ಹುಬ್ಬಳ್ಳಿ:
ಹಿರಿಯ ಶರಣ ಸಾಹಿತಿ ಡಾ. ಸಂಗಮೇಶ ಹಂಡಿಗಿ ಅವರ ಸ್ಮರಣೆಯಲ್ಲಿ ಕಳೆದ ಐದು ವರ್ಷಗಳಿಂದ ನೀಡಲಾಗುತ್ತಿರುವ “ಸಂಗಮ ಸಿರಿ” ರಾಜ್ಯಮಟ್ಟದ ಪ್ರಶಸ್ತಿಯು ಈ ವರ್ಷ ವಚನ ಸಾಹಿತ್ಯ ಸಂಶೋಧಕರಿಗೆ ನೀಡಲಾಗುತ್ತಿದೆ.
ಈ ಬಾರಿಯ ಪ್ರಶಸ್ತಿ ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ಅನುಭಾವಿ ಡಾ. ದಯಾನಂದ ನೂಲಿ ಅವರಿಗೆ ನೀಡಲಾಗುತ್ತಿದೆ. ಈ ಪ್ರಶಸ್ತಿಯು 10 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.
ಡಾ. ದಯಾನಂದ ನೂಲಿ ಅವರು ಮೂಲತಃ ವೈದ್ಯಕೀಯ ಕ್ಷೇತ್ರದಲ್ಲಿ ಶಸ್ತ್ರಚಿಕಿತ್ಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಅವರು ವಚನಗಳನ್ನು ವೈಜ್ಞಾನಿಕವಾಗಿ ಇರುವುದರ ಕುರಿತು “ಶರಣರ ಶಿವಯೋಗ ” ಎಂಬ ಕೃತಿಯಲ್ಲಿ ವಚನಗಳನ್ನು ವೈಜ್ಞಾನಿಕ ಹಿನ್ನೆಲೆಯಲ್ಲಿ ಅಧ್ಯಯನ ಮಾಡಿದ್ದಾರೆ.
ಇವರ “ವಚನಗಳಲ್ಲಿ ಆರೋಗ್ಯಕರ ಪರಿಕಲ್ಪನೆ”, “ಮರುಳ ಶಂಕರ ದೇವರು ಅನುಭವ ಯಾತ್ರೆ” ಎಂಬ ಶರಣರ ವಚನಗಳ ವೈಜ್ಞಾನಿಕ ಹಿನ್ನೆಲೆಯಲ್ಲಿ ಅಧ್ಯಯನ ಮಾಡಿದ್ದು ಗಮನಾರ್ಹ . ಡಾ.ಪ್ರಭಾಕರ ಕೋರೆ ಅವರ ಕುರಿತು “ಪ್ರಭಾಂಕಲಿ “ “ನೆಹಲ್ “ಎಂಬ ಕಥಾ ಸಂಕಲನವನ್ನು ಹೊರತಂದಿದ್ದಾರೆ.
ಸಾಹಿತಿಕ ಹಾಗೂ ವೈದ್ಯಕೀಯ ಹಲವು ಲೇಖನಗಳನ್ನು ಪ್ರಕಟಿಸಿದ್ದಾರೆ. ರಾಷ್ಟ್ರೀಯ, ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ. ರಾಜ್ಯದ ಒಟ್ಟು 36 ಜನ ಸಂಶೋಧಕರು ಹೆಸರು ಪ್ರಶಸ್ತಿ ಆಯ್ಕೆಗೆ ಬಂದಿದ್ದವು.
ನೂಲಿನ ಅವರಿಗೆ ಈ ವರ್ಷ ನವೆಂಬರ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ “ಸಂಗಮ ಸಿರಿ” ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು ಎಂದು ಡಾ. ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷ ಜಿ.ಬಿ. ಗೌಡಪ್ಪಗೊಳ, ಗೌರವಾಧ್ಯಕ್ಷ ಗಣಪತಿ ಗಂಗೊಳ್ಳಿ, ಕಾರ್ಯಕ್ರಮ ಸಂಯೋಜಕ ಡಾ. ಪ್ರಭು ಗಂಜೀಹಾಳ ತಿಳಿಸಿದ್ದಾರೆ.
