ಗುಂಡ್ಲುಪೇಟೆ
ಬೇಗೂರು ಹೋಬಳಿಯ ಮರಳಾಪುರ ಗ್ರಾಮದಲ್ಲಿ ಬಸವ ಬಳಗ ಹಾಗೂ ಗ್ರಾಮಸ್ಥರಿಂದ ವತಿಯಿಂದ ಭಾನುವಾರ ವಿಶ್ವಗುರು ಬಸವಣ್ಣನವರ ಜಯಂತಿ ಆಚರಿಸಲಾಯಿತು.
ಸೋಮಹಳ್ಳಿ ಮಠದ ನಿಯೋಜಿತ ಶ್ರೀಗಳಾದ ಬಸವಯೋಗಿಪ್ರಭು ಸ್ವಾಮೀಜಿಯವರು ಬಸವಣ್ಣನವರ ಮೂರ್ತಿಗೆ ಪುಷ್ಪರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.

ಊರಿನ ಪ್ರಮುಖ ಬಿದಿಗಳಲ್ಲಿ ವಿಜೃಂಭಣೆಯಿಂದ ಯುವಕರು ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಮೆರವಣಿಗೆ ನಡೆಯಿತು.
ಶ್ರೀಕಂಠಪ್ಪ ಚಂದ್ರಪ್ಪ ಮಾದೇವಪ್ಪ ಹಾಗು ಬಸವ ಬಳಗ ಯುವಕರು ಉಪಸ್ಥಿತರಿದ್ದರು.
ಬೆಳಿಗ್ಗೆ ಮತ್ತು ಮಧ್ಯಾಹ್ನ ಪ್ರಸಾದ ವಿನಿಯೋಗ ಮಾಡಲಾಯಿತು.
