ವಚನ ದರ್ಶನ ಪುಸ್ತಕದ ಬೆಂಬಲಕ್ಕೆ ನಿಂತಿರುವ ಲಿಂಗಾಯತ ಮಠಾಧೀಶರಿಗೆ ಬಸವಣ್ಣನವರ ಅನುಯಾಯಿಗಳ ಒಕ್ಕೂಟದಿಂದ ೧೦ ಪ್ರಶ್ನೆಗಳು

ಓಂಕಾರ್ ಎಸ್ ಚೋಂಡಿ
August 3, 2024

ಲಿಂಗಾಯತರನ್ನು, ಬಸವಣ್ಣನವರನ್ನು, ವಚನಗಳನ್ನು ಹಿಂದೂ ಪರಂಪರೆಯೊಳಗೆ ಸೇರಿಸಲು ಹೊರಟಿರುವ ವಚನ ದರ್ಶನ ಪುಸ್ತಕದ ಬೆಂಬಲಕ್ಕೆ ಹಲವಾರು ಲಿಂಗಾಯತ ಮಠಾಧೀಶರು ನಿಂತಿದ್ದಾರೆ.

ಅವರಿಗೆ ೧೦ ಪ್ರಶ್ನೆಗಳನ್ನು ‘ವಿಶ್ವ ಗುರು ಬಸವಣ್ಣನವರ ಅನುಯಾಯಿಗಳ ಒಕ್ಕೂಟದ’ ಅಧ್ಯಕ್ಷ ಓಂಕಾರ್ ಎಸ್ ಚೋಂಡಿ ಅವರು ಕೇಳಿದ್ದಾರೆ.

೧) ಲಿಂಗಾಯತ ಧರ್ಮದ ಮಠಾಧೀಶರೇ ನೀವು ಬಸವ ಅನುಯಾಯಿಗಳೆ? ಬಸವ ತತ್ವದ ಬಗ್ಗೆ ನಿಮಗೆ ನಂಬಿಕೆಯಿದೆಯೇ?

೨) ೧೨ನೇ ಶತಮಾನದಲ್ಲಿ ಶರಣರ ಚಳುವಳಿ ದುರಂತ ಅಂತ್ಯ ಕಾಣಲು ಕಾರಣವೇನು? ಬಸವಣ್ಣನವರನ್ನು ವಿರೋದಿಸಿದವರಲ್ಲಿ ಗಡಿ ಪಾರು ಮಾಡಿದವರಲ್ಲಿ ಪ್ರಮುಖರು ಯಾರು ? ಯಾವ ಕಾರಣದಿಂದ ಅವರು ಬಸವಣ್ಣನವರನ್ನು ವಿರೋದಿಸಿದರು ಎನ್ನುವುದು ನಿಮಗೆ ಗೊತ್ತೇ?

೩) ಬಸವಣ್ಣ ಮತ್ತು ಬಸವಾದಿ ಶರಣರು ಜಾತೀಯತೆ, ವರ್ಣ ವ್ಯವಸ್ಥೆ, ವೈದಿಕ ಆಚರಣೆ, ವೇದ ಉಪನಿಷತ್ತುಗಳನ್ನು ಒಪ್ಪಿಕೊಂಡಿದ್ದರೆ ?

೪) ಬಸವಾದಿ ಶರಣರ ವಚನ ದರ್ಶನ ಪುಸ್ತಕ ಮುಖ್ಯ ವಾದವೆಂದರೆ ವಚನಗಳು ವೇದ, ಉಪನಿಷತ್ತುಗಳನ್ನು ವಿರೋದಿಸಿಲಿಲ್ಲ ಎನ್ನುವುದು. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಈ ಸಮಾಜಕ್ಕೆ ತಿಳಿಸಿ.

೫) ಅಪ್ಪ ಬಸವಣ್ಣ ಹಿಂದು ಇಂದು ಮುಂದು ಒಬ್ಬ ಹಿಂದೂ ಅಂತ ಕೆಲವು ಸ್ವಾಮಿಗಳು ಹೇಳಿದ್ದಾರೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

೬) ಬಸವಾದಿ ಶರಣರ ವಚನ ದರ್ಶನ ಪುಸ್ತಕವನ್ನು ಸಹಸ್ರಾರು ಲಿಂಗಾಯತರು ವಿರೋಧಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇದರ ವ್ಯಾಪಕ ಟೀಕೆಯಾಗುತ್ತಿದೆ ಇದಕ್ಕೆ ಕಾರಣವೇನು?

೭) ಬಸವಾದಿ ಶರಣರ ವಚನ ತತ್ವವನ್ನು ತಿರುಚಿ ಬರೆದ ವಚನ ದರ್ಶನ ಪುಸ್ತಕದ ಹಿಂದೆ ಇರುವ ವ್ಯಕ್ತಿಗಳು, ಸಂಘಟನೆಗಳು ಯಾವುವು? ಅವರ ಉದ್ದೇಶವೇನು ಈ ಸಮಾಜಕ್ಕೆ ವಿವರಿಸಿ.

೮) ಸಂಘ ಪರಿವಾರದವರು ಪದೇ ಪದೇ ಬಸವಣ್ಣನವರ ಮೇಲೆ, ವಚನಗಳ ಮೇಲೆ ಈ ತರಹದ ಕಾರ್ಯಕ್ರಮಗಳನ್ನು ಮಾಡುತ್ತಿರಲು ಕಾರಣವೇನು?

೯) ಒಬ್ಬ ಮಠಾಧೀಶನಾಗಲಿ, ಒಬ್ಬ ರಾಜಕಾರಣಿಯಾಗಲಿ ಈ ವಿಷಯದ ಬಗ್ಗೆ ಕೇಳುವುದಿಲ್ಲ, ಯಾಕೆ?

೧೦) ಲಿಂಗಾಯತ ತತ್ವಕ್ಕೆ ಸಂಬಂಧ ಇಲ್ಲದ, ಇಷ್ಟೊಂದು ವಿವಾದ ಹುಟ್ಟುಹಾಕಿರುವ ಪುಸ್ತಕದ ಬಿಡುಗಡೆ ಸಮಾರಂಭಕ್ಕೆ ಹೋಗಿ ಲಿಂಗಾಯತರ ವಿರೋಧ, ಟೀಕೆಗಳನ್ನು ಕಟ್ಟಿಕೊಳ್ಳಲು ತಯಾರಿದ್ದೀರಿ ಇದಕ್ಕೆ ಕಾರಣವೇನು ? ಇದನ್ನು ಲಿಂಗಾಯತರಿಗೆ ತಿಳಿಸಬೇಕು ಇಲ್ಲದಿದ್ದರೆ ಲಿಂಗಾಯತ ಧರ್ಮ ಬಿಟ್ಟು ಹೋಗಬೇಕು.

ಶರಣು ಶರಣಾರ್ಥಿಗಳು.
ಓಂಕಾರ್ ಎಸ್ ಚೋಂಡಿ

Share This Article
Leave a comment

Leave a Reply

Your email address will not be published. Required fields are marked *