ಕಕ್ಕರಗೊಳ್ಳದ ವಿದ್ಯಾರ್ಥಿ ನಿಲಯದಲ್ಲಿ ಸಾಮೂಹಿಕ ಇಷ್ಟಲಿಂಗ ದೀಕ್ಷೆ, ಪ್ರಾತ್ಯಕ್ಷಿಕೆ

ದಾವಣಗೆರೆ:

ತಾಲ್ಲೂಕು ಶರಣ ‌ಸಾಹಿತ್ಯ ಪರಿಷತ್ತಿನ ವತಿಯಿಂದ ಕಕ್ಕರಗೊಳ್ಳ ಗ್ರಾಮದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಸಾಮೂಹಿಕ ಇಷ್ಟಲಿಂಗ ದೀಕ್ಷೆ ಮತ್ತು ಪ್ರಾತ್ಯಕ್ಷಿಕೆ ಶಿಬಿರವನ್ನು ಆಯೋಜಿಸಲಾಗಿತ್ತು.

ಶಿಬಿರದಲ್ಲಿ ಎಲ್ಲಾ ಸಮುದಾಯದ 40ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಭಾಗವಹಿಸಿ ಇಷ್ಟಲಿಂಗ ದೀಕ್ಷೆ ಪಡೆದುಕೊಂಡರು.

ಸಿರುಗುಪ್ಪದ ಪೂಜ್ಯ ಬಸವರಾಜಪ್ಪ ಶರಣರು, ವೆಂಕಟಾಪುರ ಅವರು ವಿದ್ಯಾರ್ಥಿನಿಯರಿಗೆ ಲಿಂಗದೀಕ್ಷೆ ದೀಕ್ಷೆ ಮಾತನಾಡುತ್ತಾ, ಇಂದಿನಿಂದ ನೀವೆಲ್ಲರೂ ಜಾತ್ಯತೀತ ಸಿದ್ಧಾಂತ ಹೊಂದಿರುವ ಲಿಂಗಾಯತರಾಗಿರುವಿರಿ. ಯಾವುದೇ ಜಾತಿ ಮತ್ತು ಲಿಂಗಬೇಧವಿಲ್ಲದೇ ಯಾರು ಬೇಕಾದರೂ ಲಿಂಗ ಧರಿಸಬಹುದು ಎಂದು ಹೇಳಿದರು.

ಕಾರ್ಯಕ್ರಮವನ್ನು ಶಾಂತರಾಜು ಗೌಡ್ರು ಉದ್ಘಾಟಿಸಿದರು. ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಬಿ. ಅವರು ರುದ್ರಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.ನಿವೃತ್ತ ಪ್ರಾಚಾರ್ಯ ರಾಜಶೇಖರಪ್ಪ ಲಿಂಗಾನುಭಾವದ ನುಡಿಗಳನ್ನಾಡಿದರು.ಎಂ. ನಾಗರಾಜ ಕಾರ್ಯಕ್ರಮ ನಿರೂಪಿಸಿದರು. ವನಜಾ ನಾಗರಾಜ ವಚನ ಪ್ರಾರ್ಥನೆ ಮಾಡಿದರು.ಸರಿತಾ, ಶಿವನಳ್ಳಿ ರಮೇಶ ಮತ್ತು ಕುಟುಂಬದವರು ಕಾರ್ಯಕ್ರಮದ ದಾಸೋಹಿಗಳಾಗಿದ್ದರು.

ಬಿ. ಎಂ. ವಿಶ್ವೇಶ್ವರಯ್ಯ, ನಾಗರಾಜ ವಕೀಲರು, ಕಲಿವೀರ ಕಳ್ಳೀಮನಿ, ಪ್ರಕಾಶ ಕಡ್ಲೇಬಾಳು, ಆವರಗೆರೆ ರುದ್ರಮುನಿ, ಶಾಮನೂರು ಕೊಟ್ರೇಶ, ಕವಿತಾ ಪೋರಮ್ಮನವರ, ಮಂಜುನಾಥ, ಯೋಗೇಶ, ಸಿದ್ದಯ್ಯ ಮೊದಲಾದವರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
2 Comments
  • ಚಿಂತೆ, ಭಯ, ಆತಂಕ, ವ್ಯಸನದಿಂದ ಹೋರಾಡಲು,
    ಜೀವನದಲ್ಲಿ ಸ್ಪಷ್ಟತೆ, ಆತ್ಮವಿಶ್ವಾಸ, ಸದೃಢ ಚಿಂತನೆ,
    ದೈಹಿಕ ಮತ್ತು ಮಾನಸಿಕ ಸಂತೂಲನಕ್ಕಾಗೀ,
    ಪ್ರತಿದಿನ ಮುಂಜಾನೆ ೧೫ ನಿಮಿಷ, ಲಿಂಗವನ್ನು ಏಕಾಗ್ರತೆಯಿಂದ ವೀಕ್ಷಿಸುತ್ತ ಲಿಂಗ ಧ್ಯಾನ ಮಾಡಿ,೧ ಮಾಸಿಕದ ನಂತರ ನಿಮ್ಮ ಅನುಭವ ಮತ್ತು ಬದಾಲಾವಣೆಯನ್ನ ಹಂಚಿಕೋಳ್ಳಿ 🌺🌺

  • ಚಿಂತೆ, ಭಯ, ಆತಂಕ, ವ್ಯಸನದಿಂದ ಹೋರಗೆಬರಲು
    ಜೀವನದಲ್ಲಿ ಸ್ಪಷ್ಟತೆ, ಆತ್ಮವಿಶ್ವಾಸ, ಸದೃಢ ಚಿಂತನೆ,
    ದೈಹಿಕ ಮತ್ತು ಮಾನಸಿಕ ಸಂತೂಲನಕ್ಕಾಗೀ,
    ಪ್ರತಿದಿನ ಮುಂಜಾನೆ ೧೫ ನಿಮಿಷ, ಲಿಂಗವನ್ನು ಏಕಾಗ್ರತೆಯಿಂದ ವೀಕ್ಷಿಸುತ್ತ ಲಿಂಗ ಧ್ಯಾನ ಮಾಡಿ,೧ ಮಾಸಿಕದ ನಂತರ ನಿಮ್ಮ ಅನುಭವ ಮತ್ತು ಬದಾಲಾವಣೆಯನ್ನ ಹಂಚಿಕೋಳ್ಳಿ 🌺🌺

Leave a Reply

Your email address will not be published. Required fields are marked *

ಪ್ರಧಾನ ಕಾರ್ಯದರ್ಶಿ, ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ತಾಲ್ಲೂಕು