ಅಧ್ಯಕ್ಷರ ಆಯ್ಕೆಗೆ ಇಂದು ವೀರಶೈವ ಮಹಾಸಭಾದ ಮಹತ್ವದ ಸಭೆ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ಅಖಿಲ ಭಾರತ ವೀರಶೈವ ಮಹಾಸಭಾದ ಕಾರ್ಯಕಾರಿ ಸಮಿತಿಯ ಸಭೆಯನ್ನು ಮಂಗಳವಾರ ನಗರದಲ್ಲಿ ಕರೆಯಲಾಗಿದೆ.

ಶಾಮನೂರು ಅವರು ಲಿಂಗೈಕ್ಯರಾದ ನಂತರ ತೆರವಾದ ರಾಷ್ಟ್ರೀಯ ಅಧ್ಯಕ್ಷರ ಸ್ಥಾನಕ್ಕೆ ಸೂಕ್ತವಾದ ವ್ಯಕ್ತಿಯನ್ನು ತರುವ ಜವಾಬ್ದಾರಿ ಸಮಿತಿಯ 65 ಸದಸ್ಯರ ಮೇಲಿದೆ.

ಸ್ಪರ್ಧೆಯ ಮುಂಚೂಣಿಯಲ್ಲಿರುವ ಸಚಿವ ಈಶ್ವರ ಖಂಡ್ರೆ ಹಾಗೂ ಪ್ರಬಲ ಸ್ಪರ್ಧಿಯೆಂದು ಬಿಂಬಿತವಾಗಿರುವ ಉದ್ಯಮಿ ಪ್ರಭಾಕರ ಕೋರೆ ಒಮ್ಮತದ ಅಭ್ಯರ್ಥಿಯ ಆಯ್ಕೆಗೆ ಕರೆ ಕೊಟ್ಟಿದಾರೆ.

ಸಮಾಜದಲ್ಲಿ ಬಿರುಕಿಗೆ ಅವಕಾಶ ಕೊಡದೆ ಎಲ್ಲರ ಸಹಮತದಿಂದ ಹೊಸ ಅಧ್ಯಕ್ಷರ ಆಯ್ಕೆಯಾಗಲಿ ಎಂದು ಕೋರೆ ಬಸವ ಮೀಡಿಯಾಗೆ ತಿಳಿಸಿದ್ದರು.

ಆದರೆ ಕೆಲವು ವೈದಿಕ ಮಾಧ್ಯಮಗಳು ಹೊಸ ಅಧ್ಯಕ್ಷರ ಆಯ್ಕೆಗೆ ಚುನಾವಣೆಯ ನಡೆಯಲಿದೆ ಎಂದು ವರದಿ ಮಾಡುತ್ತಿವೆ. ಖಂಡ್ರೆ, ಕೋರೆಯವರ ಜೊತೆ ಯಡಿಯೂರಪ್ಪ, ಸುತ್ತೂರು ಸ್ವಾಮೀಜಿ, ಕೊನೆಗೆ ದಿಂಗಾಲೇಶ್ವರ ಸ್ವಾಮೀಜಿಯ ಹೆಸರನ್ನೂ ಅವು ಸೂಚಿಸಿವೆ.

ಮಹಾಸಭಾದ ಕಾರ್ಯಕಾರಿ ಸಮಿತಿಯ ಸದಸ್ಯರೊಬ್ಬರು ಇದೆಲ್ಲಾ ಕುತಂತ್ರದ ವರದಿಗಳು. ದಿಂಗಾಲೇಶ್ವರ ಸ್ವಾಮೀಜಿಯಿರುವುದು ಭಾವೈಕ್ಯತೆಯ ಮಠ, ಅದು ಲಿಂಗಾಯತ ಮಠವಲ್ಲ. ಅವರು ಹೇಗೆ ಇಲ್ಲಿ ಅಭ್ಯರ್ಥಿಯಾಗಲು ಸಾಧ್ಯ, ಎಂದು ಪ್ರಶ್ನಿಸಿದರು.

“ಇದೆಲ್ಲಾ ಗೊಂದಲವೆಬ್ಬಿಸುವ ಪ್ರಯತ್ನ. ಒಮ್ಮತದ ಅಭ್ಯರ್ಥಿ ಆಯ್ಕೆಯಾಗಿ ಶಾಮನೂರು ಅವರ ಕೆಲಸವನ್ನು ಮುಂದುವರೆಸುವುದು ಕೆಲವು ಲಿಂಗಾಯೇತರ ಸಂಘಟನೆಗಳಿಗೆ ಇಷ್ಟವಿಲ್ಲ. ಅವರಿಗೆ ಪೂರಕವಾದ ಅಭ್ಯರ್ಥಿಯನ್ನು ತರಲು ತೆರೆಮರೆಯ ಹಿಂದೆ ಪ್ರಯತ್ನ ನಡೆದಿರಬಹುದು,” ಎಂದು ಹೇಳಿದರು.

“ಚುನಾವಣೆಯಾದರೆ ಮಹಾ ಪೋಷಕರಾಗಿರುವ ಸುಮಾರು 22,000 ಸದಸ್ಯರಿಗೆ ಮತ ಹಾಕುವ ಅವಕಾಶವಿದೆ. ಇವರ ಮೇಲೆ ಖಂಡ್ರೆ ಕುಟುಂಬದ ಪ್ರಭಾವವಿದೆ. ಆದರೆ ನಾಳೆಯ ಸಭೆಯ ನಂತರವೇ ಸ್ಪಷ್ಟ ಚಿತ್ರಣ ದೊರಕಲಿದೆ,” ಎಂದು ಅವರು ಅಭಿಪ್ರಾಯ ಪಟ್ಟರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FoRS2gZkHkaEzqaRtWk0ZP

Share This Article
10 Comments
  • Eshwar khandre is the most suitable candidate to the post of president. Voters are overwhelmingly in favor of Eshwar khandre.

  • ವೀರಶೈವ ಮಹಾಸಭಾಕ್ಕೂ ಲಿಂಗವಂತರಿಗೂ ಸಂಬಂದ ಇದೆಯೇ? ಲಿಂಗವಂತ ಮತ್ತು ವೀರಶೈವ ಬೇರೆ ಅಲ್ಲವೆ ?

  • ಸುತ್ತೂರು ಸ್ವಾಮಿಗಳು, ತಮ್ಮನ್ನು ತಾವು ಶೈವ ಧರ್ಮದ ಕಾಳಾಮುಖ ವರ್ಗದವರು ಅಂತ ತೋರಿಸಿ ಕೊಳ್ಳುತ್ತಿದ್ದಾರೆ. ಅದೇ ಧರ್ಮದ ಆಚರಣೆ ಮಾಡುತ್ತಿದ್ದಾರೆ. ವಿಭೂತಿ ಬಿಟ್ಟು ಭಸ್ಮ ಧರಿಸುತ್ತಿದ್ದಾರೆ.
    ಅಂದ ಮೇಲೆ ಅವರನ್ನು ಹೇಗೆ ವೀರಶೈವ ಮಹಾಸಭೆ ಅಧ್ಯಕ್ಷರನ್ನಾಗಿ ಆರಿಸುತ್ತಾರೆ❓

  • Mr jamdar or Mr MB patil are most eligible candidates for the post of President. I am a member of veerashaiva mahasabha.

  • ರಂಭಾಪುರಿ ಸ್ವಾಮೀಜಿಯವರ ಅಭಿಪ್ರಾಯದಂತೆ ಜಸ್ಟೀಸ್ ಶಿವರಾಜ್ ಪಾಟೀಲರು ಸೂಕ್ತ ಆಯ್ಕೆ

    • ಪ್ರಭಾಕರ ಕೋರೆ ಅಧ್ಯಕ್ಷರಾಗಲಿ. ಎಲ್ಲ ದೃಷ್ಟಿಯಲ್ಲಿ ಅವರೇ ಇದ್ದರೆ ಉತ್ತಮ.

  • ಮಹಾಸಭಾ ಉಳಿಯಬೇಕಾದರೆ 1940 ರ ಕುಂಭಕೋಣಂ ಅಧಿವೇಶನದ ನಿರ್ಣಯದನ್ವಯ ವೀರಶೈವ ಅಳಿಸಿ ಲಿಂಗಾಯತ ಮಾತ್ರ ಉಳಿಸಬೇಕು….! ಬಸವ ತತ್ವ ಒಪ್ಪದ ಪಂಪೀ ಇತ್ಯಾದಿ ಶೈವದ ಬಾಲಗಳನ್ನು ಅಲ್ಲಾಡಿಸಲು ಸಾಧ್ಯವಾಗದಂತೆ ಕತ್ತರಿಸಬೇಕು. !ಲಿಂಗಾಯತದಲ್ಲಿ ಹಡಪದರು ಅಗಸರು ಅಂಬಿಗರು ಗಾಣಿಗರು ಇತ್ಯಾದಿತ್ಯಾದಿ ಕಾಯಕ ಪ೦ಗಡಗಳಿದ್ದಂತೆ ವೀರಶೈವವೂ ಇರಲಿ. ಅದಕ್ಕೇನೂ ಎತ್ತರದ ಸಿಂಹಾಸನ ದಸರಾ ದರ್ಬಾರ್ ಪಲ್ಲಕ್ಕಿ ಇತ್ಯಾದಿಗಳು ಸೇವೆಗಳು ಬೇಡವೇ ಬೇಡ ! ಲಿಂಗಾಯತ ಮಹಾಸಭೆ ಎ೦ದು ಕರೆದು ಜಾಗತಿಕದ ನಿರ್ದೇಶನದಲ್ಲಿ ನಡೆಯುವಂತೆ ನೋಡಿಕೊಂಡರೆ ಮಾತ್ರ ಉಳಿಯಬಲ್ಲದು! ವೀರಶೈವ … ಶವವಾಗದೆ ಲಿಂಗಾಯತ ಧರ್ಮ ಚಾಮರದಡಿ ಸೇರಿ ಜೀವ ಉಳಿಸಿಕೊಳ್ಳಲಿ!

    • ಈಶ್ವರ ಖಂಡ್ರೆ ಯವರ ಧಾರ್ಮಿಕ ನಿಲುವು ವಿಭಿನ್ನ ವಾಗಿದ್ದು ಕಳೆದ ಸಮೀಕ್ಷೆಯಲ್ಲಿ ಹಿನ್ಡಡೆಯಾಗಿದೆ. ಸದ್ಯದಲ್ಲೇ “ವೀರಶೈವ ಲಿಂಗಾಯತ” ದಿಂದ ಲಿಂಗಾಯತ ಮುಕ್ತವಾಗಿ ವೀರಶೈವ ಮಾತ್ರ ಮುಂದುವರೆಯುವುದು ಖಚಿತ. ಲಿಂಗಾಯತ ಬೇಕಾದರೆ ವೀರಶೈವ ಬಿಟ್ಟು ಲಿಂಗಾಯತ ಸಂಸ್ಥೆ ಆದರೆ ಮಾತ್ರ. ಅಲ್ಲಿನ ಸದಸ್ಯರು ಮೊದಲು ಧರ್ಮದ ಬಗ್ಗೆ ಸ್ಪಷ್ಟ ನಿಲುವ ತೆಗೆದುಕೊಂಡು ನಂತರ ಅದನ್ನು ಒಪ್ಪಿ ಅನುಸರಿಸುವ ಅಧ್ಯಕ್ಷನ ಆಯ್ಕೆ ಮಾಡಲಿ.

  • ಶಿವರಾಜ ಪಾಟೀಲರು ಮಹಾಸಭೆಯ ಅದ್ಯಕ್ಷತೆಯನ್ನು ವಹಿಸಬೇಕು.

Leave a Reply

Your email address will not be published. Required fields are marked *