ಶರಣ ಸಂಸ್ಕೃತಿ ಉತ್ಸವ: ವಚನ ಕಂಠಪಾಠ, ಶರಣರ ವೇಷಭೂಷಣ ಸ್ಪರ್ಧೆ

ಬಸವ ಮೀಡಿಯಾ
ಬಸವ ಮೀಡಿಯಾ

ಚಿತ್ರದುರ್ಗ :

ನಗರದ ಶ್ರೀ ಮುರುಘಾಮಠದಲ್ಲಿ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಮಂಗಳವಾರ ೧೦.೩೦ ಗಂಟೆಗೆ ವಚನ ಕಂಠಪಾಠ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಶಿರಸಂಗಿ ಶ್ರೀ ಮಹಾಲಿಂಗೇಶ್ವರ ಮಠದ ಪೂಜ್ಯ ಬಸವ ಮಹಾಂತ ಸ್ವಾಮೀಜಿಗಳು ಶರಣ ಸಂಸ್ಕೃತಿ ಉತ್ಸವವು ವಚನ ಕಂಠಪಾಠ ಸ್ಪರ್ಧೆಗಳನ್ನು ಏರ್ಪಡಿಸುವುದರ ಮೂಲಕ ಸಮಾಜದಲ್ಲಿ ಶರಣರ ಆಶಯಗಳನ್ನು ತಿಳಿಸುವ ಕಾರ್ಯವನ್ನು ಮಾಡುತ್ತಾ ಬಂದಿದೆ.

ಮಕ್ಕಳು, ವಿದ್ಯಾರ್ಥಿಗಳು ಹಾಗೂ ಎಲ್ಲಾ ವಯಸ್ಕರು ವಚನಗಳನ್ನು ಪಠಿಸುವುದರ ಮೂಲಕ ಉತ್ತಮ ಸಮಾಜ ನಿರ್ಮಿಸಲು ಸಾಧ್ಯವೆಂದು ನುಡಿದರು.

ಸ್ಪರ್ಧೆಯಲ್ಲಿ ಒಟ್ಟು ೫೦ ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು. ತೀರ್ಪುಗಾರರಾಗಿ ಟಿ. ಪಿ ಜ್ಞಾನಮೂರ್ತಿ, ಜಿ.ಟಿ. ನಂದೀಶ, ಬಸವರಾಜ ಕಟ್ಟಿ ಕಾರ್ಯ ನಿರ್ವಹಿಸಿದರು.

ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ಬಸವಾದಿ ಶರಣರ ವೇಷಭೂಷಣ ಸ್ಪರ್ಧೆಯ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಪೂಜ್ಯ ಶಾಂತವೀರ ಮುರುಘೇಂದ್ರ ಸ್ವಾಮೀಜಿಗಳು, “ಮಕ್ಕಳು ಹಾಗೂ ವಯಸ್ಕರು ಬಸವಾದಿ ಶರಣರ ವೇಷಭೂಷಣಗಳನ್ನು ಧರಿಸಿ ಸ್ಪರ್ಧಿಸುವ ಮೂಲಕ ೧೨ನೇ ಶತಮಾನದ ಬಸವಾದಿ ಶರಣ-ಶರಣೆಯರ ಹಾಗೂ ಚಿಂತಕರ ತತ್ವಗಳನ್ನು ಅರಿತುಕೊಳ್ಳಲು ಇಂತಹ ಸ್ಪರ್ಧೆಗಳು ಸಹಾಯಕವಾಗುತ್ತವೆ. ಅಲ್ಲದೆ, ವೇಷಭೂಷಣ ಸ್ಪರ್ಧೆಗಳು ಮಕ್ಕಳಲ್ಲಿರುವ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಲು ಸಹಕಾರಿಯಾಗುತ್ತವೆ” ಎಂದು ನುಡಿದರು.

ಸ್ಪರ್ಧೆಯ ತೀರ್ಪುಗಾರರಾಗಿ ಸಂಗಮೇಶ, ಗದ್ದಿಗೆಯ್ಯ ಕಿತ್ತೂರುಮಠ, ಗಣೇಶಯ್ಯ ಕೆ.ಪಿ.ಎಂ. ಇವರುಗಳು ಕಾರ್ಯನಿರ್ವಹಿಸಿದರು.

ಯೋಗಾಸನ ತರಬೇತಿ ಶಿಬಿರ ನಡೆಯಿತು. ಶಿಬಿರದಲ್ಲಿ ರಾಜವೀರ ಮದಕರಿ ನಾಯಕರ ಜಯಂತೋತ್ಸವವನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲ್ಲಿ ಆಶಾರಾಣಿ ನಿರೂಪಿಸಿ, ಜ್ಞಾನಮೂರ್ತಿ ಟಿ.ಪಿ ಸ್ವಾಗತಿಸಿ, ಜಿ.ಟಿ. ನಂದೀಶ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *