ಜಮಖಂಡಿ ಬಸವಕೇಂದ್ರದಲ್ಲಿ ಶರಣೆ ಅಕ್ಕಮಹಾದೇವಿ ಜಯಂತಿ

ಜಮಖಂಡಿ:

ಬಸವ ಕೆಂದ್ರದ ವತಿಯಿಂದ 12ನೇ ಶತಮಾನದ ಅನುಭವ ಮಂಟಪದ ಮಹಾಶರಣೆ ಅಕ್ಕಮಹಾದೇವಿ ಜಯಂತಿಯನ್ನು ಈಚೆಗೆ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಡಾ. ಗಂಗಾಶ್ರೀ ಪಾಟೀಲ ಮಾತನಾಡಿ, ಹೆಣ್ಣುಮಕ್ಳಳ ಸ್ವಾತಂತ್ರ್ಯ ಕುರಿತು ಮೊಟ್ಟಮೊದಲಿಗೆ ಮಾತಾಡಿದ್ದೇ ಅಕ್ಕ. ಅಕ್ಕನ ವಚನಗಳು ಸ್ತ್ರೀ ಸಮಾನತೆ, ಹಕ್ಕುಗಳ ಕುರಿತು ಹೇಳುತ್ತವೆ. ಅವರ ವಚನಗಳನ್ನು ಓದಿ ಧೈರ್ಯ, ಸ್ಥೈರ್ಯ  ತಂದುಕೊಳ್ಳಬಹುದು. ಅವನ್ನು ತಪ್ಪದೇ ಎಲ್ಲರೂ ಓದಬೇಕೆಂದು ಹೇಳಿದರು.

ಮಹಾದೇವಿ ಬುರ್ಲಿ, ಗಂಗಾ ಮಠಪತಿ, ಭಾಗ್ಯ ಕೋಟಿ ಅವರು ಸಹ ಅಕ್ಕಮಹಾದೇವಿ ಜೀವನ ಕುರಿತು ಮಾತನಾಡಿದರು. ಅಕ್ಕನ ವಚನಗಳನ್ನು ಸುಮಂಗಲಾ ಮನಗೊಂಡ, ಸುವರ್ಣ ಸಬರದ, ಗಂಗುಬಾಯಿ ಮುಧೋಳ ಹಾಡಿದರು.

ಅವ್ವಕ್ಕವ್ವ ತೇಲಿ ಅವರು ಎಲ್ಲರಿಗೂ ಹೋಳಿಗೆ, ಮಾವಿನಹಣ್ಣಿನ ಶೀಕರ್ಣಿ ಪ್ರಸಾದ ವ್ಯವಸ್ಥೆ ಮಾಡಿದ್ದರು. ಪ್ರಸಾದ ದಾಸೋಹಿಗಳನ್ನು ಸನ್ಮಾನಿಸಲಾಯಿತು.

ವಚನ ಪ್ರಾರ್ಥನೆ ಸಂಸ್ಕೃತಿ ಯಡಹಳ್ಳಿ, ಅಕ್ಕಮಹಾದೆವಿ ವಾಜಂತ್ರಿ, ನೀಲಾಂಬಿಕೆ ವಾಜಂತ್ರಿ ಅವರಿಂದ ನಡೆಯಿತು. ದೀಪಾ ಯಡಹಳ್ಳಿ ನಿರೂಪಿಸಿದರು. ಸ್ವಾಗತವನ್ನು ‌ಪಾರ್ವತಿ ಅಂಗಡಿ ಮಾಡಿದರು. ವಿಮಲಾ ಅಂಗಡಿ ಶರಣು ಸಮರ್ಪಣೆ ಮಾಡಿದರು.

ರಾಜಶ್ರೀ ಜಗದೇವ, ರಾವಸಾಹೇಬ ಜಕ್ಕಪ್ಪನವರ, ರವಿ ಯಡಹಳ್ಳಿ, ಮಹಾಂತೇಶ ಅಂಗಡಿ, ಅಣ್ಣಾಸಾಬ ಜಗದೇವ, ರಮೇಶ ವಾಜೆಂತ್ರಿ, ಮುತ್ತಪ್ಪ ಕಪ್ಪರದ, ಕಾಡು ಮಾಳಿ, ಸಿ.ಎನ್. ಬಾಂಗಿ, ಯಡಹಳ್ಳಿ ಸರ್, ಝಳಕಿ ಸರ್, ಹಲವಾರು ಶರಣ ಶರಣೆಯರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *