‘ಅನುಭವ ಮಂಟಪ ಕಟ್ಟಡ ಮುಗಿದ ಬಳಿಕ ಮುಂದೇನು ಎಂಬ ಪ್ರಶ್ನೆ ಕಾಡಬೇಕು’

ಸಿ.ಎಂ. ಬೂದಿಹಾಳ
ಸಿ.ಎಂ. ಬೂದಿಹಾಳ

ಬೆಳಗಾವಿ:

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ಮಾಸಿಕ ಅನುಭಾವ ಗೋಷ್ಠಿ, ಕೃತಿಗಳ ಲೋಕಾರ್ಪಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಬುಧವಾರ ಮಹಾಂತೇಶ ನಗರದ ಮಹಾಂತ ಭವನದಲ್ಲಿ ನಡೆಯಿತು.

ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನಕಾಯ೯ದರ್ಶಿಗಳಾದ ಡಾ. ಎಸ್. ಎಂ. ಜಾಮದಾರ ಅವರು ಮಾತನಾಡುತ್ತ, ಲಿಂಗಾಯತ ಧರ್ಮದ ಇತಿಹಾಸ, ಬೇರೆ ಬೇರೆ ಕಾಲಘಟ್ಟದಲ್ಲಿ ಲಿಂಗಾಯತ ಧರ್ಮದ ಉಲ್ಲೇಖಿತ ದಾಖಲೆಗಳನ್ನೊಳಗೊಂಡ ಮಾಹಿತಿಯನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ ಸಾರ್ವಜನಿಕರಿಗೆ ತಲುಪಿಸಲಾಗುವುದು ಎಂದು ಹೇಳಿದರು.

ಬಸವಕಲ್ಯಾಣದಲ್ಲಿ ಸರ್ಕಾರವು 740 ಕೋಟಿ ರೂಪಾಯಿ ಖರ್ಚು ಮಾಡಿ ಅನುಭವ ಮಂಟಪ ಕಟ್ಟಲಾಗುತ್ತಿದೆ. ಕಟ್ಟಡ ಮುಗಿದ ಬಳಿಕ ಮುಂದೇನು? ಎಂಬ ಪ್ರಶ್ನೆ ಲಿಂಗಾಯತರನ್ನು ಹಾಗೂ ಬಸವ ಅನುಯಾಯಿಗಳನ್ನು ಕಾಡಬೇಕು, ಕಾಡುತ್ತಿದೆ.

ಬಸವಾದಿ ಶರಣರ ತತ್ವ ಸಿದ್ಧಾಂತಗಳೇನು?, ಯಾರು ಏನು ಮಾಡಬೇಕು?, ಯಾರ ಪಾತ್ರ ಏನು? ಹಣ ಎಲ್ಲಿಂದ ಬರುತ್ತದೆ? ಎಷ್ಟು ಖರ್ಚು ಆಗುತ್ತದೆ? ಲಿಂಗಾಯತ ಸಮುದಾಯದ ಪಾತ್ರವೇನು? ಕಾರ್ಯಕ್ರಮಗಳ ರೂಪರೇಷೆ ಏನು? ಎಂಬ ಸಂಪೂರ್ಣ ಮಾಹಿತಿಯೊಂದಿಗೆ ಪುಸ್ತಕವನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಮುಖ್ಯ ಉಪನ್ಯಾಸಕಿಯಾಗಿ ಮಾತನಾಡಿದ ಶ್ರೀದೇವಿ ನರಗುಂದ ಅವರು, ‘ನಿಜಸುಖಿ ಹಡಪದ ಅಪ್ಪಣ್ಣ’ ಅವರ ಜೀವನ, ಕಾಯಕ ನಿಷ್ಠೆ, ಬಸವಣ್ಣನವರ ಮೇಲಿನ ಭಕ್ತಿ, ಅವರ ಒಡನಾಟ, ಅವರ ವಚನಗಳನ್ನು ಕುರಿತು ವಿಸ್ತೃತವಾಗಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಶರಣ ಅಶೋಕ ಮಳಗಲಿ ಅವರ ”ಲಿಂಗಾಯತ ಧರ್ಮದ ತ್ರಿವಿಧ ತತ್ವಗಳು” ಹಾಗೂ ಡಾ. ಅಡಿವೆಪ್ಪ ಬ. ಇಟಗಿ ಅವರ “ಬೆವರ ಹನಿ” ಕವನ ಸಂಕಲನ ಕೃತಿಗಳನ್ನು ಗಣ್ಯರು ಲೋಕಾರ್ಪಣೆಗೊಳಿಸಿದರು.

ಮುಖ್ಯಮಂತ್ರಿಗಳಿಂದ ರಾಜ್ಯಮಟ್ಟದ ಅತ್ಯುತ್ತಮ ಪತ್ರಿಕಾ ಲೇಖನ ಪ್ರಶಸ್ತಿ ಪುರಸ್ಕೃತರಾದ “ಪ್ರಜಾವಾಣಿ” ಉಪಸಂಪಾದಕ ಸಂತೋಷ ಚಿನಗುಡಿ ಹಾಗೂ ಶ್ರೀಬಸವೇಶ್ವರ ಸಹಕಾರಿ ಬ್ಯಾಂಕಿನ ನೂತನ ಅಧ್ಯಕ್ಷೆ ಸರಳಾ ಹೇರೇಕರ ಅವರನ್ನು ಸತ್ಕರಿಸಲಾಯಿತು.

ಪ್ರಸಾದ ದಾಸೋಹಿ ಡಾ. ಅಡಿವೆಪ್ಪ ಇಟಗಿ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆ.ಎಲ್.ಎಂ‌ ಜಿಲ್ಲಾಧ್ಯಕ್ಷರಾದ ಬಸವರಾಜ ರೊಟ್ಟಿ ವಹಿಸಿದ್ದರು.

ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ನಾಗನೂರ ರುದ್ರಾಕ್ಷಿಮಠದ ಪೂಜ್ಯ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು, ಹಡಪದ ಅಪ್ಪಣ್ಣನವರು ಧಾರ್ಮಿಕವಾಗಿ, ಆಧ್ಯಾತ್ಮಿಕವಾಗಿ ಹಾಗೂ ಸಾಮಾಜಿಕವಾಗಿ ಬಸವಣ್ಣನವರ ಆಪ್ತ ಸಹಾಯಕರಾಗಿದ್ದರಲ್ಲದೇ, ಅವರೊಂದಿಗೆ ಆತ್ಮೀಯ ಸಂಭಾಷಣೆ ಚರ್ಚೆ ಮಾಡುತ್ತಿದ್ದ ಮಹಾಶರಣರಾಗಿದ್ದರು ಎಂದರು.

ಎಸ್.ಜಿ. ಸಿದ್ನಾಳ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕರನ್ನು ಹಾಗೂ ಸಾಧಕರನ್ನು ಸಿ.ಎಂ ಬೂದಿಹಾಳ ಹಾಗೂ ಸುಜಾತಾ ಮತ್ತಿಕಟ್ಟಿ ಪರಿಚಯಿಸಿದರು. ವೀಣಾ ಮಠದ ಕಾರ್ಯಕ್ರಮ ನಿರೂಪಿಸಿದರು. ಜಯಶ್ರೀ ನ್ಯಾಮಗೌಡ ಶರಣು ಸಮರ್ಪಣೆ ಮಾಡಿದರು.

ಈ ಸಂದಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಪಧಾದಿಕಾರಿಗಳಾದ ರತ್ನಾ ಬೆಣಚನಮರಡಿ, ಕಾವೇರಿ ಕಿಲಾರಿ, ಭಾಗ್ಯಶ್ರೀ ಬೆನಚನಮರಡಿ, ಸುಲೋಚನಾ ವಸ್ತ್ರದ, ಪ್ರೀತಿ ಮಠದ, ಅರವಿಂದ ಪರುಶೆಟ್ಟಿ, ಮಹಾನಂದಾ ಪರುಶೆಟ್ಟಿ, ಎಫ್.ಆರ್. ಪಾಟೀಲ, ಈರಣ್ಣ ಚಿನಗುಡಿ, ಮೋಹನ ಪಾಟೀಲ, ಪ್ರವೀಣಕುಮಾರ ಚಿಕಲಿ, ಬಸವರಾಜ ಮಿಂಡೊಳ್ಳಿ, ಕೆಂಪಣ್ಣ ರಾಮಾಪುರಿ, ಶಂಕರ ಶೆಟ್ಟಿ, ಬಿ.ಡಿ. ಪಾಟೀಲ, ತ್ರಿವೇಣಿ ಪಾಟೀಲ, ಅನೂಷಾ ಬಶೆಟ್ಟಿ, ಶೋಭಾ ಶಿವಳ್ಳಿ, ಸುಧಾ ರೊಟ್ಟಿ, ಸುರೇಶ ನರಗುಂದ ಸೇರಿದಂತೆ ನೂರಾರು ಶರಣ ಶರಣೆಯರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *