ಗುಂಡ್ಲುಪೇಟೆ
ಹೊಂಗಹಳ್ಳಿ ಗ್ರಾಮದ ಸುರೇಶ-ಶ್ರುತಿ ದಂಪತಿಗಳ ನೂತನ ಕೋಡಿ ಬಸವೇಶ್ವರ ನರ್ಸರಿ ಕಳೆದ ಭಾನುವಾರ ಪ್ರಾರಂಭಗೊಂಡಿತು. ಸೋಮಹಳ್ಳಿ ಮಠದ ನಿಯೋಜಿತ ಪೂಜ್ಯರಾದ ಬಸವಯೋಗಿಪ್ರಭು ಸ್ವಾಮೀಜಿ ಉದ್ಘಾಟಿಸಿದರು.
ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಚಾಲನೆ ನೀಡಲಾಯಿತು. ಕೋಡಿ ಬಸವೇಶ್ವರ ನರ್ಸರಿ ನಾಮಫಲಕವನ್ನು ಅಳವಡಿಸಲಾಯಿತು.

ನಂತರ ಮಾತನಾಡಿದ ಬಸವಯೋಗಿಪ್ರಭು ಸ್ವಾಮೀಜಿ, ಪೈರಿಗೆ ಯಾವ ರೀತಿ ನೀರು ಗೊಬ್ಬರ ಹಾಕಿ ರಕ್ಷಣೆ ಮಾಡುತ್ತೆವೆಯೋ, ಅದೇ ರೀತಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ಕೊಟ್ಟು ಪೋಷಿಸಬೇಕು.
ಮನದ ಮೈಲಿಗೆಯನ್ನು ತೊಳೆಯಬೇಕಾದರೆ ಶರಣರ ಚಿಂತನೆ ಮಾಡಬೇಕು. ಗುರು ಲಿಂಗ ಜಂಗಮದ ಮೇಲೆ ಅಭಿಮಾನವಿರಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಂಬಳೆ ಬಸವೇಶ್ವರ ನರ್ಸರಿ ಮಾಲೀಕರಾದ ಗಿರೀಶ, ಸುರೇಶ, ಶ್ರುತಿ, ಸಂವೇದ ಮಡಹಳ್ಳಿ ನಂಜಪ್ಪ, ಗುಂಡ್ಲುಪೇಟೆ ಬಸವೇಶ್ವರ ಟ್ರೇಡರ್ಸ್ ಮಾಲೀಕರಾದ ಶಿವರಾಜ, ಗೀತಮ್ಮ ಹೊಂಗಹಳ್ಳಿ ಉಪಸ್ಥಿತರಿದ್ದರು.

