ವಚನ ಕಮ್ಮಟ ಪರೀಕ್ಷೆಯ ರ‍್ಯಾಂಕ್ ವಿಜೇತರಿಗೆ ಪ್ರಶಸ್ತಿ ಪ್ರದಾನ

ಬಸವ ಮೀಡಿಯಾ
ಬಸವ ಮೀಡಿಯಾ

ಶರಣ ಸಂಸ್ಕೃತಿ ಉತ್ಸವ

ಚಿತ್ರದುರ್ಗ :

ವಚನ ಕಮ್ಮಟ ಪರೀಕ್ಷೆಯ ರ‍್ಯಾಂಕ್ ವಿಜೇತರ ಪ್ರಶಸ್ತಿ ಪ್ರದಾನ ಸಮಾರಂಭವು ಅನುಭವ ಮಂಟಪದಲ್ಲಿ ನೇರವೇರಿತು.

ಕಾರ್ಯಕ್ರಮದ ಸಮ್ಮುಖ ವಹಿಸಿದ್ದ ಶ್ರೀ ಬಸವ ಮಹಾಂತಸ್ವಾಮಿಗಳು,ಶ್ರೀ ಮಹಾಲಿಂಗೇಶ್ವರ ಮಠ ಶಿರಸಂಗಿ ಹಾಗೂ ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿಗಳು, ಗುರುಮಠಕಲ್ ಇವರ ಸಾನಿಧ್ಯದಲ್ಲಿ ಪೂಜ್ಯ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳು ಮತ್ತು ಪೂಜ್ಯ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಶಿರಸಂಗಿ ಶ್ರೀ ಮಹಾಲಿಂಗೇಶ್ವರ ಮಠದ ಶ್ರೀ ಬಸವ ಮಹಾಂತಾ ಸ್ವಾಮಿಗಳು ಮಾತನಾಡಿ, ನಾಡಿನ ಮೂಲೆ ಯ ಮೂಲೆಗಳಿಂದ ಅಗಮಿಸಿರುವ ಎಲ್ಲ ಪ್ರತಿಭಾವಂತ ವಿದ್ಯಾರ್ಥಿಗಳೇ ನೀವು ಪುಣ್ಯವಂತರು ಶ್ರೀ ಮುರುಘರಾಜೇಂದ್ರ ಮಠದ ಅನುಭವ ಮಂಟಪದಲ್ಲಿ ರ‍್ಯಾಂಕ್ಪ್ರ ಶಸ್ತಿಯನ್ನು ತೆಗೆದುಕೊಳ್ಳುತ್ತಿದ್ದೀರಿ. ಅದ್ದರಿಂದ ನೀವು ಭಾಗ್ಯವಂತರು.

ಕರ್ನಾಟಕ ಮತ್ತು ಕನ್ನಡದಿಂದ ಏನಾದರೂ ಇಡೀ ವಿಶ್ವಕ್ಕೆ ಕೊಡುವಂತಹದ್ದು ಏನಾದರೂ ಇದ್ದರೆ ಅದುವೇ ವಚನ ಸಾಹಿತ್ಯ ಎಂದು ಶಿವರಾಮ ಕಾರಂತರು ಹೇಳುತ್ತಾರೆ ಎಂದರು.

ಬದುಕಿನಲ್ಲಿ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಏನಾದರೂ ಇದ್ದರೆ ಅದು ಶರಣರ ವಚನಗಳಲ್ಲಿ ಇದೆ ಎಂದು ಸುಧಾಮೂರ್ತಿ ಹೇಳುತ್ತಾರೆ ಎಂದರು. ಅಂದರೆ ಬಸವಾದಿ ಶರಣರ ವಚನಗಳು ಸರ್ವಕಾಲಕ್ಕೂ ಶ್ರೇಷ್ಟವಾದವು ಮುಂದಿನ ದಿನಗಳಲ್ಲಿ ಬಸವಾದಿ ಶರಣರ ವಿಚಾರ ಹಾಗೂ ವಚನಗಳು ಈ ಜಗತ್ತನ್ನು ಆಳುತ್ತವೆ ಎಂದು ಹೇಳಿದರು.

ಗುರುಮಠಕಲ್‌ನ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮಿಗಳು ಮಾತನಾಡುತ್ತಾ, ೩೦ ವರ್ಷಗಳ ಶರಣ ಸಂಸ್ಕೃತಿ ಉತ್ಸವದ ಮಾನವನ ಕಲ್ಯಾಣಕ್ಕೆ ಬಸವಾದಿ ಶರಣರ ಚಿಂತನೆ ವಿಚಾರಗಳನ್ನು ಜನಮಾನಸಕ್ಕೆ ಪ್ರಾಮಾಣಿಕವಾಗಿ ತಲುಪಿಸುವ ಕಾರ್ಯವನ್ನು ಶ್ರೀ ಮಠವು ಮಾಡುತ್ತ ಬಂದಿದೆ. ಶರಣ ಸಂಸ್ಕೃತಿ ಉತ್ಸವದ ಒಂದು ಭಾಗವಾಗಿ ವಚನ ಕಮ್ಮಟ ಪರೀಕ್ಷೆ ನಡೆಯುತ್ತದೆ. ಉತ್ತಮ ರಾಷ್ಟ್ರ ಕಟ್ಟಲು ಬಸವಾದಿ ಶರಣರ ವಚನಗಳು ಶ್ರೇಷ್ಟವಾದವು. ಮಕ್ಕಳ ಮನಸ್ಸನ್ನು ಬಸವಾದಿ ಶರಣರ ಚಿಂತನೆಗಳು ಬಿತ್ತಬೇಕು ಎಂಬ ಸದಾಶಯವನ್ನು ಹೊಂದಿದೆ. ಮಕ್ಕಳ ಮನಸ್ಸು ಬಿಳಿ ಹಾಳೆ ಇದ್ದಂತೆ ಅದರಲ್ಲಿ ಏನು ಬಿತ್ತಬೇಕು, ಏನು
ಮೂಡಿಸಬೇಕು, ಆ ಪಯತ್ನವನ್ನು ಸುಮಾರು ಮೂವತ್ತು ವರ್ಷಗಳಿಂದ ವಚನ ಕಮ್ಮಟ ಪರೀಕ್ಷೆಯ ಮೂಲಕ ಮಾಡುತ್ತ ಬಂದಿದೆ ಎಂದರು.

ಶರಣರ ವಚನಗಳು ನಮ್ಮ ಅಂತರಂಗದಲ್ಲಿ ಪ್ರವೇಶ ಮಾಡಿದಾಗ ಮಾತ್ರ ನಮ್ಮ ಜೀವನ ಆದರ್ಶವಾಗಿಸಲು ಸಾಧ್ಯವಾಗುತ್ತದೆ ಎಂದರು.

ರ‍್ಯಾಂಕ್ ಪಡೆದ ಎಲ್ಲ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದಿಸಿದ ಚಿತ್ರದುರ್ಗ ನಗರ ಸಭೆ ಮಾಜಿ ಅಧ್ಯಕ್ಷರಾದ ಸಿ.ಟಿ ಕೃಷ್ಣಮೂರ್ತಿ ಮಾತನಾಡಿ ಶ್ರೀ ಮಠದೊಂದಿಗೆ ಅವಿನಾಭಾವ ಸಂಬಂಧವನ್ನು ಇರಿಸಿಕೊಂಡು ಬಂದಿದ್ದೇವೆ. ನಮ್ಮ ಬದುಕಿನಲ್ಲಿ ಶ್ರೇಷ್ಠ ಕನಿಷ್ಟ ಎಂಬ ಭಾವನೆಗಳನ್ನು ಬಿಡಬೇಕು. ಅದನ್ನೇ ಶರಣರು ನಮಗೆ ಹೇಳಿದ್ದು, ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೊಣ ಎಂದರು.

ಅ.ಭಾ.ವೀ.ಲಿಂಗಾಯತ ಮಹಾಸಭಾದ ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ಮಹಡಿ ಶಿವಮೂರ್ತಿ ಅವರು ಮಾತನಾಡಿ, ಶರಣ ಸಂಸ್ಕ್ರತಿ ಉತ್ಸವಕ್ಕೆ ತನ್ನದೆ ಆದ ಸ್ಥಾನವಿದೆ. ನಾವು ಮೊದಲಿನಿಂದಲೂ ಶ್ರೀ ಮಠದ ಕೆಲಸಗಳೊಂದಿಗೆ ನಿರಂತರವಾಗಿ ತೊಡಗಿಸಿಕೊಂಡಿದ್ದೇವೆ. ಶರಣರ ವಚನಗಳು ನಮ್ಮ ಜೀವನವನ್ನು ಹಸನಗೊಳಿಸುವ ದಿವ್ಯ ಔಷಧ ಇದ್ದಹಾಗೆ. ಅಧುನಿಕ ಸಂದರ್ಭದಲ್ಲಿ ಮೊಬೈಲ್ ಗೀಳಿನಿಂದ ವಚನಗಳನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಹಾವೇರಿ ಸರ್ಕಾರಿ ಅಭಿಯೋಜಕರಾದ ವಿ.ಜಿ. ಯಳಗೇರಿ ಅವರು ಮಾತನಾಡಿ, ಶ್ರೀ ಮುರುಘರಾಜೇಂದ್ರ ಬೃಹನ್ಮಠವೂ ಭವ್ಯ ಪರಂಪರೆಯನ್ನು ಹೊಂದಿದೆ. ಕರ್ನಾಟಕದಿಂದ ಇಡಿ ವಿಶ್ವಕ್ಕೆ ಬಸವತತ್ವಗಳನ್ನು ಪಸರಿಸುವ ಕೆಲಸವನ್ನು ಶ್ರೀಮಠ ಮಾಡುತ್ತ ಬಂದಿದೆ. ಜನಮಾನಸಕ್ಕೆ ಶರಣರ ತತ್ವಗಳನ್ನು ಮಾನವೀಯ ಮೌಲ್ಯಗಳನ್ನು ಮುಟ್ಟಿಸುವಲ್ಲಿ ಮಠದ ಪಾತ್ರ ಮಹತ್ವವಾದದು. ಶರಣರ ಅನುಭವ ಮಂಟಪದಲ್ಲಿ ಜರುಗಿದ ಚರ್ಚೆಗಳು ವಿಚಾರಗಳು ಈ ಜಗತ್ತಿಗೆ ಆದರ್ಶಪ್ರಾಯವಾದ ಬದುಕನ್ನು ಸಾಗಿಸಲು ಸಾಕಾರಗೊಂಡಿವೆ ಎಂದರು.

ಹುಬ್ಬಳ್ಳಿ ಬಸವಕೇಂದ್ರದ ಕುಮಾರಣ್ಣ ಹುಗ್ಗಿಶೆಟ್ಟರ ಮಾತನಾಡಿ, ಶರಣರ ವಚನಗಳನ್ನು ಓದುವುದರಿಂದ ಬದುಕು ಸುಂದರವಾಗುತ್ತದೆ. ಗುರುಮಠದ ಪರಂಪರೆಯಿಂದ ಪಾಠ ಪ್ರವಚನಗಳಿಂದ ನಮ್ನ
ಬದುಕಿನಲ್ಲಿ ಆಧ್ಯಾತ್ಮ ಜೀವನ ಹಾಗೂ ಶಿವಾನುಭವದಂತಹವು ವಿದ್ಯಾರ್ಥಿಗಳಿಗೆ ಶಿಸ್ತನ್ನು ಕಲಿಸುತ್ತವೆ ಎಂದರು.

ಚಿತ್ರದುರ್ಗ ಚರ್ಮ ವೈದ್ಯರಾದ ಡಾ. ಎಂ. ಯೋಗೇಂದ್ರ ಇವರು ಮಾತನಾಡಿ, ಶರಣರ ವಚನಗಳು ನಮ್ಮ ಬದುಕಿಗೆ ಬಹಳ ಅವಶ್ಯವಾದವು, ಒತ್ತಡದ ಜೀವನದಿಂದ ಮುಕ್ತವಾಗಲು ಅವಶ್ಯವೆಂದರು.

ನಿವೃತ್ತ ಪ್ರಾಂಶುಪಾಲರಾದ ಪ್ರೊ. ಸಿ.ಎಂ. ಚಂದ್ರಪ್ಪ ನವರು ಮಾತನಾಡಿ, ವಚನ ಕಮ್ಮಟ ಮಹತ್ವವಾದುದು. ಭೂಮಿ ಹದವಾಗಿದ್ದರೆ ಏನನ್ನು ಬೇಕಾದರೂ ಬೆಳೆಯಬಹುದು. ಮಕ್ಕಳ ಮನಸ್ಸು ಮೃದುವಾದ ಭೂಮಿ ಇದ್ದಾಗೆ, ಅದರಲ್ಲಿ ಶರಣರ ವಚನಸಾರವನ್ನು ಬಿತ್ತಬೇಕು, ಹಾಗಾದಲ್ಲಿ ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ ಎಂದರು.

ಶ್ರೀ ಮುರುಘಾಮಠ ವಚನಕಮ್ಮಟ ಪರೀಕ್ಷೆಯನ್ನು ಮೊಟ್ಟಮೊದಲು ಆರಂಭಮಾಡಿತು. ಅಂದು ಈ ನಾಡಿನಾದ್ಯಂತ ಪ್ರತಿವರ್ಷ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಮ್ಮಟದಲ್ಲಿ ಭಾಗವಹಿಸುತ್ತಿದ್ದರು. ಅದರೆ ಇಂದು ಆ ಸಂಖ್ಯೆ ಬಹಳ ಕಡಿಮೆಯಾಗಿದೆ. ಕಾರಣ ಅಧುನಿಕ ಮೊಬೈಲ್ ಗೀಳಿನಿಂದ ಓದುವುದು ಬರೆಯುವುದು ಕಡಿಮೆಯಾಗಿದೆ ಎಂದರು. ಶರಣರ ವಚನಗಳು ಸದ್ಭಾವನೆ ಹಾಗೂ ಚಿಂತನೆಯನ್ನು
ಬೆಳೆಸುವುದೆ ವಚನ ಕಮ್ಮಟಗಳ ಮೂಲ ಉದ್ದೇಶ ಎಂದರು.

ಗುಮ್ಮನೂರು ಬಸವಕೇಂದ್ರದ ಕೆ.ಎಂ. ಚೆನ್ಮಪ್ಪ ಮಾತನಾಡಿ ರ‍್ಯಾಂಕ್ವಿ ಜೇತರನ್ನು ಅಭಿನಂದಿಸಿದರು. ವಚನ ಕಮ್ಮಟಕ್ಕೆ ಶ್ರಮಿಸಿದಂತಹ ಎಲ್ಲಾ ಶಿಕ್ಷಕರಿಗೂ ಸಿಬ್ಬಂದಿ ವರ್ಗದವರಿಗೂ ಶ್ರೀ ಮಠದಿಂದ ಸನ್ಮಾನಿಸಲಾಯಿತು.

ವಚನ ಪ್ರಾರ್ಥನೆ ಜಮುರಾ ಕಲಾವಿದರು ಉಮೇಶ ಪತ್ತಾರ ಮತ್ತು ಸಂಗಡಿಗರಿಂದ, ಕಾರ್ಯಕ್ರಮದ ನಿರೂಪಣೆ ನೇತ್ರಾವತಿ. ಎಸ್. ಅರ್, ಲಿಂಗರಾಜ ನೇಕಾರ ಅವರು ಸ್ವಾಗತಿಸಿದರು. ವಂದನಾರ್ಪಣೆ ಪವಿತ್ರ ನೇರವೇರಿಸಿದರು.

ರ‍್ಯಾಂಕ್ ವಿಜೇತರ ವಿವರಗಳು

೫ನೇ ತರಗತಿ ವಿಭಾಗದಲ್ಲಿ ದಾವಣಗೆರೆಯ ಜಿಲ್ಲೆ ಕೊಡದಗುಡ್ಡದ ಜ್ಞಾನದೀಪ ಪಬ್ಲಿಕ್ ಶಾಲೆಯ ಚಿನ್ನು ಎಂ- ಪ್ರಥಮ ರ‍್ಯಾಂಕ್, ದಾವಣಗೆರೆಯ ಎಸ್.ಜೆ.ಎಂ. ಆಂಗ್ಲ ಮಾಧ್ಯಮ ಪಬ್ಲಿಕ್ ಶಾಲೆಯ ಅಮೃತ ಎಂ-ದ್ವಿತೀಯ ರ‍್ಯಾಂಕ್, ಹಾವೇರಿ ಜಿಲ್ಲೆ ಹಾಲಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಫ್ಸನಾ ಯತ್ನಳ್ಳಿ ತೃತೀಯ ರ‍್ಯಾಂಕ್.

೬ನೇ ತರಗತಿ ವಿಭಾಗದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಎಂ.ಇ.ಎಸ್. ಆಂಗ್ಲ ಮಾಧ್ಯಮ ಶಾಲೆಯ ಸನ್ನಿಧಿ ಡಿ. ಶೆಟ್ಟಿ- ಪ್ರಥಮ ರ‍್ಯಾಂಕ್, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಗೊಂದಿಯ ಶ್ರೀ ಶಾರದಾ ವಿದ್ಯಾಲಯದ ವಿಖ್ಯಾತ್ ಜಿ- ದ್ವಿತೀಯ ರ‍್ಯಾಂಕ್ ಹಾಗೂ ವಿಜಯಪುರ ಜಿಲ್ಲೆಯ ಎಲ್. ಇ. ಎಸ್. ಆಂಗ್ಲ ಮಾಧ್ಯಮ ಶಾಲೆಯ ಅಂಕಿತ ಬಡಿಗೇರ ತೃತೀಯ ರ‍್ಯಾಂಕ್.

ಏಳನೇ ತರಗತಿ ವಿಭಾಗದಲ್ಲಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಎಸ್.ಆರ್. ಎಸ್. ಹೆರಿಟೇಜ್ ಶಾಲೆಯ ಸಂಜನಾ ಸಮನ್ವಿತ ಎಂ ಪ್ರಥಮ ರ‍್ಯಾಂಕ್, ಚಿತ್ರದುರ್ಗ ಜಿಲ್ಲೆಯ ಮೇದೇಹಳ್ಳಿಯ ಡಾ.ಎಪಿಜೆ ಅಬ್ದುಲ್ ಕಲಾಂ ಶಾಲೆಯ ದೀಪಕ್ ಗೌಡ ದ್ವಿತೀಯರ‍್ಯಾಂಕ್ ಹಾಗೂ ಚಿತ್ರದುರ್ಗದ ಎಂ.ಕೆ. ಹಟ್ಟಿಯ ಎಸ್.ಜೆ.ಎಂ. ಆಂಗ್ಲ ಮಾಧ್ಯಮ
ಶಾಲೆಯ ಲೇಖನ ಪ್ರಿಯಾ ಎಂ ಎನ್ ತೃತೀಯ ರ‍್ಯಾಂಕ್.

ಎಂಟನೇ ತರಗತಿ ವಿಭಾಗದಲ್ಲಿ ಗದಗ ಜಿಲ್ಲೆಯ ಅಸೂಟಿ ಶ್ರೀ ಫಲಹಾರೇಶ್ವರ ಪ್ರೌಢಶಾಲೆಯ ಸಿಂಧೂ ಪಿ. ರೊಟ್ಟಿ ಪ್ರಥಮ ರ‍್ಯಾಂಕ್, ಹಾವೇರಿ ಜಿಲ್ಲೆಯ ಆಲದಕಟ್ಟಿ ಶ್ರೀ ಬಸವೇಶ್ವರ ಪ್ರೌಢಶಾಲೆಯ ಸುಪ್ರಿಯ ಕಡ್ಲಿ ದ್ವಿತೀಯ ರ‍್ಯಾಂಕ್, ಭರಮಸಾಗರದ ಬಾಪೂಜಿ ಪ್ರೌಢಶಾಲೆಯ ಸವಿತಾ ತೃತೀಯ ರ‍್ಯಾಂಕ್.

ಒಂಬತ್ತನೇ ತರಗತಿ ವಿಭಾಗದಲ್ಲಿ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೊಟೆಯ ಕೆ ಎಲ್ ಇ ಮಂಗರೋಳೆ ಪ್ರೌಢಶಾಲೆಯ ಅಕ್ಷತಾ ಸಂಗಯ್ಯ ಮಠಪತಿ ಪ್ರಥಮ ರ‍್ಯಾಂಕ್, ಹಾಸನ ಜಿಲ್ಲೆಯ ಬಸವಾಪಟ್ಟಣ ಕರ್ನಾಟಕ ಪಬ್ಲಿಕ್ ಶಾಲೆ ಬಸವಪಟ್ಟಣದ ಧನುಷ್ ಗೌಡ ಸಿ ಆರ್ ದ್ವಿತೀಯ ರ‍್ಯಾಂಕ್, ಉಡುಪಿ ಜಿಲ್ಲೆಯ ಬ್ರಹ್ಮಾವರ ಸರ್ಕಾರಿ ಪ್ರೌಢಶಾಲೆಯ ತೃಪ್ತಿ ತೃತೀಯ ರ‍್ಯಾಂಕ್.

ಹತ್ತನೇ ತರಗತಿ ವಿಭಾಗದಲ್ಲಿ ಬೆಳಗಾವಿ ನಾಗನೂರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪಲ್ಲವಿ ಕಂಟೇಕಾರ ಮಠ ಪ್ರಥಮ ರ‍್ಯಾಂಕ್, ಸೋಮವಾರಪೇಟೆ ಕೊಡಗು ಜಿಲ್ಲೆ ಸೋಮವಾರ ಪೇಟೆಯ ಎಸ್.ಜೆ.ಎಂ. ಪ್ರೌಢಶಾಲೆಯ ಆಶಿತಾ ದ್ವಿತೀಯ ರ‍್ಯಾಂಕ್, ಐಮಂಗಳದ ಎಸ್ ವಿ ಎಸ್ ಪ್ರೌಢಶಾಲೆಯ ಸ್ಪಂದನ ಕೆ ತೃತೀಯ ರ‍್ಯಾಂಕ್.

ಪ್ರಥಮ ಪಿಯುಸಿ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮುಲ್ಕಿಯ ಕೋಟೆಕೇರಿ ವಿಜಯ ಪದವಿ ಪೂರ್ವ ಕಾಲೇಜಿನ ಗೌತಮಿ ಪ್ರಥಮ ರ‍್ಯಾಂಕ್, ಹಾವೇರಿಯ ರಾಣಿಬೆನ್ನೂರು ಎಸ್‌ಜೆಎಂ ಮಹಿಳಾ ಪದವಿ ಪೂರ್ವ ಕಾಲೇಜಿನ ಈಶ್ವರಿ ರಂಗಪ್ಪ ತುಂಬಿನಕಟ್ಟಿ ದ್ವಿತೀಯ ರ‍್ಯಾಂಕ್, ಭರಮಸಾಗರದ ಬಾಪೂಜಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಸಲ್ಮಾ ತೃತೀಯ ರ‍್ಯಾಂಕ್.

ದ್ವಿತೀಯ ಪಿಯುಸಿ ವಿಭಾಗದಲ್ಲಿ ತುಮಕೂರು ಜಿಲ್ಲೆ ಕ್ಯಾತ್ಸಂದ್ರ ವಿದ್ಯಾ ವಾಹಿನಿ ಪದವಿಪೂರ್ವ
ಕಾಲೇಜಿನ ದೇವಿಕ ವಿ. ಪ್ರಥಮ ರ‍್ಯಾಂಕ್, ವಿಜಯಪುರ ಜಿಲ್ಲೆ ಸಿಂದಗಿಯ ಎಚ್. ಜಿ. ಪದವಿಪೂರ್ವ ಕಾಲೇಜಿನ ಮಾದೇಶ ಘೋಡಕೆ ದ್ವಿತೀಯ ರ‍್ಯಾಂಕ್, ಹೊಸದುರ್ಗದ ಎಸ್.ಜೆ.ಎಂ. ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಆದರ್ಶ ಟಿ. ಆರ್. ತೃತೀಯ ರ‍್ಯಾಂಕ್.

ಪದವಿ ಪ್ರಥಮ ವರ್ಷದ ವಿಭಾಗದಲ್ಲಿ ವಿಜಯಪುರ ಜಿಲ್ಲೆಯ ಎಸ್ ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಕಾಲೇಜಿನ ಸಕ್ಕು ಬಾಯಿ ಪೂಜಾರಿ ಪ್ರಥಮ ರ‍್ಯಾಂಕ್, ಉಡುಪಿ ಜಿಲ್ಲೆಯ ಕಾರ್ಕಳದ ಮಂಜುನಾಥ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ್ ದ್ವಿತೀಯ ರ‍್ಯಾಂಕ್, ಧಾರವಾಡದ ವಿದ್ಯಾಗಿರಿಯ ಜೆ ಎಸ್ ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತರ ಅಧ್ಯಯನ ಸಂಸ್ಥೆಯ ಪವಿತ್ರ ಪಾಟೀಲ ತೃತೀಯ ರ‍್ಯಾಂಕ್.

ದ್ವಿತೀಯ ಪದವಿ ವಿಭಾಗದಲ್ಲಿ ಬಾಗಲಕೋಟೆಯ ಅಕ್ಕಮಹಾದೇವಿ ಮಹಿಳಾ ಕಲಾ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಶಾವಕ್ಕ ವರಕೇರಿ ಪ್ರಥಮ ರ‍್ಯಾಂಕ್, ಹಾವೇರಿ ಜಿಲ್ಲೆಯ ಬ್ಯಾಡಗಿಯ ಬಿಇಎಸ್‌ಎಮ್ ಕಲಾ ಮತ್ತು ವಾಣಿಜ್ಯ ಕಾಲೇಜಿನ ಸುಗಂಧ ಮಾಳಗಿ ದ್ವಿತೀಯ ರ‍್ಯಾಂಕ್, ಉಡುಪಿ ಜಿಲ್ಲೆ ಕಾಪು ತಾಲ್ಲೂಕಿನ ಶಿರ್ವದ ಸಂತಮೇರಿ ಕಾಲೇಜಿನ ನಿಕಿತ ತೃತೀಯ ರ‍್ಯಾಂಕ್.

ತೃತೀಯ ಪದವಿ ವಿಭಾಗದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸುಚಿತ್ರ ವಿ.ಜಿ. ಪ್ರಥಮ ರ‍್ಯಾಂಕ್, ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನ ಎಸ್.ಜೆ.ಎಂ. ವಿ ಬಿ ಜೆ.ಎಸ್.ಎಸ್ ಕಲಾ ಮತ್ತು ವಾಣಿಜ್ಯ ಮಹಿಳಾ ಪದವಿ ಕಾಲೇಜಿನ ಭೂಮಿಕಾ ಮದ್ಲೇರ ದ್ವಿತೀಯ ರ‍್ಯಾಂಕ್, ತುಮಕೂರು ಜಿಲ್ಲೆ ಮಧುಗಿರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಂಜಿತ ಎಚ್.ಜಿ. ತೃತೀಯ ರಾಂಕ್ ಪಡೆದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
1 Comment
  • ಒಳ್ಳೆಯ ಕಾರ್ಯಕ್ರಮವಾಗಿದೆ ಒಳ್ಳೆಯ ವಿಚಾರ ತಿಳಿಸಿ ದ್ದಾರೆ ಜೈ ಬಸವ ಶರಣು ಶರಣಾರ್ಥಿ

Leave a Reply

Your email address will not be published. Required fields are marked *