ಬೆಂಗಳೂರು
‘ವೀರಶೈವ ಲಿಂಗಾಯತ ಜಾಗತಿಕ ಉದ್ಯಮ ಸಮ್ಮೇಳನ’ದಲ್ಲಿ ಶುಕ್ರವಾರ ಭಾಗವಹಿಸಲು ಬರುತ್ತಿರುವ ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಯ ವಿರುದ್ಧ ಪ್ರತಿಭಟಿಸಲು ವಿವಿಧ ಬಸವ ಸಂಘಟನೆಗಳ ಪ್ರತಿನಿಧಿಗಳು ಕರೆ ಕೊಟ್ಟಿದ್ದಾರೆ.
ಜೊತೆಗೆ ಕನ್ನೇರಿ ಸ್ವಾಮಿಯನ್ನು ಬೆಂಗಳೂರಿನಿಂದ ನಿರ್ಬಂಧಿಸಲು ಬೆಂಗಳೂರು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಉದ್ಯಮ ಸಮ್ಮೇಳನ’ದಲ್ಲಿ ಇಂದು ಮಧ್ಯಾಹ್ನ 12ರಿಂದ 1 ಗಂಟೆಯವರಿಗೆ ಪಾಲ್ಗೊಳ್ಳಲು ಕನ್ನೇರಿ ಸ್ವಾಮಿಗೆ ಆಹ್ವಾನ ನೀಡಲಾಗಿದೆ.
“ಬಸವತತ್ವದ ವಿರುದ್ಧವಾಗಿ ನಡೆದುಕೊಳ್ಳುವ ಈ ಸ್ವಾಮಿಯನ್ನು ಕರೆದಿರುವುದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ಬೆಂಗಳೂರಿನ ಬಸವಾಭಿಮಾನಿಗಳು ಬೃಹತ್ ಸಂಖ್ಯೆಯಲ್ಲಿ ಬಂದು ಶಾಂತಿಯುತವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಬೇಕೆಂದು,” ಎಂದು ವಿಶ್ವ ಗುರು ಬಸವಣ್ಣನವರ ಅನುಯಾಯಿಗಳ ಒಕ್ಕೂಟದ ಅಧ್ಯಕ್ಷ ಓಂಕಾರ್ ಚೋಂಡಿ ಕರೆ ನೀಡಿದ್ದಾರೆ.
“ಇದು ಲಿಂಗಾಯತರ ಹೆಸರಿನಲ್ಲಿ ನಡೆಯುತ್ತಿರುವ ಸಮಾವೇಶ. ಇದರ ಮುಖ್ಯ ಪ್ರಯೋಜಕರು ‘ಬಸವೇಶ್ವರ ಹೌಸಿಂಗ್’ ಅನ್ನುವ ಕಂಪನಿ. ಇಲ್ಲಿ ಬಸವಣ್ಣನವರ ಹೆಸರು, ಲಿಂಗಾಯತ ಸಮಾಜ ಬಳಸಿಕೊಂಡು ಲಿಂಗಾಯತರ ಬೆನ್ನಿಗೆ ಚೂರಿ ಹಾಕುವ ಕೆಲಸ ನಡೆಯುತ್ತಿದೆ,” ಎಂದು ಜಾಗತಿಕ ಲಿಂಗಾಯತ ಮಹಾಸಭಾದ ನಿಜಗುಣಮೂರ್ತಿ ಹೇಳಿದರು.
“ಈ ಸಮಾವೇಶಕ್ಕೆ ಕನ್ನೇರಿ ಸ್ವಾಮಿಯನ್ನು ಕರೆಯುವ ಕಾರಣವೇನು? ಇವರು ಬಗ್ಗೆ ಲಿಂಗಾಯತ ಸಮಾಜದಲ್ಲಿ ಏನು ಅಭಿಪ್ರಾಯವಿದೆ ಎಂದು ಸಂಘಟಕರಿಗೆ ತಿಳಿದಿಲ್ಲವೇ. ಕನ್ನೇರಿ ಸ್ವಾಮಿಯ ಅಹ್ವಾನ ಹಿಂದೆ ಪಡೆದರೆ ಸಾಲದು. ಈ ಕುತಂತ್ರಕ್ಕೆ ಸಂಘಟಕರು ಕೂಡಲಸಂಗಮಕ್ಕೆ ಹೋಗಿ ಲಿಂಗಾಯತ ಸಮಾಜದ ಕ್ಷಮೆ ಕೇಳಬೇಕು,” ಎಂದು ಬೆಂಗಳೂರು ಉದ್ಯಮಿ ಶಾಂತಕುಮಾರ ಹರ್ಲಾಪುರ ಕೇಳಿದರು.
ಈ ಜಾಗತಿಕ ಉದ್ಯಮ ಸಮ್ಮೇಳನವನ್ನು ಅಂತರರಾಷ್ಟ್ರೀಯ ಲಿಂಗಾಯತ ಯುವ ವೇದಿಕೆ (iLYF) ಎನ್ನುವ ಹೊಸ ಸಂಘಟನೆ ಆಯೋಜಿಸಿದೆ.
ಬಸವ ಅನುಯಾಯಿಗಳನ್ನು ಬಸವ ತಾಲಿಬಾನ್ ಎಂದು, ಲಿಂಗಾಯತ ಸ್ವಾಮೀಜಿಗಳನ್ನು ಅಶ್ಲೀಲ ಭಾಷೆಯಲ್ಲಿ ನಿಂದಿಸಿ ಕನ್ನೇರಿ ಸ್ವಾಮಿ ಶರಣ ಸಮಾಜದ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಕಾಡಸಿದ್ದೇಶ್ವರ ಮಠ ಬಸವ ಪರಂಪರೆಯ ಮಠ ಎನ್ನುವುದನ್ನು ಮರೆತು ಲಿಂಗಾಯತ ಧರ್ಮದ ವಿರೋಧಿಗಳ ಜೊತೆ ಸ್ವಾರ್ಥಕ್ಕಾಗಿ ಕೈ ಜೋಡಿಸಿದ್ದಾರೆ, ಎಂದು ಬಸವ ಸಂಘಟನೆಗಳು ಆರೋಪಿಸಿವೆ.
ಅವರ ವಿರುದ್ಧ ಪ್ರತಿಭಟನೆ ನಡೆಯಲು ಶುರುವಾಗಿದ್ದರಿಂದ ವಿಜಯಪುರ, ಬಾಗಲಕೋಟೆ ಮತ್ತು ಧಾರವಾಡ ಜಿಲ್ಲೆಗಳಿಂದ ಅವರನ್ನು ಬಹಿಷ್ಕರಿಸಲಾಗಿತ್ತು. ಅದನ್ನು ಪ್ರಶ್ನಿಸಿ ಹೈ ಕೋರ್ಟ್, ಸುಪ್ರೀಂ ಕೋರ್ಟಿಗೆ ಹೋದ ಕನ್ನೇರಿ ಸ್ವಾಮಿಗೆ ನ್ಯಾಯಾಧೀಶರು ಇದು ಸ್ವಾಮೀಜಿಗಳಿಗೆ ಯೋಗ್ಯವಾದ ನಡತೆಯಲ್ಲ ಎಂದು ಚೀಮಾರಿ ಹಾಕಿದ್ದರು.
ಕನ್ನೇರಿ ಸ್ವಾಮಿ: ನಾಳೆ ಪ್ರತಿಭಟನೆ, ಇಂದು ರಾತ್ರಿ ಗೂಗಲ್ ಮೀಟ್
ಕನ್ನೇರಿ ಸ್ವಾಮಿ ವಿರುದ್ಧ ನಾಳೆ ಬೆಂಗಳೂರಿನಲ್ಲಿ ಬಸವ ಸಂಘಟನೆಗಳ ಪ್ರತಿಭಟನೆ ನಡೆಯಲಿದೆ.
ಭಾಗವಹಿಸಲು ಆಸಕ್ತಿಯಿರುವವರು ಇಂದು ರಾತ್ರಿ ಗೂಗಲ್ ಮೀಟ್ ಸಭೆಗೆ ಬರಬೇಕಾಗಿ ಕೋರಲಾಗಿದೆ.
ಸಮಯ
8.30
ದಯವಿಟ್ಟು ಎಲ್ಲಾ ಬಸವ ಭಕ್ತರಿಗೆ ತಲುಪಿಸಿ
ತಮ್ಮ ವಿಶ್ವಾಸಿಗಳಾದ
ಓಂಕಾರ ಚೋಂಡಿ
ಅಧ್ಯಕ್ಷರು,
ವಿಶ್ವಗುರು ಬಸವಣ್ಣನವರ ಅನುಯಾಯಿಗಳ ಸಂಘಟನೆ
9845530982
ಜಗದೀಶ್
ಅಧ್ಯಕ್ಷರು, ರಾಷ್ಟ್ರೀಯ ಬಸವ ದಳ, ಬೆಂಗಳೂರು
9845800177
ಪ್ರೊ. ವೀರಭದ್ರಯ್ಯ
ಅಧ್ಯಕ್ಷರು
ಜಾಗತಿಕ ಲಿಂಗಾಯತ ಧರ್ಮ ಮಹಾಸಭಾ, ಬೆಂಗಳೂರು
9448119625
ಶ್ರೀಶೈಲ ಜಿ ಮಸೂತೆ ಸಂಸ್ಥಾಪಕ ಅಧ್ಯಕ್ಷರು
ನಾಗರಾಜ್ ನಿಂಬರ್ಗೀ ರಾಜ್ಯಾಧ್ಯಕ್ಷರು
ಲಿಂಗಾಯತ ಧರ್ಮ ಅಧ್ಯಯನ ಕೇಂದ್ರ ಬೆಂಗಳೂರು
9901252856
ಕೆ. ಸಿ. ಪಾಟೀಲ್
ಅಧ್ಯಕ್ಷರು ಬಸವ ಬಳಗ ಬೆಂಗಳೂರು
9902669404
ಕೆ. ಬಿ. ಮಹಾದೇವಪ್ಪ,
ಅಧ್ಯಕ್ಷರು ರಾಷ್ಟ್ರೀಯ ವೀರ ಗಣಾಚಾರಿ ಪಡೆ
9845308707

ನಾಳಿನ ಕಾರ್ಯಕ್ರಮವನ್ನ ನಾವುಗಳು ಬಹಿಷ್ಕರಿಸುವುದು ಉತ್ತಮ.
ಅಯೋಗ್ಯ, ನೀಚ, ಗುಲಾಮ ಮನಸ್ಥಿತಿಯ ಒಬ್ಬ ವ್ಯಕ್ತಿಯನ್ನ ಆಹ್ವಾನಿಸಿರುವ ರೋಗಗ್ರಸ್ಥ ಮನಸ್ಸುಗಳಿಗೆ ಬುದ್ಧಿ ಕಲಿಸಲು ಇದು ಒಳ್ಳೆಯ ನಡೆ.
ಶರಣು ಶರಣಾರ್ಥಿ
🙏🏻🙏🏻🙏🏻
ಪದೇ ಪದೇ ಬಸವ ತಾಲಿಬಾನಿಗಳು ಎಂದು ಹೇಳುವ…
ಬಸವತತ್ವ ಸ್ವಾಮೀಜಿ ಗಳನ್ನು ಅಸಂವಿಧಾನ ಪದ ಬಳಕೆ ವಿಚಾರಗಳನ್ನು ಸಂವಿಧಾನಬದ್ನ ನ್ಯಾಯಾಲಯಗಳು, ಖಂಡಿಸಿದರೂ ಕನ್ನೇರಿಯ ಶ್ರೀಗಳ ಈ ರೀತಿ ವರ್ತನೆ ಬಸವತತ್ವ ವಿರೋಧಿಸುವ ರಾಜಕಾರಣಿಗಳ ಸಖ್ಯಾ ಇವೆಲ್ಲವೂ ಇವರನ್ನು ಮತಿಹೀನರೆಂದು ತಿಳಿದು ಬಹಿಷ್ಕರಿಸಬೇಕಾದ ಹೊಣೆಗಾರಿಕೆ ನಮ್ಮ ಮೇಲಿದೆ ವೈಚಾರಿಕತೆ ಇಲ್ಲದ ಖಾಲಿ….ಖಾಲಿ ಮಿದುಳಿನ ಕಾವಿಧಾರಿಗೆ ಇರಲಿ ದಿಕ್ಕಾರ…
👍
👍