ಹುಬ್ಬಳ್ಳಿ :
ಬಸವಕೇಂದ್ರದ ವತಿಯಿಂದ ಹಮ್ಮಿಕೊಂಡಿರುವ ‘ಬಸವ ಭಾಷೆ ಪ್ರವಚನ’ ಕಾರ್ಯಕ್ರಮವನ್ನು ಶಾಸಕ ಮಹೇಶ ಟೆಂಗಿನಕಾಯಿ ಅವರು ರವಿವಾರ ಸಂಜೆ ಉಧ್ಘಾಟಿಸಿದರು.

ಈ ಸಂದರ್ಭದಲ್ಲಿ ಅವರು ಮಾತನಾಡುತ್ತ, 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಸಾರಿದ ಕಾಯಕ, ದಾಸೋಹ ಮತ್ತು ಲಿಂಗ ಸಮಾನತೆಯ ಸಂದೇಶಗಳನ್ನು ಇಂದಿನ ಪೀಳಿಗೆಗೆ ತಲುಪಿಸಲು ಇಂತಹ ಪ್ರವಚನಗಳು ಅತ್ಯಂತ ಪರಿಣಾಮಕಾರಿಯಾಗಿವೆ ಎಂದರು.
ಪೂಜ್ಯ ಬಸವಲಿಂಗ ಮಹಾಸ್ವಾಮಿಗಳು, ರುದ್ರಾಕ್ಷಿಮಠ ಹುಬ್ಬಳ್ಳಿ ಅವರು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.
ಬೀದರ ಬಸವಗಿರಿಯ ಲಿಂಗಾಯತ ಮಹಾಮಠದ ಪೂಜ್ಯ ಪ್ರಭುದೇವ ಮಹಾಸ್ವಾಮಿಗಳು ಪ್ರವಚನದ ಪ್ರಾರಂಭಿಕ ನುಡಿಗಳನ್ನು ಆಡಿದರು.

ಕಾರ್ಯಕ್ರಮದ ಅನುಭಾವವನ್ನು ಬಸವ ಮಂಟಪದ ಸಂಚಾಲಕರಾದ ಶಶಿಧರ ಕರವೀರಶೆಟ್ಟರ ಅವರು ನೀಡಿದರು. ಪ್ರಾಸ್ತಾವಿಕ ನುಡಿಗಳನ್ನು ಕೇಂದ್ರದ ಕಾರ್ಯಾಧ್ಯಕ್ಷ ಪ್ರೊ. ಎಸ್. ವಿ. ಪಟ್ಟಣಶೆಟ್ಟಿ ಆಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಬಸವಕೇಂದ್ರದ ಅಧ್ಯಕ್ಷರಾದ ಪ್ರೊ. ಜಿ. ಬಿ. ಹಳ್ಯಾಳ ವಹಿಸಿ ಮಾತನಾಡಿದರು. ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಎಂ. ವಿ. ಗೊಂಗಡಶೆಟ್ಟಿ ಉಪಸ್ಥಿತರಿದ್ದರು.
ಪ್ರಭು ಅಂಗಡಿ ಸ್ವಾಗತ ಕೋರಿದರು. ಉಮಾ ಹುಲಿಕಂತಿಮಠ ಸಾಮೂಹಿಕ ಪ್ರಾರ್ಥನೆ ನಡೆಸಿಕೊಟ್ಟರು. ಲಕ್ಷ್ಮೀ ಲಿಂಗಶೆಟ್ಟರ ವಚನ ಪ್ರಾರ್ಥನೆ ಮಾಡಿದರು. ಕೇಂದ್ರದ ಕಾರ್ಯದರ್ಶಿ ಕೆ. ಎಸ್. ಇನಾಮತಿ ನಿರೂಪಣೆ ಮಾಡಿದರು, ಶಿವಯೋಗಿ ಮೂರ್ಖಂಡಿ ಶರಣು ಸಮರ್ಪಣೆ ಮಾಡಿದರು.

ಡಿಸೆಂಬರ್ 13ರವರೆಗೆ ನಗರದ ಗೋಕುಲರಸ್ತೆಯ ಬಸವೇಶ್ವರ ನಗರದ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಪ್ರತಿದಿನ ಸಂಜೆ 6 ರಿಂದ 8 ರವರೆಗೆ ಪ್ರವಚನ ನಡೆಯಲಿದೆ.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU
