ಲಿಂಗಸುಗೂರು :
12 ಶತಮಾನದ ಶಿವಶರಣೆಯರಲ್ಲಿ ಉರಿಲಿಂಗಪೆದ್ದಿ ಪುಣ್ಯಸ್ತ್ರೀ ಕಾಳವ್ವೆ ಒಬ್ಬರಾಗಿದ್ದು, ಅವರ ಜೀವನ ಚರಿತ್ರೆ ಮತ್ತು ವಚನ ವಿಶ್ಲೇಷಣೆಯನ್ನು ಉಪನ್ಯಾಸಕಿ ದಾನಮ್ಮ ಅವರಿಂದ ನಡೆಯಿತು.

ಕಾಳವ್ವೆ ಅವರು ಅಸ್ಪೃಶ್ಯ ಜನಾಂಗಕ್ಕೆ ಸೇರಿದವರು. ಅವರ ಪತಿ ಉರಿಲಿಂಗಪೆದ್ದಿ ಅವರು ಮೊದಲು ಕಳ್ಳತನ ಮಾಡುತ್ತಿದ್ದರು. ನಂತರ ಶಿವಶರಣರಾಗಿ ಪರಿವರ್ತನೆಯಾದರು. ಅವರ ವಾಸ, ಕಾರ್ಯಕ್ಷೇತ್ರ ನಂದವಾಡಗಿ. ಅವರ ಒಟ್ಟು 12 ವಚನಗಳು ಲಭ್ಯವಿದೆ. ಇವರ ಅಂಕಿತನಾಮ ಉರಿಲಿಂಗಪೆದ್ದಿಪ್ರಿಯ ಎಂಬುದಾಗಿದೆ.
ಜಾತಿ, ಕುಲಭೇದ ಆಚರಣೆ, ಅಮಾನವೀಯ ಆಚರಣೆಗಳ ವಿಡಂಬನೆ ಮಾಡಿದವರು. ಸತ್ಯ ಶುದ್ಧತೆಯ ಕಾಯಕನಿಷ್ಠೆ ಮತ್ತು ಶಿವಭಕ್ತಿಯ ಪ್ರಾಮುಖ್ಯತೆಯನ್ನು ಕಾಳವ್ವೆ ಅವರ ವಚನದಲ್ಲಿ ಕಾಣಬಹುದು ಎಂದು ಶರಣರ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತಿ ಗಂಗಮ್ಮ ಸತ್ಯಂಪೇಟೆ ಅವರು ವಹಿಸಿಕೊಂಡಿದ್ದರು. ಅಕ್ಕನ ಬಳಗದ ವತಿಯಿಂದ ವಚನ ಪ್ರಾರ್ಥನೆ ನಡೆಯಿತು. ಕಾರ್ಯಕ್ರಮದ ನಿರೂಪಣೆ ಕುಮಾರಿ ಸಹನ ನಡೆಸಿಕೊಟ್ಟರು. ಪ್ರಸಾದ ಸೇವೆಯನ್ನು ಬಸವರಾಜ ಬುದ್ದಿನ್ನಿ ಅವರು ನೆರವೇರಿಸಿದರು.
ವಚನ ಮಂಗಲದ ಮೂಲಕ ಕಾರ್ಯಕ್ರಮ ಮುಕ್ತಾಯವಾಯಿತು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece
