ರಾಮದುರ್ಗ:
ತಾಲೂಕಿನ ನಾಗನೂರ ಗ್ರಾಮದ ಗುರುಬಸವ ಮಠದಲ್ಲಿ ಮಾರ್ಚ್ 20 ಹಾಗೂ 21ರಂದು ಬಸವಧರ್ಮ ಉತ್ಸವ ಹಾಗೂ ಅಲ್ಲಮಪ್ರಭುಗಳ ಜಯಂತ್ಯೋತ್ಸವ ಕಾರ್ಯಕ್ರಮಗಳು ಜರುಗಲಿವೆ ಎಂದು ಶ್ರೀಮಠದ ಬಸವಪ್ರಕಾಶ ಸ್ವಾಮೀಜಿ ತಿಳಿಸಿದ್ದಾರೆ.
20ಶುಕ್ರವಾರ ಸಂಜೆ 7 ಘಂಟೆಗೆ ಜರುಗಲಿರುವ ಉದ್ಘಾಟನಾ ಸಮಾರಂಭದ ಸಾನಿಧ್ಯವನ್ನು ಚಿತ್ತರಗಿ-ಇಲಕಲ್ಲ ಸಂಸ್ಥಾನ ಮಠದ ಪೂಜ್ಯ ಗುರುಮಹಾಂತ ಸ್ವಾಮೀಜಿ ವಹಿಸಲಿದ್ದು, ಗುರುಬಸವ ಮಠದ ಪೂಜ್ಯ ಬಸವಗೀತಾ ತಾಯಿ ನೇತೃತ್ವ ವಹಿಸಲಿದ್ದಾರೆ. ಪೂಜ್ಯ ಬಸವಪ್ರಕಾಶ ಸ್ವಾಮೀಜಿ ಸಭೆಯ ಅಧ್ಯಕ್ಷತೆ ವಹಿಸುವರು.
ಚೊಂಡಿ ಬಸವ ಮಂಟಪದ ಶ್ರೀವಚನ ಸಂಸ್ಕೃತಿ ತಾಯಿಯವರು ಅನುಭಾವ ನುಡಿಗಳನ್ನಾಡಲಿದ್ದು, ಮುಖ್ಯ ಅತಿಥಿಗಳಾಗಿ ಬಟಕುರ್ಕಿ ಪಿಕೆಪಿಎಸ್ ಉಪಾಧ್ಯಕ್ಷ ನಾಗನಗೌಡ ಸಿದ್ದನಗೌಡ್ರ, ಅಶೋಕ ಕುಲಗೋಡ, ಶೇಖಪ್ಪ ಕಬಾಡದ, ವಿರುಪಾಕ್ಷ ಮುದಕವಿ ಸೇರಿದಂತೆ ಇತರರು ಪಾಲ್ಗೊಳ್ಳಲಿದ್ದಾರೆ.

21 ಶನಿವಾರ ಬೆಳಿಗ್ಗೆ 8 ಘಂಟೆಗೆ ಸರ್ವ ಪೂಜ್ಯರ ನೇತೃತ್ವದಲ್ಲಿ ಬಸವಣ್ಣವರ ಭಾವಚಿತ್ರ ಹಾಗೂ ವಚನ ಸಾಹಿತ್ಯದ ಭವ್ಯ ಉತ್ಸವವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ. ನಂತರ ಬೆಳಿಗ್ಗೆ 10 ಘಂಟೆಗೆ ಜರುಗಲಿರುವ ಸಮಾರೋಪ ಸಮಾರಂಭದ ಸಾನಿಧ್ಯವನ್ನು ಇಲಕಲ್ಲನ ಗುರುಮಹಾಂತ ಸ್ವಾಮೀಜಿ ವಹಿಸಲಿದ್ದು, ಗುರುಬಸವ ಮಠದ ಬಸವಗೀತಾ ತಾಯಿ, ಬಸವಪ್ರಕಾಶ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ. ಜಮಖಂಡಿಯ ಪೂಜ್ಯ ಆನಂದ ದೇವರು, ಹೊಸಕೇರಿಯ ಪೂಜ್ಯ ನೀಲಲೋಚನ ತಾಯಿ ಸಮ್ಮುಖ ವಹಿಸಲಿದ್ದಾರೆ.
ಶಾಸಕ ಅಶೋಕ ಪಟ್ಟಣ ಸಭೆಯ ಅಧ್ಯಕ್ಷತೆಯಲ್ಲಿ ಲಕ್ಷ್ಮೀ ಆರಿಬೆಂಚಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಮಲ್ಲಣ್ಣ ಯಾದವಾಡ, ಜಿ.ವಿ. ನಾಡಗೌಡ್ರ, ರವಿ ಯಡಹಳ್ಳಿ ವಿಜಯ್ ಶೆಟ್ಟಿ, ಗೀತಾ ಆರಿಬೆಂಚಿ ಸೇರಿದಂತೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಎರಡು ದಿನಗಳ ಕಾಲ ನಡೆಯುವ ವಿವಿಧ ಧಾರ್ಮಿಕ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು, ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಶ್ರೀಮಠದ ಭಕ್ತ ಮಂಡಳಿ ಪ್ರಕಟಣೆಯಲ್ಲಿ ವಿನಂತಿಸಿದೆ.
