ಲಿಂಗಸುಗೂರು :

12 ನೇ ಶತಮಾನದ ಪ್ರಮುಖ ಶಿವಶರಣೆ ಗಂಗಾಂಬಿಕೆ ತಾಯಿಯವರ ಜೀವನ ಚರಿತ್ರೆ ಮತ್ತು ಅವರ ವಚನ ವಿಶ್ಲೇಷಣೆಯನ್ನು ದೀಪ ಇಜೇರಿ ಅವರು ವಿಜಯ ಮಹಾಂತೇಶ್ವರ ಮಠದಲ್ಲಿ ನಡೆದ ನವ ವಚನ ಚಿಂತನೆ ಕಾರ್ಯಕ್ರಮದಲ್ಲಿ ನಡೆಸಿದರು.

12ನೇ ಶತಮಾನದ ಶಿವಶರಣೆ ಕಳಚೂರಿ ಬಿಜ್ಜಳನ ಆಸ್ಥಾನದ ಮಹಾಮಂತ್ರಿ ಬಲದೇವನ ಮಗಳು ಗಂಗಾಂಬಿಕೆ ಹಾಗೂ ಬಸವಣ್ಣನವರ ಹಿರಿಯ ಪತ್ನಿ ಅವರಾಗಿದ್ದರು.
ಅವರ 9 ವಚನಗಳು ಲಭ್ಯವಿವೆ. ಅವರ ಅಂಕಿತನಾಮ ‘ಗಂಗಾಪ್ರಿಯ ಕೂಡಲಸಂಗಮ’ ಆಗಿದೆ. ಅನುಭವಮಂಟಪಕ್ಕೆ ಬರುವ ಎಲ್ಲಾ ಶರಣರ ಪ್ರಸಾದ ವ್ಯವಸ್ಥೆ ಮತ್ತು ವಸತಿ ವ್ಯವಸ್ಥೆಯನ್ನು ಗಂಗಾಂಬಿಕೆ ತಾಯಿ ಅವರು ನೋಡಿಕೊಳ್ಳುತ್ತಿದ್ದರು ಎಂದು ಮಾತನಾಡಿದರು.

ಅನುಭವ ಮಂಟಪದಲ್ಲಿ ಬಸವಣ್ಣನವರಿಗೆ ಉತ್ತಮ ನೆರವು ನೀಡುತ್ತಿದ್ದರು. ಇವರಿಗೆ ಬಾಲ ಸಂಗಯ್ಯ ಎಂಬ ಮಗನಿದ್ದನು, ತದನಂತರ ಕಾರಣಾಂತರಗಳಿಂದ ಲಿಂಗೈಕ್ಯನಾಗುತ್ತಾರೆ ಎಂದು ತಿಳಿದು ಬರುತ್ತದೆ ಎಂದರು.
“ಅವಳ ಕಂದ ಬಾಲ ಸಂಗ, ನಿನ್ನ ಕಂದ ಚೆನ್ನ ಲಿಂಗ “ ಎಂಬ ಅವರ ವಚನದ ವಿಶ್ಲೇಷಣೆ ನಡೆಯಿತು. ವಚನ ಕುರಿತು ಹೆಚ್ಚಿನ ಸಂವಾದ ಕೂಡ ನಡೆಯಿತು.

ಕಾರ್ಯಕ್ರಮದ ಸಾನಿಧ್ಯವನ್ನು ಪೂಜ್ಯರಾದ ಸಿದ್ದಲಿಂಗ ಮಹಾಸ್ವಾಮಿಗಳು ವಹಿಸಿದ್ದರು. ಅಕ್ಕನ ಬಳಗದ ವತಿಯಿಂದ ವಚನ ಪ್ರಾರ್ಥನೆ ನಡೆಯಿತು. ನಿರೂಪಣೆಯನ್ನು ಸುಮಿತ್ರ ಪಾಟೀಲ ನೆರವೇರಿಸಿದರು ಹಾಗೂ ವಚನ ಗಾಯನವನ್ನು ಸುನಂದ ಮುಜ್ಜಿಗಿ ಮಾಡಿದರು. ಎಂಟನೇ ದಿನದ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಮಠದ ಭಕ್ತರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece
