ಅನುಭವ ಮಂಟಪದ ಮೇಲೆ ಬಸವ ವಿರೋಧಿಗಳ ಕೆಂಗಣ್ಣಿದೆ – ಭಾಗ 6

ಹಿಂದುತ್ವ ಬೆಳೆಸಲು ಅನುಭವ ಮಂಟಪ ಬಳಕೆಯಾಗುವ ಅಪಾಯವಿದೆ

ಬೆಂಗಳೂರು

ಭಾಗ 1: ಅನುಭವ ಮಂಟಪ ಸ್ಥಾವರವಾಗದೆ, ಜಂಗಮವಾಗಲಿ

ಭಾಗ 2: ಅನುಭವ ಮಂಟಪ: ಸಾಮಾನ್ಯ ಪ್ರವಾಸಿ ಸ್ಥಳವಾಗಬಾರದು

ಭಾಗ 3 : ಅನುಭವ ಮಂಟಪದಲ್ಲಿ ಮಾಡಬೇಕಾದ ಕಾರ್ಯಕ್ರಮಗಳು

ಭಾಗ 4: ಬಸವ ಸ್ವಯಂಸೇವಕರಿಂದ ಅನುಭವ ಮಂಟಪದ ನಿರ್ವಹಣೆಯಾಗಲಿ

ಭಾಗ 5 – ಸಿಖ್ಖರ ಸುವರ್ಣ ಮಂದಿರದಂತೆ ಅನುಭವ ಮಂಟಪ ನಿರ್ವಹಣೆಯಾಗಲಿ

ಲಿಂಗಾಯತರನ್ನು ದಾರಿತಪ್ಪಿಸಲು ಹಗಲಿರುಳೂ ಹಲವಾರು ಕಾಣುವ, ಕಾಣಿಸದ ಪ್ರಯತ್ನಗಳು ನಡೆಯುತ್ತಿವೆ.

ಈ ನಿಟ್ಟಿನಲ್ಲಿ ಪಂಚಾಚಾರ್ಯರು, ಅವರ ಅನುಯಾಯಿಗಳು, ಸಂಘ ಪರಿವಾರದವರು ಸಕ್ರಿಯರಾಗಿದ್ದಾರೆ. ಅವರು ಯಶಸ್ವಿಯಾದರೆ ಅನುಭವ ಮಂಟಪ ನಿಷ್ಫಲಗೊಳ್ಳುತ್ತದೆ.

ಆರೆಸ್ಸೆಸ್, ವಿಶ್ವ ಹಿಂದೂ ಪರಿಷತ್ತು ಮತ್ತು ಭಾರತೀಯ ಜನತಾ ಪಕ್ಷ ಈ ಮೂವರು ಸೇರಿ ಲಿಂಗಾಯತರ ಒಗ್ಗಟ್ಟನ್ನು ಮುರಿಯಲು ಯಾವ ಮುಚ್ಚು ಮರೆಯಿಲ್ಲದೆ ಶ್ರಮಿಸುತ್ತಿದ್ದಾರೆ.

ಇವರಿಗೆ ಬಸವಾಭಿಮಾನಿಗಳು ಕಡಿವಾಣ ಹಾಕದಿದ್ದರೆ ಇಂಥವರಿಂದ ಅನುಭವ ಮಂಟಪವು ‘ರಾಷ್ಟ್ರೀಯತೆ’ ಹೆಸರಿನಲ್ಲಿ ಹಿಂದುತ್ವ ತರಬೇತಿ ಕೇಂದ್ರವಾಗಿ ಬದಲಾಗುತ್ತದೆ. ನೇರವಾಗಿ, ಪರೋಕ್ಷವಾಗಿ ಹಿಂದುತ್ವ ಬೆಳೆಸಲು ಅನುಭವ ಮಂಟಪ ಬಳಕೆಯಾಗುವ ಅಪಾಯವೇ ಹೆಚ್ಚಾಗಿದೆ.

ಇದು ಭವಿಷ್ಯ ವಾಣಿಯಲ್ಲ. ಈ ಬಗ್ಗೆ ಈಗಾಗಲೆ ಒಂದು ನೀಲನಕ್ಷೆ ತಯಾರಾಗಿದೆ. ಆ ನೀಲನಕ್ಷೆಯನ್ನು ಯಾರು ತಯಾರಿಸಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ.

ಇದು ಭವಿಷ್ಯ ವಾಣಿಯಲ್ಲ. ಈ ಬಗ್ಗೆ ಈಗಾಗಲೆ ಒಂದು
ನೀಲನಕ್ಷೆ ತಯಾರಾಗಿದೆ.

ಇವರ ಇತ್ತೀಚಿನ ಚಟುವಟಿಕೆಗಳನ್ನು ಗಮನಿಸೋಣ.

ಇವರು ಅನುಭವ ಮಂಟಪ ಎಂಬ ಸಂಸ್ಥೆಯೇ ಇರಲಿಲ್ಲ, ಅದು 16ನೆಯ ಶತಮಾನದ ಶೂನ್ಯ ಸಂಪಾದನಕಾರರ ಕಾಲ್ಪನಿಕ ಸೃಷ್ಟಿ ಎಂದು ಹೇಳುತ್ತಾರೆ.

ಬಸವಣ್ಣ ಮತ್ತು ಶರಣರು ವೈದಿಕ ಧರ್ಮವನ್ನೇ ಬೋಧಿಸಿದರು, ವಚನಗಳು ಉಪನಿಷತ್ತುಗಳ ಕನ್ನಡ ಭಾಷಾಂತರಗಳೆಂದೂ ಇವರು ಸಾಕಷ್ಟು ಸಂಘಟನಾ ಸಾಮರ್ಥ್ಯ ಮತ್ತು ಹಣ ಸುರಿದು ಪ್ರತಿಪಾದಿಸುತ್ತಿದ್ದಾರೆ.

ಈ ವಿಚಾರಗಳನ್ನು ಬಿಂಬಿಸಲು ಕೆಲವು ಪುಸ್ತಕಗಳನ್ನು (ವಚನ ದರ್ಶನ, ಬಸವ ಶೈವ), ಪ್ರಬಂಧ ಸ್ಪರ್ಧೆಗಳನ್ನು, ಚಿಂತನ ಗೋಷ್ಠಿಗಳನ್ನು (ಗದಗ ಮತ್ತು ಬೆಂಗಳೂರಿನಲ್ಲಿ) ಸಿನಿಮಾಗಳನ್ನು (ಶರಣ ಶಕ್ತಿ) ತಯಾರಿಸಿದ್ದಾರೆ. ಇಂತಹ ಪ್ರಯತ್ನಗಳನ್ನು ಮುಂದುವರೆಸುತ್ತಿದ್ದಾರೆ.

ದುರ್ದೈವದಿಂದ ನಮ್ಮಲ್ಲಿನ ಕೆಲವು ವಿರಕ್ತ ಮಠದ ಸ್ವಾಮಿಗಳು ಅವರೊಂದಿಗೆ ಕೈಜೋಡಿಸುತ್ತಿದ್ದಾರೆ. ಈ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಶರಣ ಸಮುದಾಯ ಮತ್ತು ಇತರ ಮಠಗಳು ಸಿದ್ಧವಾಗಬೇಕಾಗಿದೆ.

ಲಿಂಗಾಯತ ಮತಗಳನ್ನು ಪಡೆದು ಆರಿಸಿ ಬರುವ ಅನೇಕ ಶಾಸಕರು (ಉದಾಹರಣೆಗೆ ವಿಜಯಪುರ ನಗರ, ಧಾರವಾಡ, ನರಗುಂದ), ಬಿಜೆಪಿಯಿಂದ ಮುಖ್ಯಮಂತ್ರಿಯ ಹುದ್ದೆಗೆ ಏರಿದ ಇಬ್ಬರು, ಕಲಬುರ್ಗಿಯ ಓರ್ವ ಮಾಜಿ ರಾಜ್ಯಸಭೆಯ ಸಂಸದರು ಲಿಂಗಾಯತರ ಹೋರಾಟವನ್ನು ನೇರವಾಗಿಯೇ ವಿರೋಧಿಸಿದ್ದಾರೆ.

ಈ ಕುತಂತ್ರಗಳನ್ನು ಮೊಳಕೆಯಲ್ಲಿ ಚಿವುಟಿಹಾಕದಿದ್ದರೆ ಅನುಭವ ಮಂಟಪದ ದುರುಪಯೋಗವಾಗುತ್ತದೆ.

ಬಸವಾಭಿಮಾನಿಗಳು ರಾಜಕೀಯ ಜಾಣ್ಮೆ ಬೆಳೆಸಿಕೊಂಡು ಈ ಕುತಂತ್ರಗಳನ್ನು ಮೊಳಕೆಯಲ್ಲಿ ಚಿವುಟಿಹಾಕದಿದ್ದರೆ ನಮ್ಮ ಕಣ್ಣ ಮುಂದೆಯೇ ಅನುಭವ ಮಂಟಪದ ದುರುಪಯೋಗವಾಗುತ್ತದೆ.

ಈ ಕಾರ್ಯದಲ್ಲಿ ನಾವು ವಿಫಲರಾದರೆ ಬಸವಾದಿ ಶರಣರಿಗೆ ನಮ್ಮಿಂದಲೂ ಅಪಚಾರವಾಗುತ್ತದೆ ಎನ್ನುವುದು ಗಮನದಲ್ಲಿರಲಿ.

(ಈ ಸರಣಿ ಲೇಖನಗಳಿಗೆ ನಿಮ್ಮ ಪ್ರತಿಕ್ರಿಯೆ ಹಾಗೂ ಅನುಭವ ಮಂಟಪವನ್ನು ಜಂಗಮವಾಗಿಸುವ ಬಗ್ಗೆ ನಿಮ್ಮ ಸಲಹೆಗಳನ್ನು ಸ್ವಾಗತಿಸುತ್ತೇವೆ. ನಿಮ್ಮ ಫೋನ್ ನಂಬರ್ ಸಹಿತ ನಿಮ್ಮ ಆಲೋಚನೆಗಳನ್ನು ನಮಗೆ ಇಮೇಲ್ ಅಥವಾ ವಾಟ್ಸ್ ಆಪ್ ಮಾಡಬಹುದು. ಇಮೇಲ್ ವಿಳಾಸ -
basavamedia1@gmail.com)

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
2 Comments
  • 🙏🙏ಬಸವಾನುಯಾಯಿಗಳ /ಬಸವ ಭಕ್ತರ ನಿಜ ಆಚರಣೆಗಳು ಬಸವ ನಿಷ್ಟೆ ಹಾಗು ಸಂಘಟನೆ ಇದಕ್ಕೆ
    ಉತ್ತರವಾಗಲಿ 🙏🙏

  • ಅನುಭವ ಮಂಟಪವೆಂಬುದು ಬಸವಾದಿ ಶರಣರು ಸಂಶೋಧಿತ ಸಕಲ ಕಾಯಕ ಶರಣರ ವಿಚಾರ ವಿನಿಮಯ ಕೇಂದ್ರ. ವೈಜ್ಞಾನಿಕ, ವೈಚಾರಿಕ, ಮಾನವರ ಕಲ್ಯಾಣ ಮತ್ತು ಸಕಲ ಜೀವಿಗಳ ಲೇಸು ಬಯಸಿ ಚಿಂತನ ಮಂಥನ ನಡೆಸಿದ ಚೇತನಾಕೇಂದ್ರ. ಶರಣ ಧರ್ಮೀಯರ ಕೈಯಲ್ಲಿಯೇ ಸದಾ ಅದರ ಆಡಳಿತ ಸೂತ್ರ ಇರಬೇಕು.

Leave a Reply

Your email address will not be published. Required fields are marked *

ಪ್ರಧಾನ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ