ಕನ್ನೇರಿ ಸ್ವಾಮಿ ಪ್ರವೇಶ ನಿಷೇಧಿಸಲು ಬಳ್ಳಾರಿ ಜಿಲ್ಲಾಧಿಕಾರಿಗೆ ಆಗ್ರಹ

ಬಸವ ಮೀಡಿಯಾ
ಬಸವ ಮೀಡಿಯಾ

ಬಳ್ಳಾರಿ

ಕಂಪ್ಲಿ ಹತ್ತಿರದ ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುತ್ತಿರುವ ಬಸವ ವಿರೋಧಿ ಕನ್ನೇರಿ ಸ್ವಾಮಿಯನ್ನು ಜಿಲ್ಲೆಯಿಂದ ನಿಷೇಧಿಸಲು ಜಿಲ್ಲಾಧಿಕಾರಿಗಳಿಗೆ ಬಸವಪರ ಸಂಘಟನೆಗಳು ಮನವಿ ಪತ್ರ ನೀಡಿ ಆಗ್ರಹಿಸಿವೆ.

ಕನ್ನೇರಿ ಸ್ವಾಮಿ ಫೆಬ್ರವರಿ 23 ಕಲ್ಯಾಣ ಚೌಕಿಮಠದ ಕಾಮಧೇನು ಗೋಶಾಲೆಯ ಉದ್ಘಾಟನೆಗೆ ಬರುತ್ತಿದ್ದರೆ. ಅವರ ಭಾಗಿಯಿಂದ ಸಮಾಜದಲ್ಲಿ ಶಾಂತಿಯನ್ನು ಕದಡುವಂತಹ ವಾತಾವರಣ ಸೃಷ್ಟಿಯಾಗುತ್ತದೆಯೆಂದು ಬಸವಪರ ಸಂಘಟನೆಗಳು ಎಚ್ಚರಿಸಿವೆ.

ಮನವಿ ಪತ್ರದಲ್ಲಿ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮಿ ಕೊಲ್ಲಾಪುರ ಹತ್ತಿರ ನಡೆದ ಕಾರ್ಯಕ್ರಮ ಒಂದರಲ್ಲಿ ಬಸವ ತತ್ವದ ಮಠಾಧೀಶರಿಗೆ ಅವಾಚ್ಯ ಶಬ್ದಗಳನ್ನು ಬಳಿಸಿದ್ದರು. ಆ ಹಿನ್ನಲೆಯಲ್ಲಿ ಅವರನ್ನು ವಿಜಯಪುರ ಮತ್ತು ಧಾರವಾಡ ಜಿಲ್ಲೆಗಳಲ್ಲಿ ನಿಷೇಧಿಸಲಾಗಿತ್ತು.

ಇದನ್ನು ಪ್ರಶ್ನಿಸಿ ಕನ್ನೇರಿ ಸ್ವಾಮಿ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ಗಳಲ್ಲಿ ಅಪೀಲ್‌ ಸಲ್ಲಿಸಿದ್ದರು.

ಈ ಕೇಸ್‌ ಅನ್ನು ಅವಲೋಕಿಸಿದ ನ್ಯಾಯಮೂರ್ತಿಗಳು ಸ್ವಾಮೀಜಿಗಳು ಸಮಾಜದ ಘನತೆ ಎತ್ತಿಹಿಡಿಯುವ ಮತ್ತು ಸಾರ್ವಜನಿಕರಿಗೆ ಸನ್ಮಾರ್ಗವನ್ನು ಸೂಚಿಸುವ ರೀತಿಯಲ್ಲಿ ಮಾತನಾಡಬೇಕು.

ಅದನ್ನು ಬಿಟ್ಟು ಗೊಂದಲ ಸೃಷ್ಟಿಸುವ ಮತ್ತು ಅಸಂಬದ್ಧ ಶಬ್ದಗಳನ್ನು ಬಳಿಸಿದ್ದಕ್ಕೆ ಕನ್ನೇರಿ ಸ್ವಾಮಿ “ಮಠದಲ್ಲಿಯೇ ಇದ್ದು, ಪೂಜೆ, ಪ್ರಾರ್ಥನೆ, ಧ್ಯಾನವನ್ನು ಮಾಡಿಕೊಂಡಿರಿ, ನೀವು ಒಳ್ಳೆಯ ಪ್ರಜೆಯಲ್ಲ,” ಎಂದು ಛೀಮಾರಿ ಹಾಕಿದ್ದಾರೆ.

ಈ ಹಿನ್ನಲೆಯಲ್ಲಿ ಕನ್ನೇರಿ ಸ್ವಾಮಿಗೆ ನ್ಯಾಯಾಲದ ತೀರ್ಪಿಗೆ ಅನುಗೂಣವಾಗಿ ಈ ಕಾರ್ಯಕ್ರಮಕ್ಕೆ ಬರದಂತೆ ನಿಷೇಧಿಸಬೇಕು ಎಂದು ಬಸವಪರ ಸಂಘಟನೆಗಳು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರದ ಮೂಲಕ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ರಾಷ್ಟ್ರೀಯ ಬಸವದಳ ರಾಜ್ಯ ಉಪಾಧ್ಯಕ್ಷ ಕೆ.ರವಿಶಂಕರ, ಬಳ್ಳಾರಿ ರಾಷ್ಟ್ರೀಯ ಬಸವದಳ ಕಾರ್ಯಧ್ಯಕ್ಷ ಜಿ.ಆರ್. ನಾಗರಾಜ, ಜಾಗತಿಕ ಲಿಂಗಾಯತ ಮಹಾಸಭಾದ ಕೆ. ಬಸವನಗೌಡ, ಬಸವ ಬಳಗದ ಶಶಿಕುಮಾರ ಸಿರಿಗೇರಿ, ಸಿರಿಗೆರೆ ಮಂಜುನಾಥ ಸಂಡೂರು, ಎಚ್.ಎಸ್. ಶಿವಕುಮಾರ, ಶಿವಶಂಕರ ಪಾಟೀಲ, ವಿಶ್ವನಾಥ, ಪಂಪಾಪತಿ, ಸುರೇಶಗೌಡ, ನಾರಾಯಣಪ್ಪ, ದುರ್ಗಣ್ಣ, ತಿಪ್ಪೇಸ್ವಾಮಿ, ವೀರೇಶ, ಕಟ್ಟೆ ಬಸಪ್ಪ, ಮಂಜುನಾಥ, ವಸಂತಕುಮಾರ, ಹೆಚ್. ಗೌರಿ, ವೀರೇಶಣ್ಣ ಅವಂಬಾವಿ ಮತ್ತು ರಾಷ್ಟ್ರೀಯ ಬಸವದಳ, ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಬಳಗ ಸಂಘಟನೆಗಳ ಮತ್ತಿತರ ಮುಖಂಡರು, ಸದಸ್ಯರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7eXkKdvSgzIz1asEX6uZh

Share This Article
Leave a comment

Leave a Reply

Your email address will not be published. Required fields are marked *