ನೇಪಾಳ ಪ್ರಾಣ ಕಳೆದುಕೊಂಡ ಜೀವಗಳಿಗೆ ಜ್ಯೋತಿ ಬೆಳಗಿಸಿ ಶ್ರದ್ಧಾಂಜಲಿ

ಬಸವ ಮೀಡಿಯಾ
ಬಸವ ಮೀಡಿಯಾ

ನಾಪತ್ತೆಯಾದ ಜನರು ಸುರಕ್ಷಿತವಾಗಿ ಮರಳಲಿ

ಭಾಲ್ಕಿ:

ನೇಪಾಳದ ಭೀಕರ ಪ್ರವಾಹ ದುರಂತದಲ್ಲಿ ಪ್ರಾಣ ಕಳೆದುಕೊಂಡ ಜೀವಗಳಿಗೆ ನಗರದಲ್ಲಿ ಶನಿವಾರ ಜ್ಯೋತಿ ಬೆಳಗಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

ನಗರದ ಚನ್ನಬಸವಾಶ್ರಮ ಪರಿಸರದಲ್ಲಿ ಶ್ರಾವಣ ಮಾಸದ ಪ್ರವಚನ ನಡೆಸಿಕೊಡುತ್ತಿರುವ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರ ಸಾನಿಧ್ಯದಲ್ಲಿ ಪ್ರವಚನದ ಕೊನೆಯಲ್ಲಿ ನೂರಾರು ಭಕ್ತರು ಮೇಣದ ಕ್ಯಾಂಡಲ್ ಬೆಳಗಿಸಿ ಜಲಪ್ರಳಯದಲ್ಲಿ ಜೀವ ಕಳೆದುಕೊಂಡ ಜನರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ನಂತರ ಪೂಜ್ಯರು ಮಾತನಾಡಿ, ನೇಪಾಳದ ಜಲಪ್ರಳಯದ ದುರಂತದ ಸುದ್ದಿ ಅತ್ಯಂತ ಹೃದಯ ವಿದ್ರಾವಕವಾಗಿದೆ. ಪ್ರಕೃತಿಯ ವಿಕೋಪಕ್ಕೆ ನೇಪಾಳ ನಲುಗಿಹೋಗಿದೆ. ಜಲಪ್ರಳಯದಲ್ಲಿ ಪ್ರಾಣ ಕಳೆದುಕೊಂಡ ಅಮಾಯಕ ಜೀವಗಳ ಪವಿತ್ರ ಆತ್ಮಕ್ಕೆ ಭಾವಪೂರ್ಣ ಶ್ರದ್ಧಾಂಜಲಿ.

ನಿಮ್ಮ ನೆನಪುಗಳ ದೀಪ ನಮ್ಮ ಮನಸ್ಸಿನಲ್ಲಿ ಸದಾ ಬೆಳಗುತ್ತಿರುತ್ತದೆ.‌ ನಾಪತ್ತೆಯಾಗಿರುವ ನೂರಾರು ಜನರು ಶೀಘ್ರದಲ್ಲೇ ಸುರಕ್ಷಿತವಾಗಿ ಮರಳಲಿ ಎಂದು ಪ್ರಾರ್ಥಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *