ರಾಯಚೂರು :
ನಗರದ ಬಸವಕೇಂದ್ರದ ಅಕ್ಕನ ಬಳಗದವರಿಂದ ಅಕ್ಕನ ಬಳಗದ ಅಧ್ಯಕ್ಷೆ ಜಗದೇವಿ ಚನ್ನಬಸವಣ್ಣ ಅವರ ನೇತೃತ್ವದಲ್ಲಿ ಜಯಶೀಲ ಬಾಳೆ ಅವರ ಮನೆಯಲ್ಲಿ ನವರಾತ್ರಿ ಮೂರನೇ ದಿನ ಶಿವಶರಣೆ ದೂಪದ ಗೊಗ್ಗವ್ವೆ ಅವರ ಕುರಿತು ಅನುಭಾವ ಚಿಂತನೆ ನಡೆಯಿತು.
ಸದರಿ ಶರಣೆಯ ಬಗ್ಗೆ ನಿವೃತ್ತ ಉಪನ್ಯಾಸಕಿ ಜಯಶ್ರೀ ಮಹಾಜನಶೆಟ್ಟಿ ಮಾತನಾಡಿ, ದೀಪದ ಗೊಗ್ಗವ್ವೆ ಲೌಕಿಕದಲ್ಲಿ ಇದ್ದರೂ ತಮ್ಮ ಅರಿವಿನ ಬೆಳಕಿನಲ್ಲಿ ಪಾರಮಾರ್ಥಿಕ ನೆಲೆಗಟ್ಟನ್ನು ಕಂಡುಕೊಂಡರು. ಅಂಗರಚನೆ ಭಿನ್ನರೂಪವಿದ್ದರು ಅಂತರಂಗದ ಅರಿವಿನಲ್ಲಿ ಹೆಣ್ಣು / ಗಂಡು ಬೇರೆಯಲ್ಲ ಎಂಬ ಸ್ಪಷ್ಟತೆಯನ್ನು ಹೊಂದಿದ್ದರು ಎಂದು ತಿಳಿಸಿದರು.
ಶರಣೆಯರ ಅಂತರಂಗದ ಅರಿವು ಹಾಗೂ ಬಹಿರಂಗದ ಕ್ರಿಯಾನಿಷ್ಟತೆ ಅನುಷ್ಠಾನಕ್ಕೆ ತಂದ ಕಾರಣ ಅವರು ಶರಣೆಯರೆಂದು ಕರೆಸಿಕೊಂಡರು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಅರಿವಿನ ಶರಣ ಮಹಿಳೆಯರಿಗೆ ಸಾದಕವಲ್ಲದ ಹುಸಿಧರ್ಮ ಆಚರಣೆ ಸೂಕ್ತವಲ್ಲ. ಆದರೆ ಇಂದು ಬಹುತೇಕ ಮಹಿಳೆಯರು ಹುಸಿಧರ್ಮ ಆಚರಣೆ ಮಾಡುತ್ತಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಶಿವಯೋಗದ ಪ್ರಾತ್ಯಕ್ಷಿಕೆಯನ್ನು ಜಗದೇವಿ, ವಚನ ಪ್ರಾರ್ಥನೆ ಪ್ರಿಯಾಂಕ, ಸ್ವಾಗತ ಜಯಶೀಲಾ ಬಾಳಿ, ನಿರೂಪಣೆ ಪಾರ್ವತಿ ಪಾಟೀಲ, ವಚನ ಸಂವಿಧಾನ ಪ್ರತಿಜ್ಞೆ ತಾಯಮ್ಮಗೌಡ ಮತ್ತು ಮುಕ್ತಾ ಅವರು ವಂದಿಸಿದರು.
ಕಾರ್ಯಕ್ರಮದಲ್ಲಿ ವಿಶಾಲಾಕ್ಷಿ, ಮಂಜುಳ, ಶಾಂತಾ, ಚನ್ನಮ್ಮ ಸೇರಿದಂತೆ ಹಲವಾರು ಶರಣೆಯರು ಭಾಗವಹಿಸಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece
