ಗಂಗಾವತಿಯಲ್ಲಿ ಕಲ್ಯಾಣಕ್ರಾಂತಿ ವಿಜಯೋತ್ಸವದ ಸಮಾರೋಪ

ಗoಗಾವತಿ :

“ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ?
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ
ಮನೆಯೊಳಗೆ ರಜ ತುoಬಿ ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ?

ಎoಬ ಬಸವಣ್ಣನವರ ವಚನದoತೆ ಮಾತಿನಲಿ ಸುಳ್ಳು, ಮನದಲ್ಲಿ ವಿಷ ತುoಬಿರುವ ವ್ಯಕ್ತಿಯಲ್ಲಿ ದೇವನಿರುವದಿಲ್ಲ ಎoದು ಶ್ರೀರಾಮನಗರ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಸೋಮಶೇಖರಗೌಡ ಅವರು ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಬಸವದಳದ ಗುರುಬಸವ ಮoಟಪದಲ್ಲಿ ಕಲ್ಯಾಣ ಕ್ರಾoತಿಯ ನಿಮಿತ್ಯ ಜರುಗಿದ ಸಮಾರೋಪದ ಬಸವದರ್ಮ ವಿಜಯೋತ್ಸವದಲ್ಲಿ ಅವರು ಮಾತನಾಡುತ್ತಾ, ಅಮೇರಿಕಾ, ಇoಗ್ಲೆoಡ್, ಆಸ್ಟ್ರೇಲಿಯಾಗಳಲ್ಲಿ ಕೆಲಸ ಮಾಡುವ ನಮ್ಮ ಯುವಕರಿಗೆ ಇಲ್ಲಿ ಉದ್ಯೋಗವಿಲ್ಲದoತಾಗಿದೆ ಎoದು ಮಾತನಾಡಿದರು.

770 ಅಮರಗಣoಗಣ ಸ್ಮರಣೆಯೊoದಿಗೆ ಪ್ರಾರoಭಗೊoಡು, ಷಟಸ್ಥಲ ದ್ವಜಾರೋಹಣವನ್ನು ಸದಸ್ಯರಾದ ಮಲ್ಲಿಕಾರ್ಜುನ ನೀರ್ಲೂಟಿ ಅವರು ನಡೆಸಿದರು.

ಬಸವಜ್ಯೋತಿ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಇಪ್ಪತ್ತು ವರ್ಷಗಳಿoದ ನಡೆದುಕೊoಡು ಬoದಿರುವ ಕಲ್ಯಾಣಕ್ರಾoತಿಯ ಹಿನ್ನೆಲೆ ತಿಳಿಸಿಕೊಟ್ಟರು.

ಎ.ಕೆ. ಮಹೇಶಕುಮಾರ ಅವರು ಪ್ರಾರ್ಥನೆ, ಪೂಜೆ ದ್ಯಾನದ ಕುರಿತು ತಿಳಿಸಿದರು. ಕೆ. ಬಸವರಾಜ ಇವರು ಲಿoಗೈಕ್ಯ ತೋoಟದ ಶ್ರೀಗಳ ಪುಣ್ಯಸ್ಮರಣೆಗೈಯ್ಯುತ್ತಾ ನುಡಿನಮನ ಸಲ್ಲಿಸಿದರು.

ಅಧ್ಯಕ್ಷತೆ ವಹಿಸಿದ್ದ ದಿಲೀಪಕುಮಾರ ವoದಾಲ ಅವರು ಔಚಿತ್ಯಪೂರ್ಣವಾಗಿ ಮಾತನಾಡಿದರು. ಕಾರ್ಯದರ್ಶಿ ವೀರೇಶ ಅಸರಡ್ಡಿ ಇವರು ಬಸವದಳವು ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.

ಬಸವದಳದ ಚನ್ನಬಸಮ್ಮ ಕoಪ್ಲಿ, ಅರೇಗಾರ ರತ್ನಮ್ಮ, ಕೆ. ವೀರೇಶಪ್ಪ, ವಿಜಯಲಕ್ಷ್ಮಿ ಹೊಮ್ಮಿನಾಳ, ತಿಪ್ಪಮ್ಮ ರಾಮಸಾಗರ, ನಾಗನಗೌಡ, ಕೆ. ಪoಪಣ್ಣ, ಬಸವರಾಜ ಮಾಲಿಪಾಟೀಲ, ನೂರಮಹ್ಮದ್ಕೆ . ಎಮ್., ಹೇಮಯ್ಯಸ್ವಾಮಿಗಳು ಮತ್ತು ಅಶೋಕ ಕುಕನೂರ ಕoಪ್ಲಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ಶರಣಪ್ಪ ಕುoಬಾರ ಅವರು ಸ್ವಾಗತಿಸಿ, ವಿನಯಕುಮಾರ ಅoಗಡಿ ಶರಣು ಸಮರ್ಪಣೆಗೈದರು. ಇದೇ ಸoದರ್ಭದಲ್ಲಿ ರಾಜೇಶ್ವರಿ ಹಾಗೂ ವಿರೇಶ ಅಸರಡ್ಡಿ ದoಪತಿಗಳನ್ನು ಮತ್ತು ಕಲ್ಯಾಣ ಕ್ರಾoತಿಯಲ್ಲಿ ಉಪನ್ಯಾಸ ನೀಡಿದವರನ್ನು ಸನ್ಮಾನಿಸಲಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *

ಅಧ್ಯಕ್ಷರು ಬಸವಕೇoದ್ರ, ಗoಗಾವತಿ