ಚಿತ್ರದುರ್ಗ:
ಸುಕ್ಷೇತ್ರ ಬಸವಕಲ್ಯಾಣದಲ್ಲಿ ಬಸವಧರ್ಮ ಪೀಠದಿಂದ ಅಕ್ಟೋಬರ್ 24, 25 ಮತ್ತು 26 ರಂದು 25ನೇ ವರ್ಷ (ಬೆಳ್ಳಿಮೋತ್ಸವ)ದ ಕಲ್ಯಾಣ ಪರ್ವ ಸಮಾವೇಶ ಆಯೋಜಿಸಲಾಗಿದೆ.

ಕೂಡಲಸಂಗಮದ ಬಸವಧರ್ಮ ಪೀಠದ ಅಧ್ಯಕ್ಷರಾದ ಪೂಜ್ಯ ಡಾ. ಗಂಗಾ ಮಾತಾಜಿ ಅವರು ಶ್ರೀಗುರು ತಿಪ್ಪೇರುದ್ರಸ್ವಾಮಿ ಅವರ ಸುಕ್ಷೇತ್ರವಾದ ನಾಯಕನಹಟ್ಟಿಯಲ್ಲಿ ಕಲ್ಯಾಣ ಪರ್ವದ ಬಿತ್ತಿಪತ್ರಗಳನ್ನು ಬಿಡುಗಡೆಗೊಳಿಸುವುರೊಂದಿಗೆ ಜ್ಯೋತಿ ಯಾತ್ರೆಗೆ ಚಾಲನೆ ನೀಡಿದರು.
ನಂತರ ಜಿಲ್ಲೆಯ ರಾಷ್ಟ್ರೀಯ ಬಸವದಳದ ಕಾರ್ಯಕರ್ತರು ಹಾಗೂ ಬಸವಭಕ್ತರು ತಿಪ್ಪೇರುದ್ರಸ್ವಾಮಿ ಅವರ ಗದ್ದುಗೆಯಿಂದ ಜ್ಯೋತಿಯನ್ನು ಹೊತ್ತಿಸಿಕೊಂಡು ಜಿಲ್ಲೆಯಾದ್ಯಂತ ಸಂಚರಿಸಲು ಆರಂಭಿಸಿದ್ದಾರೆ.

17 ದಿನಗಳ ಕಾಲ ಜಿಲ್ಲೆಯ ಹಳ್ಳಿಗಳ, ನಗರದ ಭಕ್ತರ ಮನೆ ಮನೆಗಳಲ್ಲಿ ಬಸವತತ್ವ, ಶರಣತತ್ವವನ್ನು ಪ್ರಚಾರ ಮಾಡುತ್ತಾ, ಲಿಂಗಾಯತ ಧರ್ಮದ ಕ್ರಾಂತಿಭೂಮಿ ಬಸವಕಲ್ಯಾಣಕ್ಕೆ ಆಗಮಿಸುವಂತೆ ಕರೆ ನೀಡುತ್ತಿದ್ದಾರೆ.

18ರಂದು ಜಗದ್ಗುರು ಮುರುಘರಾಜೇಂದ್ರ ಮಠದ ಶರಣ ಸಂಸ್ಕೃತಿ ಉತ್ಸವದ ಮಹಿಳಾ ಗೋಷ್ಠಿಯಲ್ಲಿ ಪಾಲ್ಗೊಂಡು ಇದೇ ತಿಂಗಳು 24ರಂದು ಜ್ಯೋತಿ ಬಸವಕಲ್ಯಾಣ ತಲುಪಲಿದೆ.


ಚಿತ್ರದುರ್ಗ ಬಸವ ಮಠದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರುವ ಪೂಜ್ಯ ದಾನೇಶ್ವರಿ ಮಾತಾಜಿಯವರು, ರಾಷ್ಟ್ರೀಯ ಬಸವದಳದ ಜಿಲ್ಲಾಧ್ಯಕ್ಷರಾದ ವೆಂಕಟೇಶ ರೆಡ್ಡಿ, ಅಮರೇಶ, ಸುಧಾ ಶಿವಾನಂದ, ಕೊರ್ಲಹಳ್ಳಿ ವೀರಣ್ಣ, ಬಜ್ಜಿ ವೀರಣ್ಣ ಮತ್ತಿತರ ಪ್ರಮುಖರ ನೇತೃತ್ವದಲ್ಲಿ ಜ್ಯೋತಿ ಯಾತ್ರೆ ಸಾಗುತ್ತಿದೆ.


ಓಂ ಶ್ರೀ ಗುರು ಬಸವ ಲಿಂಗಾಯ ನಮಃ🙏🙏
ಓಂ ಶ್ರೀ ಪಂಚಗಣಾಧೀಶ್ವರರಾಯ ನಮಃ🙏🙏🙏
ಒಳ್ಳೆಯ ಕಾರ್ಯಕ್ರಮವಾಗಿದೆ ಜೈ ಬಸವ ಶರಣು ಶರಣಾರ್ಥಿ