ಬಸವಕಲ್ಯಾಣ:
ಶರಣ ವಿಜಯೋತ್ಸವ ಆರಂಬೋತ್ಸವ ನಿಮಿತ್ಯ ರವಿವಾರ ಬೆಳಿಗ್ಗೆ ನಗರದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ, ಪ್ರಾರ್ಥನೆಗೈದ ನಂತರ ಪರುಷಕಟ್ಟೆಯವರೆಗೆ ಪಲ್ಲಕ್ಕಿಯಲ್ಲಿ ವಚನ ಸಾಹಿತ್ಯದ ಮೆರವಣಿಗೆ ಭಕ್ರಿಭಾವ ಶೃದ್ಧೆಯಿಂದ ನಡೆಯಿತು.
ನಂತರ ಪರುಷಕಟ್ಟೆಯಲ್ಲಿ ಪ್ರಾರ್ಥನೆ, ವಚನ ಪಠಣದ ನಂತರ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಮಾತನಾಡಿ, ನಾಡು ಘನತೆ, ಗೌರವದಿಂದ ಬದುಕಬೇಕಾಗದರೆ ಅನೇಕ ಶರಣರು ಪ್ರಾಣ ಬಲಿದಾನಗೈದಿದ್ದಾರೆ. ಅದರಲ್ಲಿ ಹರಳಯ್ಯ, ಮಧುವರಸರು ಮುಂಚೂಣಿಯಲ್ಲಿದ್ದಾರೆ.

ಶರಣ ಸಂಸ್ಕೃತಿಯನ್ನು ನಾವೆಲ್ಲ ಪಾಲಿಸಿ ಪವಿತ್ರರಾಗೋಣ. ವಚನ ಸಾಹಿತ್ಯದ ಆಶಯಗಳು ಸಂವಿಧಾನದ ಮೂಲಕ ಜಗತ್ತಿಗೆ ಮುಟ್ಟುತ್ತಿವೆ. ಬಸವಕಲ್ಯಾಣದ ಪ್ರತಿಯೊಬ್ಬರು ಹೊಸ ಕಾರ್ಯವನ್ನು ಪ್ರಾರಂಭಿಸುವಾಗ ಪರುಷಕಟ್ಟೆಯಲ್ಲಿ ಪೂಜೆ ಸಲ್ಲಿಸಿ ಆರಂಭಿಸಬೇಕು ಎಂದು ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ನುಡಿದರು.
ಅನುಭವ ಮಂಟಪದ ಸಂಚಾಲಕ ಪೂಜ್ಯ ಶಿವಾನಂದ ದೇವರು ಮಾತನಾಡಿ, ವಚನಗಳು ಮನುಷ್ಯನ ಸುಖಮಯ ಜೀವನಕ್ಕೆ ಆಧ್ಯಾತ್ಮಿಕ ಮತ್ತು ಜ್ಞಾನ ಸಂಪತ್ತಿಗೆ, ಸಾಮಾಜಿಕ ಜೀವನಕ್ಕೆ ಸಂಜೀವಿನಿಯಾಗಿವೆ ಎಂದು ನುಡಿದರು.
ಪೂಜ್ಯ ಸತ್ಯಕ್ಕತಾಯಿ, ಪೂಜ್ಯ ಬಸವದೇವರು, ಪೂಜ್ಯ ಶ್ರೀಶೈಲ ದೇವರು ನೇತೃತ್ವ ವಹಿಸಿಕೊಂಡಿದ್ದರು.
ಅಧಿಕಾರಿ ಸಾವಿತ್ರಿ ಶರಣು ಸಲಗರ ಬಸವೇಶ್ವರ ದೇವಸ್ಥಾನದಲ್ಲಿ ವಚನ ಸಾಹಿತ್ಯಕ್ಕೆ ಗೌರವಾರ್ಪಣೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.
ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ಬಿಡಿಪಿಸಿ ಅಧ್ಯಕ್ಷ ಅನಿಲಕುಮಾರ ರಗಟೆ, ಸಹಕಾರ್ಯದರ್ಶಿ ಬಸವರಾಜ ಬಾಲಿಕಿಲೆ, ಬಿಡಿವಿಸಿ ಕೋಶಾಧ್ಯಕ್ಷ ಶಿವರಾಜ ಶಾಶೆಟ್ಟಿ, ಮಹಿಳಾ ಕದಳಿ ವೇದಿಕೆ ಅಧ್ಯಕ್ಷೆ ನಿರ್ಮಲಾ ಶಿವಣಕರ, ಉದ್ಯಮಿ ಕಲ್ಯಾಣರಾಯ ಶಿವಣಕರ, ರಾಷ್ಟ್ರೀಯ ಬಸವದಳದ ತಾಲೂಕು ಅಧ್ಯಕ್ಷ ರವೀಂದ್ರ ಕೋಳಕುರ, ಬಿಡಿಪಿಸಿ ನಿರ್ದೇಶಕಿ ಪುಷ್ಪಾವತಿ ಮಾಮಾ, ಚನ್ನಪ್ಪ ಪ್ರತಾಪೂರೆ, ರೇವಣಪ್ಪ ರಾಯವಾಡೆ, ಶಂಕರ ಕರಣೆ, ಲಿಂಗರಾಜ ಶಾಶೆಟ್ಟಿ, ಉಷಾ ಮಿರ್ಚೆ, ಮಲ್ಲಮ್ಮಾ ಪಾಟೀಲ, ಡಾ. ಸಂಗೀತಾ ಮಂಠಾಳೆ, ಸುಲೋಚನಾ ಗುದಗೆ, ಉಷಾ ಕನ್ನಾಡೆ, ಮೀನಾ ಜಾಧವ, ವಿತಾ ಮೂಲಗೆ ಸೇರಿದಂತೆ ನೂರಾರು ಶರಣ-ಶರಣೆಯರು ಭಾಗವಹಿಸಿದರು.

೧೨ ರಂದು ಮುಂಜಾನೆ ಸಾಮೂಹಿಕ ಇಷ್ಟಲಿಂಗಯೋಗ, ೧೧ ಗಂಟೆಗೆ ವಚನ ಓದು, ಸಾಯಂಕಾಲ ೬ ಗಂಟೆಗೆ ಮಾಚಿದೇವ ಮಲ್ಲಿಬೊಮ್ಮ ವೀರಸೈನಿಕರ ವೇದಿಕೆಯನ್ನು ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ಉದ್ಘಾಟಿಸುವರು. ಮಾಜಿ ಸೈನಿಕರಾದ ಬಸವರಾಜ ಬಿರಾದಾರ, ವಿನೋದಕುಮಾರ ಭಗವಂತ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ರಾಜಕುಮಾರ ಲದ್ದೆ ಅಧ್ಯಕ್ಷತೆ ವಹಿಸಿ, ಮಲ್ಲಪ್ಪ ಬಾಗ್ಯವಾಡಿ ಮತ್ತಿತರರು ಇರುವರು.

ಒಳ್ಳೆಯ ಕಾರ್ಯಕ್ರಮವಾಗಿದೆ ಜೈ ಬಸವ ಶರಣು ಶರಣಾರ್ಥಿ