ನೂತನ ಅನುಭವ ಮಂಟಪಕ್ಕೆ ಸುತ್ತೂರು ಸ್ವಾಮೀಜಿ ಭೇಟಿ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಕಲ್ಯಾಣ :

ಬಸವಕಲ್ಯಾಣದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಅನುಭವ ಮಂಟಪಕ್ಕೆ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಈಚೆಗೆ ಭೇಟಿಕೊಟ್ಟು ಕಟ್ಟಡ ವೀಕ್ಷಿಸಿದರು.

ಹುಲಸೂರು ಪಟ್ಟಣದ ಗುರುಬಸವೇಶ್ವರ ಸಂಸ್ಥಾನಮಠದ ಶಿವಾನಂದ ಸ್ವಾಮೀಜಿ ಅವರ 75ನೇ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಅಮೃತ ಮಹೋತ್ಸವದ ಸಮಾರಂಭದಲ್ಲಿ ಪಾಲ್ಗೊಳ್ಳಲು ಈ ಭಾಗಕ್ಕೆ ಶ್ರೀಗಳು ಆಗಮಿಸಿದ್ದರು.

ಅನುಭವ ಮಂಟಪ ಕಟ್ಟಡ ಸುತ್ತಾಡಿ, ಅಲ್ಲಿನ ಕಾಮಗಾರಿ ವಿಷಯಗಳನ್ನು ಕೇಳಿ ತಿಳಿದುಕೊಂಡ ನಂತರ ಮಾತನಾಡಿದ ಶ್ರೀಗಳು,
ಅನುಭವ ಮಂಟಪದ ಕಟ್ಟಡ ಅತ್ಯಂತ ಆಕರ್ಷಕವಾಗಿ, ಸುಂದರವಾಗಿ ನಿರ್ಮಾಣಗೊಳ್ಳುತ್ತಿದೆ ಎಂದರು.

ಕರ್ನಾಟಕ ಸರ್ಕಾರವು ಸುಮಾರು 740 ಕೋಟಿ ರುಪಾಯಿ ಅಂದಾಜು
ವೆಚ್ಚದಲ್ಲಿ ಈ ಭವ್ಯ ಕಟ್ಟಡವನ್ನು ನಿರ್ಮಿಸುತ್ತಿರುವುದು ನಾಡಿಗೆ ಸಂತಸದ ಸಂಗತಿಯಾಗಿದೆ ಎಂದರು.

ಮಂಟಪದ ಕಟ್ಟಡದಲ್ಲಿ ಶರಣರ ಜೀವನ, ಅವರ ವಿಚಾರಧಾರೆಗಳು ಹಾಗೂ ವಚನ ಸಾಹಿತ್ಯವನ್ನು ಪರಿಚಯಿಸುವ ಕೆಲಸ ನಡೆಯುತ್ತಿದೆ. ಕಟ್ಟಡದ ಕಂಬಗಳಲ್ಲಿ ಶರಣರ ಚಿತ್ರ ಮತ್ತು ಅವರ ವಚನಗಳನ್ನು ಕೆತ್ತಲಾಗುತ್ತಿದೆ.

ಬಸವಾದಿ ಶರಣರ ಕುರಿತು ವಿಚಾರ ಸಂಕಿರಣ ಹಾಗೂ ವಿಚಾರ ಗೋಷ್ಠಿ, ಮತ್ತಿತರ ಕಾರ್ಯಕ್ರಮಗಳುಗಳನ್ನು ಆಯೋಜಿಸಲು ಅಗತ್ಯ ವ್ಯವಸ್ಥೆಗಳನ್ನು ಅಲ್ಲಿ ಕಲ್ಪಿಸಲಾಗುತ್ತಿದೆ ಎಂದು ಶ್ರೀಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಅನುಭವ ಮಂಟಪದ ಸಂಚಾಲಕರಾದ ಪೂಜ್ಯ ಶಿವಾನಂದ ದೇವರು, ಬಸವಕಲ್ಯಾಣ ಶಾಸಕ ಶರಣು ಸಲಗರ, ಹುಮನಾಬಾದ ಮಾಜಿ ಶಾಸಕ ರಾಜಶೇಖರ ಪಾಟೀಲ, ಉದ್ಯಮಿ ಶಿವರಾಜ ನರಶೆಟ್ಟಿ ಅವರು ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
Leave a comment

Leave a Reply

Your email address will not be published. Required fields are marked *