ವಚನಗಳ ದೃಷ್ಠಿಯಲ್ಲಿ ಹಿರಿಯರು ಸಮಾಜದ ಅನುಭವದ ಸಂಪತ್ತು : ಬಿ.ಆರ್. ಪಾಟೀಲ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಕಲ್ಯಾಣ :

ಬಸವಕಲ್ಯಾಣ ಸಾಮಾನ್ಯ ಭೂಮಿಯಲ್ಲ ಇದು ಚಿಂತನ ಚಿಲುಮೆಯ ನೆಲವಾಗಿದೆ. ವಚನಗಳ ದೃಷ್ಠಿಯಲ್ಲಿ ಹಿರಿಯರು ಸಮಾಜದ ಅನುಭವದ ಸಂಪತ್ತು. ಅವರ ಬದುಕು ಯುವ ಜನತೆಗೆ ಮಾದರಿಯಾಗಬೇಕು ಎಂದು ಆಳಂದ ಶಾಸಕ ಬಿ.ಆರ್. ಪಾಟೀಲ ಹೇಳಿದರು.

ಅವರು ಅಂತರ‍್ರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಲಿಂಗವಂತ ಹರಳಯ್ಯ ಪೀಠದ ವತಿಯಿಂದ ಇಲ್ಲಿನ ಹರಳಯ್ಯನವರ ಗವಿಯಲ್ಲಿ ನಡೆಯುತ್ತಿರುವ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆ ಕಾರ್ಯಕ್ರಮದ ಐದನೇ ದಿನದಂದು ನಡೆದ ಹಿರಿಯ ನಾಗರಿಕರ ಸಮಾವೇಶದಲ್ಲಿ ರಾಷ್ಟ್ರದ ಬೆಳವಣಿಗೆಯಲ್ಲಿ ಹಿರಿಯ ನಾಗರಿಕರ ಮಹತ್ವ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ಹಿರಿಯ ನಾಗರಿಕರ ಮೇಲೆ ಬಹಳಷ್ಟು ಜವಾಬ್ದಾರಿಯಿದೆ. ಜ್ಞಾನವಂತರೇ ಹಿರಿಯರು. ಯುವಕರು ದಾರಿ ತಪ್ಪುತ್ತಿದ್ದಾರೆ, ಅವರನ್ನು ಸರಿಯಾದ ದಾರಿಯಲ್ಲಿ ತರುವುದು ಬಹಳ ಜವಾಬ್ದಾರಿಯಿದೆ. ಸರಕಾರ ಮಧ್ಯಪಾನ ನಿಯಂತ್ರಣ ಮಾಡಿ ಜನರ ಬದುಕು-ಆರೋಗ್ಯ ಕಾಪಾಡಬೇಕು. ನಶೆಮುಕ್ತ ಭಾರತ ಚಳುವಳಿಯಾಗಬೇಕು.

ದ್ವೇಷ, ಅಸೂಹೆ ಹೆಚ್ಚುತಿದ್ದು ಇವುಗಳನ್ನು ಅಳಿಸಲು ಪ್ರಯತ್ನಿಸಬೇಕು. ಕೆಟ್ಟ ಚಟಗಳಿಗೆ ದಾಸರಾಗುವವರನ್ನು ಧಾರ್ಮಿಕ ಕ್ಷೇತ್ರದಲ್ಲಿ ನಿಯಂತ್ರಿಸಬೇಕು. ವೃದ್ಧಾಶ್ರಮಗಳು ಹೆಚ್ಚುತ್ತಿರುವುದು ಅತ್ಯಂತ ಕಳವಳಕಾರಿ ಎಂದರು.

ಕಲಬುರಗಿಯ ಲೋಕಾಯುಕ್ತ ಡಿವೈಎಸ್‌ಪಿ ಡಾ. ಬಸವರಾಜ ಯಲಿಗಾರ ಅನುಭಾವ ನೀಡಿ, ರಾಷ್ಟ್ರದ ಉನ್ನತಿ ಮತ್ತು ಅವನತಿಯಲ್ಲಿ ಹಿರಿಯರ ಪಾತ್ರ ಇರುತ್ತದೆ. ಕುಟುಂಬ, ಸಮಾಜದಲ್ಲಿ ಹಿರಿಯರು ಬೇರು, ಉಳಿದವರು ಚಿಗುರು.

ಹಿರಿಯರು ಅಸಹಾಯಕರಾದರೆ ಅದು ವಿನಾಶಕ್ಕೆ ದಾರಿ, ಅವರ ಕಡೆಗಣನೆಯಿಂದ ಅನೇಕ ಕ್ರಾಂತಿಗಳಾಗಿವೆ. ಸಂಸ್ಕಾರ ಮರೆತ ಸಮಾಜದಲ್ಲಿ ಅಂಕಗಳೇ ದೇವರಾಗುತ್ತಿವೆ. ಹಿರಿಯರ ನಡತೆ ಮಕ್ಕಳು ಅನುಸರಿಸುತ್ತಾರೆ. ರಾಷ್ಟ್ರದ ನಿಜವಾದ ಪ್ರಗತಿ ಅದರ ಸಂಸ್ಕೃತಿ, ಸಂಸ್ಕಾರವಾಗಿದೆ.

ಮಾನವೀಯ ಮೌಲ್ಯಗಳು ಮತ್ತು ಅನುಭವದ ಜ್ಞಾನವನ್ನು ಮುಂದಿನ ಪೀಳಿಗೆಗೆ ತಲುಪಿಸುವುದರಲ್ಲಿ ಹಿರಿಯರ ನಾಗರಿಕರ ಪಾತ್ರ ಮಹತ್ವದ್ದಾಗಿದೆ. ಹಿರಿಯರ ಜ್ಞಾನ ದಾಸೋಹ ಮಾಡಿ ಮಕ್ಕಳಿಗೆ ಮಾದರಿಯಾಗಬೇಕು. ಕೌಟುಂಬಿಕ ಸಂಬಂಧಗಳಿಂದ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡುವುದರಿಂದ  ಸಧೃಢ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ ಎಂದರು.

ಸಾನಿಧ್ಯ ವಹಿಸಿದ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಆಶಿರ್ವಚನ ನೀಡಿ, ಶರಣರ ವಿಚಾರಧಾರೆಯಲ್ಲಿ ನಿಜವಾದ ಹಿರಿತನವೆಂದರೆ ಜ್ಞಾನದಿಂದ ಬೆಳೆಯುವುದು. ನಡತೆಯಿಂದ ಗೌರವ ಗಳಿಸುವುದು ಮತ್ತು ಸಮಾಜದ ಒಳಿತಿಗಾಗಿ ಬದುಕುವುದು ಎಂದು ನುಡಿದರು.

ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಲಹೆಗಾರರು ಹಾಗೂ ಮಾಜಿ ಆಯುಕ್ತರಾದ ದಾಸ ಸೂರ್ಯವಂಶಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಬಸವೇಶ್ವರ ಹಿರಿಯ ನಾಗರಿಕರ ಒಕ್ಕೂಟದ ಅಧ್ಯಕ್ಷ ಚನ್ನಪ್ಪ ಪ್ರತಾಪೂರೆ, ನಿವೃತ್ತ ನ್ಯಾಯಾಧಿಶ ಸುಭಾಶ್ಚಂದ್ರ ನಾಗರಾಳೆ, ಉದ್ಯಮಿ ಸುಭಾಷ ಹೊಳಕುಂದೆ, ಬಸವೇಶ್ವರ ಹಿರಿಯ ನಾಗರಿಕರ ಒಕ್ಕೂಟದ ಕಾರ್ಯದರ್ಶಿ ಶಂಕರ ಕರಣೆ, ಕಲಬುರಗಿ ಬಸವಸೇವಾ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ ಯಂಕಂಚಿ, ಶರಣ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಡಾ. ಮಲ್ಲಿಕಾರ್ಜುನ ವಡ್ಡನಕೇರಿ, ಡಾ. ಸೋಮನಾಥ ಬಿರಾದಾರ, ಬಾಬುರಾವ ಜನಕಟ್ಟಿ, ದೇವೆಂದ್ರ ಪಾಟೀಲ. ಜಗನ್ನಾಥ ಕನಶೆಟ್ಟಿ, ಬಾಬುರಾವ ಮಾಲಿ ಪಾಟೀಲ ಶಾಲಿವಾನ ಕಾಕನಾಳೆ, ಶಿವರಾಜ ಖೇಲೆ, ವಿಶ್ವನಾಥ ಖಂಡಾಳೆ, ಜೋಧಾಸಿಂಗ್ ಧಾಮಿ, ಸಿದ್ದಣ್ಣಾ ಭೂಮಾ ಉಪಸ್ಥಿತರಿದ್ದರು.

ಸಿದ್ಧಣ್ಣಾ ಭೂಮಾ ಸ್ವಾಗತಿಸಿದರೆ, ಶ್ರೀಶೈಲ ಹುಡೇದ ನಿರೂಪಿಸಿದರು. ಶ್ರೀ ಬಸವೇಶ್ವರ ಭಜನಾ ಮಂಡಳಿ, ಬೇಲೂರ ವಚನ ಭಜನೆ ನಡೆಸಿಕೊಟ್ಟರು. ಗಂಗಾಂಬಿಕಾ ಮಹಾಶಕ್ತಿಕೂಟದವರಿಂದ ಗುರುಪೂಜೆ ಹಾಗೂ ದೇಶಪಾಂಡೆ ಗಲ್ಲಿ ಮಕ್ಕಳಿಂದ ವಚನ ನೃತ್ಯ ಜರುಗಿತು.

ದೇಹದಾನ ಮಾಡಿದವರಿಗೆ ಗೌರವಾರ್ಪಣೆ :

ಇದೇ ಸಂದರ್ಭದಲ್ಲಿ ಮರಣದ ನಂತರ ದೇಹದಾನ ಮಾಡಿದವರಿಗೆ ಭಕ್ತಿಪೂರ್ವಕವಾಗಿ ಗೌರವಿಸಲಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *