ಬಸವೇಶ್ವರ ದ್ವಾದಶ ಸೂತ್ರಗಳು ಕುರಿತು ಬೆಳಗಾವಿಯಲ್ಲಿ ಉಪನ್ಯಾಸ

ಬೆಳಗಾವಿ:

ಬಸವೇಶ್ವರರ ದ್ವಾದಶ ಸೂತ್ರಗಳು ಮಾನವ ಜೀವನಕ್ಕೆ ದಾರಿ ತೋರಿಸುವ ಮೌಲ್ಯಯುತ ಸಂದೇಶಗಳಾಗಿದ್ದು, ಅವು ಸಾಮಾಜಿಕ ಸಮಾನತೆ, ದಾಸೋಹ ಮತ್ತು ಕಾಯಕ ತತ್ವಗಳ ಮಹತ್ವವನ್ನು ಸಾರಿ ಹೇಳುತ್ತವೆ ಎಂದು ಶರಣ ಯು.ಎನ್. ಸಂಗನಾಳಮಠ ಅವರು ಹೇಳಿದರು.

ಲಿಂಗಾಯತ ಸಂಘಟನೆ ವತಿಯಿಂದ ರವಿವಾರ ಫ.ಗು. ಹಳಕಟ್ಟಿ ಭವನದಲ್ಲಿ ನಡೆದ ವಾರದ ಪ್ರಾರ್ಥನೆ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಶಿಭೂಷಣ ಪಾಟೀಲ, ಸದಾಶಿವ ದೇವರಮನಿ, ಶಂಕರ ಗುಡಸ, ಸುನoದಾ ಮಹದೇವ ಕೆಂಪಿಗೌಡ್ರ, ನೇತ್ರಾ ರಾಮಾಪೂರಿ, ವಿದ್ಯಾ ಕರಕಿ, ಶಾಂತಾ ಕoಬಿ, ನಂದಾ ಬಗಲಿ, ಶಿವಲೀಲಾ ಗೌಡರ, ಬಸವರಾಜ ಕರಡಿಮಠ, ಸುಧೀರ ರಘಶೆಟ್ಟಿ, ಬಸವರಾಜ ಬಿಜ್ಜರಗಿ, ಲಕ್ಸ್ಮಿಕಾoತ ಗುರವ, ಶಿವಾನಂದ ನಾಯಕ, ಪ. ಬ. ಕರಿಕಟ್ಟಿ, ಚಂದ್ರಪ್ಪ ಅoಗಡಿ, ಶಿವಾನoದ ತಲ್ಲೂರ, ಮ. ಬ. ಕಾಡೆ, ಆನಂದ ಕರಕಿ, ವಿ.ಕೆ. ಪಾಟೀಲ, ಮಹಾದೇವಿ ಅರಳಿ, ಜೆ.ಪಿ. ಜವಣಿ, ಮೋಹನ ಗುಂಡ್ಲೂರ ಹಾಗೂ ಬಸವರಾಜ ಇಂಚಲ ಅವರು ವಚನಗಳ ಕುರಿತು ವಿಶ್ಲೇಷಣೆ ಮಾಡಿದರು.

ಇದೇ ಸಂದರ್ಭದಲ್ಲಿ ಲಿoಗೈಕ್ಯ ಶ್ರೀ ಭೀಮಣ್ಣ ಖಂಡ್ರೆ ಅವರಿಗೆ  ಲಿಂಗೈಕ್ಯ ಕರುಣಿಸಲೆಂದು ಪ್ರಾಥಿ೯ಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಈರಣ್ಣ ದೇಯಣ್ಣವರ ವಹಿಸಿದ್ದರು.

ಅತಿಥಿಗಳ ಪರಿಚಯವನ್ನು ಎಂ.ವೈ. ಮೆಣಸಿನಕಾಯಿ ಮಾಡಿದರು. ಸoಗಮೇಶ ಅರಳಿ ಕಾಯ೯ಕ್ರಮ ನಿರೂಪಿಸಿದರು. ಮಂಜುನಾಥ ಅಂಗಡಿ ಅವರು ದಾಸೋಹ ಸೇವೆಗೈದರು. ಕಾರ್ಯಕ್ರಮದಲ್ಲಿ ಸ.ರಾ. ಸುಳಕೂಡೆ, ಗುರುಸಿದ್ದಪ್ಪ ರೇವಣ್ಣವರ ಸೇರಿದಂತೆ ಅನೇಕ ಶರಣರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FoRS2gZkHkaEzqaRtWk0ZP

Share This Article
Leave a comment

Leave a Reply

Your email address will not be published. Required fields are marked *