶಪ್ಪ ಉಪಸ್ಥಿತರಿರುವರು. ಹಾಗೂ ಅಜ್ಜಂಪುರಶೆಟ್ರು ಸೇವಾ ಟ್ರಸ್ಟ್ ಕಾರ್ಯದರ್ಶಿಗಳಾದ ಶರಣ ಷಡಕ್ಷರಿ ಅಜ್ಜಂಪುರ ಶೆಟ್ರು ಕಮ್ಮಟವನ್ನು ಉದ್ಘಾಟಿಸಲಿದ್ದಾರೆ. ನ್ಯಾಮತಿ ತಾಲೂಕು ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಹೆಚ್. ಮಹೇಶ್ವರಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಲ್ಲಿದ್ದಾರೆ.
ಕಮ್ಮಟದಲ್ಲಿ 45 ನಿಮಿಷದ ವಿಷಯ ಮಂಡನೆ, ನಂತರ ಪ್ರತಿ ವಿಷಯದ ಮೇಲೆ ಸಂವಾದ ಏರ್ಪಡಿಸಲಾಗಿದೆ.
ಸಂಜೆ 5ಗಂಟೆಗೆ ತಾಲೂಕು ರಾಷ್ಟ್ರೀಯ ಬಸವದಳದ ಅಧ್ಯಕ್ಷ ನಾಗರಾಜ್ ಸಿ.ವಿ. ಅವರ ಅಧ್ಯಕ್ಷತೆಯಲ್ಲಿ ದಾವಣಗೆರೆ ಬಸವ ಬಳಗದ ಅಧ್ಯಕ್ಷರಾದ ಶರಣೆ ಭುವನೇಶ್ವರಿ ತಾಯಿ ಇವರ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭ ಜರುಗಲಿದೆ.
“ಜಾತಿ ಲಿಂಗ ಪಂಥ ಭೇದ ಇರದೇ”ಆಸಕ್ತರು ಭಾಗವಹಿಸಲು ತಮ್ಮ ಹೆಸರು ನೊಂದಾಯಿಸುವ ಮೂಲಕ ದೃಢೀಕರಿಸಲು ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಕೋರಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಮೊ.ನಂ: 9380174923 ಸಂಪರ್ಕಿಸಲು ಕೋರಲಾಗಿದೆ.

