ಬಸವಕಲ್ಯಾಣ ಉತ್ಸವ
ಬಸವಕಲ್ಯಾಣ:
ಬಸವಕಲ್ಯಾಣ ಕೇವಲ ಒಂದು ಐತಿಹಾಸಿಕ ಸ್ಥಳವಲ್ಲ, ಬದಲಾಗಿ ಸಮಾನತೆ ಮತ್ತು ಮಾನವತಾವಾದದ ತತ್ವಗಳನ್ನು ಪ್ರಚಾರ ಮಾಡಿದ ಒಂದು ಸಾಮಾಜಿಕ ಕ್ರಾಂತಿಯ ಭದ್ರಬುನಾದಿಯಾಗಿದೆ ಎಂದು ಹುಮನಾಬಾದನ ಹಿರಿಯ ಸಾಹಿತಿ ಡಾ. ಸೋಮನಾಥ ಯಳವಾರ ಹೇಳಿದರು.
ಅವರು ಇಲ್ಲಿನ ಹರಳಯ್ಯನವರ ಗವಿಯಲ್ಲಿ ನಡೆದ ಬಸವಕಲ್ಯಾಣ ಉತ್ಸವ ಕಾರ್ಯಕ್ರಮದಲ್ಲಿ ಬಸವಕಲ್ಯಾಣದ ಗೌರವ ಪರಂಪರೆ ಕುರಿತು ಉಪನ್ಯಾಸ ನೀಡಿದರು.

ಕಲ್ಯಾಣವೆಂದರೆ ಮಂಗಳಕರವಾದದ್ದು, ಬೆಳಕು. ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿಯೂ ಕಲ್ಯಾಣಕ್ಕೆ ೧೨ನೇ ಶತಮಾನದ ಬಸವಾದಿ ಶರಣರಿಂದ ಮಹತ್ವ ಬಂದಿದೆ. ಕಾಯಕ-ದಾಸೋಹ, ನಡೆ-ನುಡಿ ಜ್ಞಾನ ಕ್ರಿಯೆಗಳಲ್ಲಿ ಸಮಾನತೆ ನೀಡಿದರು ಎಂದರು.
ಸಾನಿಧ್ಯ ವಹಿಸಿದ್ದ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಮಾತನಾಡಿ, ಬಸವಕಲ್ಯಾಣದಲ್ಲಿ ನಡೆಯುತ್ತಿರುವ ಬಸವಕಲ್ಯಾಣ ಉತ್ಸವ ೧೨ನೇ ಶತಮಾನದ ಶರಣರ ಸಮಾನತೆ ಮತ್ತು ಕಾಯಕ ತತ್ವಗಳನ್ನು ಬಿಂಬಿಸುವ ಪ್ರಮುಖ ಸಾಂಸ್ಕೃತಿಕ ಮತ್ತು ಧಾರ್ಮಿಕ ಹಬ್ಬವಾಗಿದೆ. ಇದು ಪ್ರತಿವರ್ಷ ಬಸವಾದಿ ಶರಣರ ಸಂದೇಶಗಳನ್ನು ಜನರಿಗೆ ತಲುಪಿಸಲು ಆಯೋಜಿಲಸಾಗುತ್ತಿದೆ ಎಂದರು.

ನಗರಸಭೆ ಪೌರಾಯುಕ್ತ ರಾಜು ಡಿ. ಬಣಕಾರ ಉದ್ಘಾಟಿಸಿ ಮಾತನಾಡಿ, ಯುಗಾದಿ ಹೊಸ ವರ್ಷ ಮಾತ್ರವಲ್ಲ, ವೈಜ್ಞಾನಿಕ ದೃಷ್ಟಿಯಿಂದಲೂ ಅತ್ಯಂತ ಮಹತ್ವದ್ದಾಗಿದೆ. ಅದು ಪಕೃತಿ ಮತ್ತು ಮಾನವ ಜೀವನದ ನಡುವಿನ ಆಳವಾದ ಸಂಬಂಧವನ್ನು ನೆನಪಿಸುವ ಮಹತ್ವದ ಕ್ಷಣವಾಗಿದೆ ಎಂದರು.
ಪೂಜ್ಯ ಸಿದ್ಧರಾಮೇಶ್ವರ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿಕೊಂಡಿದ್ದರು. ನಿವೃತ್ತ ನ್ಯಾಯಧೀಶ ಸುಭಾಶ್ಚಂದ್ರ ನಾಗರಾಳೆ ಮಾತನಾಡಿದರು. ಉದ್ಯಮಿ ಗುರುಪಾದಪ್ಪ ಪಾಟೀಲ ಧ್ವಜಾರೋಹಣಗೈದರು.
ಗೌರವ ಸನ್ಮಾನ :

ಇದೇ ಸಂದರ್ಭದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನ ಪಂಚಕಮಿಟಿಗೆ ನೂತನವಾಗಿ ಆಯ್ಕೆಯಾದ ನಿರ್ದೇಶಕರುಗಳಾದ ಈರಣ್ಣಾ ಹಲಶೆಟ್ಟಿ, ಅನಿಲಕುಮಾರ ರಗಟೆ, ಜಗನ್ನಾಥ ಖೂಬಾ, ಮಲ್ಲಿಕಾರ್ಜುನ ಕುರಕೋಟೆ, ಭದ್ರಿನಾಥ ಪಾಟೀಲ, ಬಸವರಾಜ ಬಾಲಿಕಿಲೆ, ಅಶೋಕ ನಾಗರಾಳೆ, ಮಲ್ಲಿಕಾರ್ಜುನ ಚಿರಡೆ, ಸುನೀಲ ರಾಯವಾಡೆ, ಪುಷ್ಪಾವತಿ ಮಾಮಾ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಡಾ. ಮಹೇಶ ಪಾಟೀಲ ಸ್ವಾಗತಿಸಿದರೆ, ಸಂಗಮೇಶ ತೊಗರಖೇಡ ನಿರೂಪಿಸಿದರು. ರಂಜನಾ ಭೂಶೆಟ್ಟಿ ಮತ್ತು ಮಂಜುನಾಥ ವಚನ ಸಂಗೀತ ನಡೆಸಿಕೊಟ್ಟರು. ಉತ್ಸವದ ಅಂಗವಾಗಿ ಹಮ್ಮಿಕೊಂಡ ವಿವಿಧ ಸ್ಫರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ವಚನ ಪಠಣ :
ಮುಂಜಾನೆ ಪರುಷಕಟ್ಟೆಯಲ್ಲಿ ಪೂಜ್ಯ ಡಾ. ಗಂಗಾಂಬಿಕಾ ಅಕ್ಕನವರ ನೇತೃತ್ವದಲ್ಲಿ ೧೦೮ವಚನಗಳನ್ನು ಸಾಮೂಹಿಕವಾಗಿ ಪಠಿಸಲಾಯಿತು. ಪೂಜ್ಯ ಶಿವಾನಂದ ದೇವರು ಪೂಜ್ಯ ಸತ್ಯಕ್ಕತಾಯಿ, ಪೂಜ್ಯ ಬಸವದೇವರು ಉಪಸ್ಥಿತರಿದ್ದರು.
