ಕಿಡ್ನಿ ನೀಡಿದ ಆಶಾ, ವೈದ್ಯರಿಗೆ ಪ್ರಣಾಮ ಸಲ್ಲಿಸಿದ ಪಾಂಡೋಮಟ್ಟಿ ಗುರುಗಳು

ಬಸವ ಮೀಡಿಯಾ
ಬಸವ ಮೀಡಿಯಾ

ಎಲ್ಲಾ ಅಕ್ಷರಸ್ಥರು ವಿದ್ಯಾವಂತರಲ್ಲ, ಎಲ್ಲಾ ವಿಧ್ಯಾವಂತರು ಜ್ಞಾನವಂತರಲ್ಲ: ಡಾ. ಎಂ.ಎಸ್. ಗಿರೀಶ

 ಪಾಡೋಮಟ್ಟಿ :

ಭೂಮಂಡಲದ ಸಕಲ ಜೀವರಾಶಿಗಳಿಗೂ ಜ್ಞಾನ ನೀಡುವುದು ಗುರು. ದೈವ ಮತ್ತು ಗುರುಗಳ ಬಲದಿಂದ ಏನನ್ನಾದರು ಸಾಧಿಸಲು ಸಾದ್ಯ ಎಂದು ಪಾಂಡೋಮಟ್ಟಿಯ ಡಾ.ಗುರುಬಸವ ಸ್ವಾಮೀಜಿ ಅವರಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿದ ಬೆಂಗಳೂರಿನ ಖ್ಯಾತ ಮೂತ್ರಪಿಂಡ ತಜ್ಞ ಡಾ. ಎಂ.ಎಸ್. ಗಿರೀಶ ಹೇಳಿದರು.

ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿ ಗ್ರಾಮದ ವಿರಕ್ತಮಠದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಶರಣ ಹರಳಯ್ಯ, ಮಧುವರಸರ ಸ್ಮರಣೋತ್ಸವ ಹಾಗೂ ೮೮೮ ನೇ ಮಾಸಿಕ ಶಿವಾನುಭವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಎಲ್ಲಾ ಅಕ್ಷರಸ್ಥರು ವಿದ್ಯಾವಂತರಲ್ಲ, ಎಲ್ಲಾ ವಿಧ್ಯಾವಂತರು ಜ್ಞಾನವಂತರಲ್ಲ. ಈ ಎಲ್ಲಾ ಅಕ್ಷರ, ವಿದ್ಯೆ ಹಾಗೂ ಜ್ಞಾನ ಪಡೆಯಲು ಗುರುವಿನಿಂದ ಮಾತ್ರ ಸಾಧ್ಯ. ಬಸವಣ್ಣನವರು ಯಾವುದೇ ಪವಾಡ ಮಾಡಲಿಲ್ಲ. ಆದರೆ ಸಮಾಜದಲ್ಲಿ ಶುದ್ದ ಮನಸ್ಸು, ಚಿಂತನೆ, ಕಾಯಕ ಹಾಗೂ ದಾಸೋಹದ ಮಹತ್ವ ಸಾರಿದರು.

ದೈಹಿಕ, ಮಾನಸಿಕ, ಸಾಂಸ್ಕೃತಿಕ, ಸಾಮಾಜಿಕ, ಆದ್ಯಾತ್ಮಿಕ ಹಾಗೂ ಆರ್ಥಿಕವಾಗಿದ್ದರೆ ಮಾತ್ರ ಆರೋಗ್ಯ ಸದೃಡ. ಆದರೆ ನಮ್ಮ ಕೈಯಲ್ಲಿ ಇರುವ ಒಳ್ಳೆಯ ಆಹಾರ, ದೈಹಿಕ ಶ್ರಮ, ವ್ಯಸನ ಮುಕ್ತವನ್ನು ಅನುಸರಿಸಬೇಕು.

ನಮ್ಮ ವೈದ್ಯ ಕಾಯಕದಲ್ಲಿ ಶೇ ೯೦ರಷ್ಟು ಯಶಸ್ಸು, ಉಳಿದ ಶೇ ೧೦ರಷ್ಟು ದೈವ ಹಾಗೂ ಗುರು ಬಲವಾಗಿರುತ್ತದೆ. ವ್ಯಕ್ತಿ ತನ್ನ ಜವಾಬ್ದಾರಿ ತಿಳಿದು ಆರೋಗ್ಯ ಕಾಪಾಡಿಕೊಳ್ಳಬೇಕು. ಗುರುಗಳು ತಮ್ಮ ಕಾಯಕದಲ್ಲಿ ಬದಲಾವಣೆ ಮಾಡಿಕೊಂಡಿಲ್ಲ, ಆದರೆ ಜೀವನದ ನಡೆಯಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ಇದು ಯಾರಿಗೂ ಕಾಣಾದ ರೀತಿಯಲ್ಲಿ ಅವರು ಅನುಸರಿಸುತ್ತಿರುವುದು ದೈವ ಹಾಗೂ ಗುರುಬಲವಾಗಿದೆ ಎಂದು ಹೇಳಿದರು.

ಡಾ.ಗುರುಬಸವ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ ಕರೋನಾ ಸಮಯದಲ್ಲಿ ತಮ್ಮ ಎರಡು ಕಿಡ್ನಿ ವೈಪಲ್ಯ ಹಾಗೂ ಚಿಕಿತ್ಸೆ ನಂತರದಲ್ಲಿ ಪಾರ್ಶ್ವವಾಯು ಹೊಡೆದ ಚಿಂತಾಜನಕ ಸ್ಥಿತಿಯ ಸಮಯದಲ್ಲಿ ಆತ್ಮಬಲ, ಗುರುಬಲ, ದೈವಬಲ, ಭಕ್ತರ ಪ್ರಾರ್ಥನೆಯಿಂದ ಇಂದು ಮತ್ತೆ ನಾವು ಬಂದಿದ್ದೇವೆ. ನಮಗೆ ಕಿಡ್ನಿ ಧಾನ ಮಾಡಿದ ಆಶಾ, ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು, ಹಾರೈಕೆ ಮಾಡಿದ ಭಕ್ತಸಮೂಹಕ್ಕೆ ತಮ್ಮ ಭಾವನಾತ್ಮಕ ಪ್ರಣಾಮಗಳನ್ನು ತಿಳಿಸಿದರು.

ದೃಢ ನಿಲುವು ಮನುಷ್ಯನಿಗೆ ಖಚಿತ ಯಶಸ್ಸು ತರುತ್ತದೆ. ಮೂರು ಮಠಗಳ ಜವಾಬ್ದಾರಿ ನಿರಾಳವಾಗಿ ಸಾಗಿಸಲು ಶರಣ ಕಾಯಕ ನಿಷ್ಟೆ ಬಲವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅನಸೂಯಮ್ಮ ನೇತೃತ್ವದ ಬೇಲೂರು ತಾಲೂಕು ಮಹಿಳೆಯರಿಂದ ಕಲ್ಯಾಣ ಪತನ ನಾಟಕ ಪ್ರದರ್ಶಿಸಲಾಯಿತು. ಡಾ. ಗಿರೀಶ ಹಾಗೂ ಆಶಾ ಅವರಿಗೆ ಜಿಲ್ಲೆ ಹಾಗೂ ತಾಲೂಕಿನ ವಿವಿಧ ಸಂಘ ಸಂಸ್ಥೆಗಳಿಂದ ಗೌರವಿಸಿ ಅಭಿನಂದಿಸಲಾಯಿತು.

ಡಾ.ಎಂ.ಎಸ್. ಗಿರೀಶ್ ರವರಿಗೆ ವೈದ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಿದ್ದನಮಠ ಸಿದ್ದೇಶ ರಚಿತ ಚಿತಾಗಾರ, ಬದುಕಿನ ಕನ್ನಡಿ, ಆಧುನಿಕ ವಚನಗಳು ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

ಬೆಂಗಳೂರಿನ ಫೌಂಡರ್ ಹೆಲ್ತ್ ಸ್ಥಾಪಕ ಸುನಿಲ್ ಕ್ರಿಸ್ಟೋಫರ್, ಬೇಲೂರಿನ ಮಂಜುಳಾ ಯೋಗೀಶ್, ಡಾ. ಇಂಚರಾ ಇದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
2 Comments

Leave a Reply

Your email address will not be published. Required fields are marked *