ಪ್ರತಿ ಶ್ರಾವಣ ಮಾಸದ ಒಂದು ತಿಂಗಳು ಹುಬ್ಬಳ್ಳಿಯಲ್ಲಿ ಶರಣರ ಪಥ ಸಂಚಲನ ಜರುಗುತ್ತದೆ.
ಮೂವತ್ತು ವರ್ಷಗಳಿಂದ ಸತತವಾಗಿ ನಡೆದುಕೊಂಡು ಬಂದಿರುವ ಈ ಸಂಪ್ರದಾಯ ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಎರಡು ವರ್ಷ ಮಾತ್ರ ನಿಂತಿತ್ತು.
ಸುಮಾರು 50 ಜನರ ಗುಂಪು ಬೆಳಗಿನ ಜಾವ 6:00 ಗಂಟೆಗೆ ರುದ್ರಾಕ್ಷಿ ಮಠದಿಂದ ಪಾದಯಾತ್ರೆಯಲ್ಲಿ ಹೊರಟು ಒಂದು ಸುತ್ತು ಹಾಕಿ ಮತ್ತೆ ಮರಳಿ ರುದ್ರಾಕ್ಷಿ ಮಠವನ್ನು 6.45 ಕ್ಕೆ ಸೇರುತ್ತಾರೆ.
ದಾರಿಯುದ್ದಕ್ಕೂ ಮಕ್ಕಳು ಹಿರಿಯರು ಮಹಿಳೆಯರು ಓಂ ನಮಃ ಶಿವಾಯ ಶಿವ ಮಂತ್ರವನ್ನು ಹೇಳುತ್ತಾ ಭಜನೆ ಮಾಡುತ್ತ ಸಾಗುತ್ತಾರೆ. ಮಠದಲ್ಲಿ ಎಲ್ಲರೂ ಸೇರಿ ವಚನಗಳನ್ನು ಹೇಳುತ್ತಾರೆ. ಮಠದ ಬಸವಲಿಂಗ ಸ್ವಾಮಿಗಳು ಕೊನೆಗೆ ಆಶೀರ್ವಚನವನ್ನು ನೀಡುತ್ತಾರೆ.
ಪಾದಯಾತ್ರೆಯನ್ನು ಆರಂಭಿಸಿದವರು ಹುಬ್ಬಳ್ಳಿ ಗಂಟಿಕೇರಿ ಓಣಿಯ ಹಿರಿಯರಾದಂತಹ ಶರಣ ವೆಂಕನಗೌಡರು ಪಾಟೀಲ್ ಹಾಗೂ ಶರಣ ಚನ್ನಬಸವಣ್ಣ ಕ್ಯಾತನವರ್.
ಈಗ ಈ ಭಕ್ತಿ ಕಾರ್ಯವನ್ನು ಓಣಿಯ ಪ್ರಮುಖರು ಮುಂದುವರೆಸಿಕೊಂಡು ಬರುತ್ತಿದ್ದಾರೆ, ಇಂದಿನ ಪಾದಯಾತ್ರೆಯಲ್ಲಿ ಶರಣರಾದ ಗಂಗಾಧರ್ ಕ್ಯಾತಾನವರ, ನಂದೆಪ್ಪನವರ್, ಮೋಹನ್ ಮೆಟಗುಡ್, ರಾಘವೇಂದ್ರ, ವಿರುಪಾಕ್ಷಪ್ಪ ಉಪ್ಪಿನ್, ಶಿವಲೀಲಾ, ಗೊಂದಿ, ಶರಣೆ ಈಟಿ, ದಾಕ್ಷಾಯಿಣಿ ಯಲಬುರ್ಗಿ, ಶಾಂತಮ್ಮ ಮುಂತಾದವರು ಭಾಗವಹಿಸಿದ್ದರು..