‘ಕಾಯಕದಲ್ಲಿಯೇ ದೇವರ ಕಂಡ ಶರಣೆ ಕೊಟ್ಟಣದ ಸುಮ್ಮವ್ವೆ’

ಬಸವ ಮೀಡಿಯಾ
ಬಸವ ಮೀಡಿಯಾ

ಲಿಂಗಸುಗೂರು :

12ನೇ ಶತಮಾನದ ಬಸವಾದಿ ಶರಣೆ ಕೊಟ್ಟಣದ ಸುಮ್ಮವ್ವೆ ಅಪಾರ ಲಿಂಗನಿಷ್ಠೆ, ಕಾಯಕನಿಷ್ಠೆ ಮತ್ತು ಧೈರ್ಯವಂತ ಶರಣೆಯಾಗಿದ್ದರು ಎಂದು ಬಸವಾನುಯಾಯಿ ಅಶ್ವಿನಿ ಮಿಟ್ಟಿಮನಿ ಹೇಳಿದರು.

ಮಂಗಳವಾರ ವಿಜಯಮಹಾಂತೇಶ್ವರ ಶಾಖಾ ಅನುಭವ ಮಂಟಪದಲ್ಲಿ ಬಸವಪರ ಸಂಘಟನೆಗಳ ಸಹಯೋಗದಲ್ಲಿ ನಡೆಯುತ್ತಿರುವ ‘ನವ ವಚನ ಚಿಂತನ’ ಕಾರ್ಯಕ್ರಮದಲ್ಲಿ
ಶರಣೆ ಕೊಟ್ಟಣದ ಸುಮ್ಮವ್ವೆ ಅವರ ಜೀವನ ಚರಿತ್ರೆ ಮತ್ತು ಅವರ ಒಂದು ವಚನದ ವಿಶ್ಲೇಷಣೆ ಮಾಡುತ್ತ ಮಾತನಾಡಿದರು.

ಕಾಯಕದಲ್ಲಿ ನಿಷ್ಠೆ ಹೊಂದಿದ್ದ ಸುಮ್ಮವ್ವೆ, ಭತ್ತವನ್ನು ಕುಟ್ಟುವ ತಮ್ಮ ಕಾಯಕವನ್ನು ತನು ಮನ ಭಾವದಿಂದ ಮಗ್ನರಾಗಿ ಮಾಡುತ್ತಿದ್ದರು. ತಮ್ಮ ಕಾಯಕದಲ್ಲೇ ದೇವರನ್ನು ಕಂಡುಕೊಂಡು, ನಿಜವಾದ ವೃತಾಚರಣೆಯನ್ನು ತಮ್ಮ ವಚನದಲ್ಲಿ ಅವರು ವ್ಯಕ್ತಪಡಿಸಿದ್ದಾರೆ. ಬಸವಣ್ಣನವರ ಸಮಕಾಲೀನ ಶರಣೆ ಅವರಾಗಿದ್ದರು ಎಂದು ಅಶ್ವಿನಿ ಹೇಳಿದರು.

ನಂತರದಲ್ಲಿ ಸುಮ್ಮವ್ವೆ ವಚನದ ಬಗ್ಗೆ ಸಂವಾದ ನಡೆಯಿತು.

ಕಾರ್ಯಕ್ರಮದ ಸಾನಿಧ್ಯವನ್ನು ಪೂಜ್ಯರಾದ ಸಿದ್ದಲಿಂಗ ಮಹಾಸ್ವಾಮಿಗಳು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಗಂಗಮ್ಮ ಸತ್ಯಂಪೇಟೆ, ಶಿಲ್ಪಾ ನಾರನಾಳ, ಜಯಶ್ರೀ ಸಕ್ರಿ, ಸುಮಿತ್ರ ಪಾಟೀಲ, ದೀಪಾ ಇಜೇರಿ, ಶಿವಪ್ಪ ಸಕ್ರಿ, ಶರಣಪ್ಪ ಸಜ್ಜನ ಸೇರಿದಂತೆ ಅಕ್ಕನ ಬಳಗದ ಸದಸ್ಯರು ಹಾಗೂ ಮಠದ ಸದ್ಭಕ್ತರು ಭಾಗವಹಿಸಿದ್ದರು.

ಅಕ್ಕನ ಬಳಗದ ತಾಯಂದಿರು ವಚನ ಪ್ರಾರ್ಥನೆಯನ್ನು ಮಾಡಿದರು. ಕಾರ್ಯಕ್ರಮದ ನಿರೂಪಣೆ ಶಕುಂತಲಾ ಗೊರೆಬಾಳ ಮಾಡಿದರು. ಶೈಲಜಾ ಬನ್ನಿಕೊಪ್ಪ ಅವರಿಂದ ಪ್ರಸಾದ ದಾಸೋಹ ಸೇವೆ ನಡೆಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *