ಸವದತ್ತಿ :
ಪ್ರಭುನ್ನವರ ಅವರು ತಮ್ಮ ಮನೆತನಕ್ಕೆ ಅಷ್ಟೇ ಕಾಕಾ ಆಗಿರಲಿಲ್ಲ. ಜಾತಿ ಮತ ಪಂಥ ಭೇದವಿಲ್ಲದೇ ಇಡೀ ಸವದತ್ತಿಗೆ ಕಾಕಾ ಆಗಿದ್ದರು ಎಂದು ಸವದತ್ತಿ ಶಾಸಕ ಡಾ. ವಿಶ್ವಾಸ ವೈದ್ಯ ಅವರು ಹೇಳಿದರು.
ಈಚೆಗೆ ಲಿಂಗೈಕ್ಯರಾದ ಬಸವಪ್ರಭು ಅವರ ಲಿಂಗೈಕ್ಯ ಸಂಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಬೈಲಹೊಂಗಲದ ಪ್ರೇಮಕ್ಕ ಅಂಗಡಿ ಬಸವ ಪೂಜೆ ನೆರವೇರಿಸಿ, ಗುರು ಲಿಂಗ ಜಂಗಮ ಆರಾಧನಾ ಉಪಸನಾ ಕ್ರಮ ಲಿಂಗಾಯತರದು. ಬಸವಣ್ಣನವರು ಕಟ್ಟಿದ ಅನುಭವ ಮಂಟಪ ಅದರ ಪ್ರಥಮ ಶೂನ್ಯ ಪೀಠಾಧೀಶ ಸ್ಥಾನ ವಹಿಸಿ ನಾಡಿನ ತುಂಬ ಸಂಚರಿಸಿ ಲಿಂಗಾಯತ ಧರ್ಮದ ನಿಜ ಆಚರಣೆಯ ಎಚ್ಚರಿಕೆ ನೀಡಿದ ಅಲ್ಲಮ ಪ್ರಭುಗಳ ನಿಜವಾರಸುದಾರಿಕೆ ಮನೆತನ ಸೌದತ್ತಿಯ ಪ್ರಭುನ್ನವರದ್ದು ಎಂದರು.

ಪ್ರಭುನ್ನವರ ಓಣಿಯಲ್ಲಿ ಅಲ್ಲಮಪ್ರಭುಗಳ ಗದ್ದುಗೆಯ ನವೀಕರಣಗೊಳಿಸಿ ಸ್ಮಾರಕವನ್ನಾಗಿಸಿದ ಶ್ರೇಯಸ್ಸು ಪ್ರಭುನ್ನವರ ಮನೆತನಕ್ಕೆ ಸೇರಿದೆ.
ಸವದತ್ತಿಯಲ್ಲಿ ಅರ್ಬನ್ ಬ್ಯಾಂಕಿನ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಬಸವಪ್ರಭು ಅವರು ಸೌದತ್ತಿ ಕಲ್ಮಠ, ಜಮಖಂಡಿ ಓಲೆಮಠದ ಲಿಂಗೈಕ್ಯ ಡಾ. ಅಭಿನವ ಚನ್ನಬಸವ ಮಹಾಸ್ವಾಮಿಗಳವರ ಪರಮಾಪ್ತ ಶಿಷ್ಯರಾಗಿ, ಅವರು ಹಮ್ಮಿಕೊಂಡ ಬಸವ ಪುರಾಣ ಕಾರ್ಯಕ್ರಮದ ಯಶಸ್ವಿಗೆ ಕಾರಣೀಭೂತರಾಗಿದ್ದರು.
ಸಾಮಾಜಿಕ, ಆಧ್ಯಾತ್ಮಿಕ, ಧಾರ್ಮಿಕ ಸಹಕಾರ ಕ್ಷೇತ್ರಗಳಿಗೆ ನೀಡಿದ ಕೊಡುಗೆ ಅಪಾರವಾಗಿದೆ. ಚಿಕ್ಕವರು ದೊಡ್ಡವರೆನ್ನದೆ ಸರ್ವರಿಗೂ ಅಚ್ಚುಮೆಚ್ಚಿನ ಕಾಕಾ ಆಗಿದ್ದ ಅವರ ವಾರಸುದಾರಿಕೆಯನ್ನು ಪುತ್ರ ಪ್ರಕಾಶ ಪ್ರನ್ನಭುನ್ನವರ ಮುಂದವರೆಸಲಿ ಎಂದರು.

ಕಾರ್ಯಕ್ರಮದಲ್ಲಿ ಬಿ.ಎನ್. ಪ್ರಭುನ್ನವರ, ನಿಂಗಪ್ಪ ಪ್ರಭುನ್ನವರ, ಪಾರಕ್ಕ ಸೇಬನ್ನವರ, ಮಂಗಲಾ ಅಕ್ಕಿ, ಡಾ. ವಿದ್ಯಾ ಬಾಳಿ, ಡಾ. ವೀಣಾ ಭೂಮನ್ನವರ, ಬಂಧು ಬಳಗ, ಸೌದತ್ತಿಯ ಗುರು ಹಿರಿಯರು ಮಿತ್ರರು ಪಾಲ್ಗೊಂಡಿದ್ದರು. ದೊಡ್ಡವರೆನ್ನದೆ ಸರ್ವರಿಗೂ ಅಚ್ಚುಮೆಚ್ಚಿನ ಕಾಕಾ ಆಗಿದ್ದ ಅವರ ವಾರಸುದಾರಿಕೆಯನ್ನು ಪುತ್ರ ಪ್ರಕಾಶ ಪ್ರನ್ನಭುನ್ನವರ ಮುಂದವರೆಸಲಿ ಎಂದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

ಒಳ್ಳೆಯ ಕಾರ್ಯಕ್ರಮವಾಗಿದೆ