ಶರಣ ಸಂಸ್ಕೃತಿ ಉತ್ಸವ: ಜಮುರಾ ಕಪ್ ಕ್ರೀಡಾ ಕೂಟ ಶುರು

ಬಸವ ಮೀಡಿಯಾ
ಬಸವ ಮೀಡಿಯಾ

ಚಿತ್ರದುರ್ಗ :

ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಆಯೋಜಿಸಲಾಗಿರುವ ‘ಜಮುರಾ ಕಪ್’ ಕ್ರೀಡಾಕೂಟವನ್ನು ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯದ ಕ್ರೀಡಾಂಗಣದಲ್ಲಿ ಮಂಗಳವಾರ ಸಂಜೆ ಉದ್ಘಾಟಿಸಲಾಯಿತು.

ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗು ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮಿಗಳು ಹಾಗೂ ಚಿತ್ರದುರ್ಗ ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಮಹಾಸ್ವಾಮಿಗಳು ಕ್ರೀಡಾ ಧ್ವಜಾರೋಹಣ ಮಾಡಿ ನಂತರ ಪಾರಿವಾಳಗಳನ್ನು ಹಾರಿಬಿಡುವ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿ ಡಾ. ಬಸವಕುಮಾರ ಸ್ವಾಮಿಗಳು ಮಾತನಾಡಿ, ಎಸ್.ಜೆ.ಎಂ. ವಿಶ್ವವಿದ್ಯಾಲಯ ಹಾಗು ವಿದ್ಯಾಪೀಠದ ಎಲ್ಲಾ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಈ ಕ್ರೀಡಾಕೂಟದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವುದು ಸ್ವಾಗತಾರ್ಹ.

ಬಾವಿಯಲ್ಲಿ ಈಜಾಡುವವರು ಸಮುದ್ರದಲ್ಲಿ ಈಜುವಂತೆ ಆಗಬೇಕು. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನವನ್ನು ಗ್ರಂಥಾಲಯದಲ್ಲಿ ಹಾಗೂ ಕ್ರೀಡಾಂಗಣದಲ್ಲಿ ಕಳೆಯವುಂತಾಗಬೇಕು.

ಇವು ಬುದ್ಧಿಶಕ್ತಿಗೆ ಕ್ರೀಡೆಗಳು ತುಂಭಾ ಸಹಕಾರಿಯಾಗುತ್ತವೆ. ಮಕ್ಕಳು, ಯುವಕರು ಮಳೆ-ಗಾಳಿಗೆ ಹೊಂದಿಕೊಂಡರೆ ಮಾತ್ರ ಪರಿಪೂರ್ಣ ಪ್ರಜೆಗಳಾಗಿ ಬದುಕಲು ಸಾಧ್ಯವೆಂದು ನುಡಿದರು.

ನಂತರ ಶ್ರೀಗಳು ತಾವೇ ಕ್ರಿಕೆಟ್ ಅಂಕಣದಲ್ಲಿ ವಿದ್ಯಾರ್ಥಿಗಳೊಂದಿಗೆ ಬೆರೆತು ಆಟಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಚಿತ್ರದುರ್ಗ ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಮಹಾಸ್ವಾಮಿಗಳು, ಹಿಂದೆ ಶ್ರೀ ಮಠವು ಜಮುರಾ ಕಪ್‌ಗೆ ವಿವಿಧ ರಾಜ್ಯಗಳಿಂದ ಕ್ರೀಡಾಳುಗಳನ್ನು ಕರೆದು ಕ್ರೀಡೆಗಳನ್ನು ಆಯೋಜಿಸುತ್ತಿದ್ದರು.

ಆದರೆ ಬಸವಕುಮಾರ ಸ್ವಾಮಿಗಳು ಎಸ್.ಜೆ.ಎಂ. ವಿಶ್ವವಿದ್ಯಾಲಯ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಅಡಿಯಲ್ಲಿ ಬರುವ ಎಲ್ಲ ಸಂಸ್ಥೆಯ ವಿದ್ಯಾರ್ಥಿಗಳಿಗೆ ಈ ಅವಕಾಶವನ್ನು ಕಲ್ಪಿಸಿದ್ದಾರೆ.

ನಿಮ್ಮ ಸುತ್ತ ಮುತ್ತಲು ಸಿಗುವ ಇಂತಹ ಅವಕಾಶಗಳನ್ನು ಉಪಯೋಗಿಸಿಕೊಂಡು ಸೋಲು-ಗೆಲುವನ್ನು ಸಮಾನ ಚಿತ್ತದಿಂದ ಸ್ವೀಕರಿಸಿ ಮುಂದಿನ ದಿನಗಳಲ್ಲಿ ರಾಜ್ಯ, ರಾಷ್ಟ್ರಮಟ್ಟಕ್ಕೆ ಭಾಗವಹಿಸುವ ಆತ್ಮಸ್ಥೈರ್ಯ ನಿಮ್ಮಲ್ಲಿ ಮೂಡಲಿ ಎಂದು ನುಡಿದರು.

ಈ ಕ್ರೀಡಾಕೂಟದಲ್ಲಿ ಕಬಡ್ಡಿ, ವಾಲಿಬಾಲ್, ಕ್ರಿಕೆಟ್ ಥ್ರೋಬಾಲ್ ಇನ್ನು ಮುಂತಾದ ಕ್ರೀಡೆಗಳನ್ನು ಆಯೋಜಿಸಲಾಗಿದೆ.

ಥ್ರೋಬಾಲ್ ವಿಭಾಗದಲ್ಲಿ ಪದವಿಯ ೮ ತಂಡಗಳು, ಪ್ರೌಢಶಾಲೆಯ ೬ ತಂಡಗಳು, ಹಾಗೂ ಕಬಡ್ಡಿಯಲ್ಲಿ ಮಹಿಳೆಯರ ೮ ತಂಡಗಳು, ಪ್ರೌಢಶಾಲೆಯ ೬ ತಂಡಗಳು, ಪದವಿಯ ೩ ತಂಡಗಳು, ಪದವಿಪೂರ್ವ ಕಾಲೇಜುಗಳ ೩ ತಂಡಗಳು ಭಾಗವಹಿಸಿದ್ದವು.

ಥ್ರೋಬಾಲ್ ತೀರ್ಪುಗಾರರಾಗಿ ರಾಮು, ಶಾರದಮ್ಮ, ಬಸವರಾಜ ಹಾಗೂ ತಂಡದವರು, ಕಬಡ್ಡಿ ಆಟದ ತೀರ್ಪುಗಾರರಾಗಿ ಮಧು, ಸುನಿತಾ ತಂಡದವರು, ವಾಲಿಬಾಲ್ ಆಟದ ತೀರ್ಪುಗಾರರಾಗಿ ರಾಜನಾಯ್ಕ ಹಾಗೂ ತಂಡದವರು, ಕ್ರಿಕೆಟ್ ಆಟದ ತೀರ್ಪುಗಾರರಾಗಿ ಅರುಣಕುಮಾರ ಮತ್ತು ತಂಡದವರು ಕಾರ್ಯನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕ ನಿರ್ದೇಶಕರಾದ ಡಾ. ಕೆ. ಕುಮಾರಸ್ವಾಮಿ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
1 Comment
  • ಒಳ್ಳೆಯ ಕಾರ್ಯಕ್ರಮವಾಗಿದೆ ಜೈ ಬಸವ ಶರಣು ಶರಣಾರ್ಥಿ

Leave a Reply

Your email address will not be published. Required fields are marked *