ಅನುಭವ ಮಂಟಪದಲ್ಲಿ ಜಮುರಾ ಕಪ್ ಕ್ರೀಡಾಕೂಟದ ಸಮಾರೋಪ

ಬಸವ ಮೀಡಿಯಾ
ಬಸವ ಮೀಡಿಯಾ

ಶರಣ ಸಂಸ್ಕೃತಿ ಉತ್ಸವ ೨೦೨೬

ಚಿತ್ರದುರ್ಗ :

ಶರಣ ಸಂಸ್ಕೃತಿ ಉತ್ಸವ ೨೦೨೬ ರ ಅಂಗವಾಗಿ ಏರ್ಪಡಿಸಿದ್ದ ಜಮುರಾ ಕಪ್ ಕ್ರೀಡಾಕೂಟದ ಸಮಾರೋಪ ಶ್ರೀಮಠದ ಅನುಭವ ಮಂಟಪದಲ್ಲಿ ಗುರುವಾರ ನೆರವೇರಿತು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಮಡಿವಾಳ ಮಾಚಿದೇವ ಗುರುಪೀಠದ ಶ್ರೀ ಜಗದ್ಗುರು ಬಸವ ಮಾಚಿದೇವ ಸ್ವಾಮೀಜಿಗಳು ಮಾತನಾಡಿ, ಇಂದು ಮಕ್ಕಳು ಕ್ರೀಡಾಕೂಟದಲ್ಲಿ ಭಾಗವಹಿಸಿರುವುದು ಹಿರಿಯರಿಗೆ ಸ್ಪೂರ್ತಿಯನ್ನು ತಂದಿದೆ.

ಮಧ್ಯ ಕರ್ನಾಟಕದ ದೊಡ್ಡ ಉತ್ಸವ ಈ ಶರಣ ಸಂಸ್ಕೃತಿ ಉತ್ಸವವಾಗಿದೆ. ಇಂತಹ ಉತ್ಸವಗಳನ್ನು ಅರ್ಥಪೂರ್ಣವಾಗಿ ಅಯೋಜಿಸಿ ಸಮಾಜದ ಸರ್ವಾಂಗೀಣ ಪ್ರಗತಿಗೆ
ಶ್ರೀ ಮಠವು ಕಾರಣಿಭೂತವಾಗಿದೆ.
ಹಿಂದುಳಿದ ವರ್ಗದವರಿಗೆ ಮಠಗಳನ್ನು ಕಟ್ಟಿಕೊಟ್ಟ ಮಠವೆಂದರೆ ಅದು ಶ್ರೀ ಮುರುಘಾಮಠವಾಗಿದೆ.

ಕ್ರೀಡೆ ಯಾವ ಧರ್ಮ, ಜಾತಿಗೂ ಸೀಮಿತವಾಗಿರುವುದಿಲ್ಲ. ಸಾಧನೆ ಮಾಡುವವರಿಗೆ ಕ್ರೀಡೆ ಜೀವನ ನೀಡುತ್ತದೆ ಎಂದು ನುಡಿದರು.

ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿಗಳು ಮಾತನಾಡಿ, ಶ್ರೀಮಠ ಎಲ್ಲಾ ಸಮುದಾಯದವರಿಗೂ
ಪ್ರೋತ್ಸಾಹವನ್ನು ಸದಾ ನೀಡುತ್ತಾ ಬಂದಿದೆ. ಅದರಂತೆ ಈ ಉತ್ಸವದಲ್ಲಿ ವಿವಿಧ ಸಮುದಾಯದವರು ಸಹಕಾರವನ್ನು ನೀಡುತ್ತಾ ಬಂದಿದ್ದಾರೆ.

ಇಂದು ನಡೆದ ಮಹಿಳಾ ಕ್ರೀಡಾಕೂಟದಲ್ಲಿ ಲೆಮನ್ ಅಂಡ್ ಸ್ಕೂಲ್ ಮುಂತಾದ ಕ್ರೀಡೆಗಳನ್ನು
ಅರ್ಥಗರ್ಭಿತವಾಗಿ ನಡೆಸಲಾಯಿತು. ಈ ಕ್ರೀಡಾಕೂಟದಲ್ಲಿ ಹಿರಿಯರು ಕಿರಿಯರು ಅತ್ಯಂತ ಕ್ರೀಡಾ ಸ್ಪೂರ್ತಿಯಿಂದ ಭಾಗವಹಿಸಿ ಸ್ಪೂರ್ತಿಯನ್ನು ಮೆರೆದಿದ್ದಾರೆ ಎಂದು ನುಡಿದರು.

ದೇವಿ ಕುಮಾರಿ ಮಾತನಾಡಿ, ಇಂದಿನ ಇಂದಿನ ಕ್ರೀಡಾಕೂಟಗಳಿಂದ ನಮ್ಮಗಳ ಹಳೆಯ ಬಾಲ್ಯದ ನೆನಪಾಯಿತು. ಕಿರಿಯರಿಂದ ಹಿರಿಯರವರೆಗೂ ಉತ್ಸಾಹದಿಂದ ಪಾಲ್ಗೊಂಡು ಕ್ರೀಡೆಯನ್ನು ಪಾಲ್ಗೊಂಡು ಆಟವಾಡಿದರು ಎಂದು ನುಡಿದರು.

ಕಾರ್ಯಕ್ರಮದಲ್ಲಿ ಶ್ರೀ ಮಲ್ಲಿಕಾರ್ಜುನ ಶ್ರೀ ಜಯದೇವ ಜಗದ್ಗುರುಗಳ ಭಾವಚಿತ್ರಕ್ಕೆ ನಮನ ಸಲ್ಲಿಸುವ ಮೂಲಕ ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ, ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠದ ಡಾ. ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿಗಳು, ಗುರುಮಠಕಲ್ ಶ್ರೀಶಾಂತವೀರ ಗುರುಮುರುಘರಾಜೇಂದ್ರ ಮಹಾಸ್ವಾಮಿಗಳು, ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಎಸ್.ಎನ್. ಚಂದ್ರಶೇಖರ್, ಕೆ.ಸಿ ನಾಗರಾಜು, ವೀರಶೈವ ಸಮಾಜದ ಅಧ್ಯಕ್ಷ ಎಚ್. ಎನ್. ತಿಪ್ಪೇಸ್ವಾಮಿ, ಸವಿತಾ ಸಮಾಜದ ಅಧ್ಯಕ್ಷ ಆರ್. ಶ್ರೀನಿವಾಸ್, ಮಡಿವಾಳ ಸಮಾಜದ ಅಧ್ಯಕ್ಷ ಟಿ ರಮೇಶ, ಹಡಪದ ಸಮಾಜದ ಅಧ್ಯಕ್ಷ ಕೆ.ಸಿ. ನಾಗರಾಜ, ವರ್ತಕರಾದ ಶಂಕರಮೂರ್ತಿ, ಮರ್ಚಂಟ್ ಬ್ಯಾಂಕ್ ಅಧ್ಯಕ್ಷ ರಘುರಾಮರೆಡ್ಡಿ, ನ್ಯಾಯವಾದಿ ಉಮೇಶ, ಭಾರತ್ ಸ್ಕೌಟ್ ಮತ್ತು ಗೈಡ್‌ನ ಉಪಾಧ್ಯಕ್ಷ ಸಿದ್ದವ್ವನಹಳ್ಳಿ ಎಸ್ ಪರಮೇಶ, ಗಗನ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜಮುರಾ ಕಲಾವಿದರು ಪ್ರಾರ್ಥಿಸಿ, ಮೋಕ್ಷ ರುದ್ರಸ್ವಾಮಿ ಸ್ವಾಗತಿಸಿ, ನೇತ್ರಾವತಿ ನಿರೂಪಿಸಿದರು.

ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ಸರಿಗಮಪ ಗ್ರಾಂಡ್ ಜ್ಯೂರಿಗಳಿಂದ ಗಾನ
ಕೋಗಿಲೆ ಎಸ್. ಜಾನಕಿ ಅವರಿಗೆ ಗೀತ ನಮನ ನಡೆಸಿಕೊಟ್ಟರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *