ಭಾಲ್ಕಿ:
ಶ್ರೀಮಠದಲ್ಲಿ ಬಾಲಕರ ಉಚಿತ ವಸತಿ ಶಾಲೆಯ ಕರಪತ್ರ ಬಿಡುಗಡೆ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ಹಾಗೂ ಪೂಜ್ಯ ಗುರುಬಸವ ಪಟ್ಟದ್ದೇವರ ಸಾನಿಧ್ಯದಲ್ಲಿ ಜರುಗಿತು.
ಸಾನಿಧ್ಯ ವಹಿಸಿ, ಶ್ರೀಮಠದಲ್ಲಿ ಬಡಮಕ್ಕಳಿಗೆ, ಅನಾಥ ಮಕ್ಕಳಗೆ, ಶಿಕ್ಷಣ ಮತ್ತು ಸಂಸ್ಕಾರ ದೊರೆಯಬೇಕೆಂದು ಶ್ರೀಮಠದಲ್ಲಿ ಉಚಿತ ವಸತಿ ಶಾಲೆಯನ್ನು ಪ್ರಾರಂಭಿಸಲಾಗಿದೆ. ಈ ವರ್ಷ 1ನೇ ತರಗತಿಗೆ 25 ಮಕ್ಕಳಿಗೆ ಪ್ರವೇಶ ನೀಡಲಾಗುತ್ತದೆ. 1ನೇ ತರಗತಿಗೆ ಪ್ರವೇಶ ಪಡೆದ ಮಕ್ಕಳಿಗೆ 10ನೇ ತರಗತಿವರೆಗೆ ಶಿಕ್ಷಣ, ಊಟ ಮತ್ತು ವಸತಿ ಉಚಿತವಾಗಿ ನೀಡಲಾಗುತ್ತದೆ.
ತಂದೆ-ತಾಯಿ ಇಲ್ಲದ ಬಡಮಕ್ಕಳಿಗೆ ಮೊದಲ ಆದ್ಯತೆ ನೀಡಲಾಗುವುದು. ಇಂತಹ ಮಕ್ಕಳ ಪ್ರವೇಶಕ್ಕಾಗಿ ಮೇ-31ಕ್ಕೆ ಶ್ರೀಮಠದಲ್ಲಿ ಪಾಲಕರು ಉಪಸ್ಥಿತರಿರಬೇಕೆಂದು ಡಾ.ಬಸವಲಿಂಗ ಪಟ್ಟದ್ದೇವರು ತಿಳಿಸಿದರು.
ಪೂಜ್ಯ ಗುರುಬಸವ ಪಟ್ಟದ್ದೇವರು, ಪೂಜ್ಯ ಅನೀಲ ಮಹಾರಾಜರು ಸಮ್ಮುಖ ವಹಿಸಿದ್ದರು.

ಜಗನ್ನಾಥ ಹಲಂಗೆ ಅವರಿಂದ ಕರಪತ್ರ ಬಿಡುಗಡೆ ಮಾಡಲಾಯಿತು. ಕರಪತ್ರ ಬಿಡುಗಡೆ ಮಾಡಿ, ಭಾಲ್ಕಿ ಶ್ರೀಮಠ ಮಾಡುತ್ತಿರುವ ಶೈಕ್ಷಣಿಕ ಸೇವೆ ಅಪೂರ್ವವಾಗಿದೆ. ಶ್ರೀಮಠದಲ್ಲಿ ಬಡಮಕ್ಕಳಿಗೆ ಪೂಜ್ಯರು ಸುವರ್ಣಾ ಅವಕಾಶ ನೀಡಿದ್ದಾರೆ. ಬಡತನ ಮತ್ತು ಶಿಕ್ಷಣದಿಂದ ಯಾರೂ ವಂಚಿತರಾಗಬಾರದೆಂಬ ಉದ್ದೇಶ ಪೂಜ್ಯರು ಹೊಂದಿದ್ದಾರೆ. ಪೂಜ್ಯರ ಈ ಸಮಾಜಿಕ ಕಳಕಳಿ ಅಭಿನಂದನೀಯವಾಗಿದೆ ಎಂದು ನುಡಿದರು.
ಗುಂಡಪ್ಪ ಸಂಗಮಕರ, ಎಂ.ಪಿ. ರಾಠೋಡ, ಶ್ರೀಚಂದ ಪವಾರ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa
