ವಚನ ದರ್ಶನ: ಬಸವ ಅನುಯಾಯಿಗಳಿಗೆ ಈಗ ಸಿದ್ದಲಿಂಗ ಶ್ರೀಗಳ ಮಾರ್ಗದರ್ಶನದ ಅಗತ್ಯವಿದೆ

ಅಣ್ಣನ ವಚನಗಳು ಸರಳವಾಗಿದ್ದು, ಅವುಗಳನ್ನು ಸಾಮಾನ್ಯ ಜನರೂ ಸುಲಭವಾಗಿ ಗ್ರಹಿಸುವಂತಹ ಸಾಮರ್ಥ್ಯವಿದ್ದೂ, ಯಾರೂ ವಿಪರೀತವಾಗಿ ಗ್ರಹಿಸಿ ತಪ್ಪಾಗಿ ಅರ್ಥೈಸಿದ್ದನ್ನು ಎಲ್ಲೂ ಕಾಣಿಲ್ಲ.

ಸೂಕ್ತ ಅನುಭವ, ನುರಿತ ಕ್ಷಮತೆ ಮತ್ತು ಅಪಾರ ವಿದ್ವತ್ತ್ ಹೊಂದಿರುವ ಸಿದ್ಧಲಿಂಗ ಶ್ರೀಗಳು ವಚನಗಳನ್ನು ಅನರ್ಥಕ್ಕೆ ಎಡೆ ಮಾಡಿಕೊಡುವಂತೆ ಕೆಲವರು ವ್ಯಾಖ್ಯಾನಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಅವರು ಯಾವ ಯಾವ ವಚನಗಳ ಬಗ್ಗೆ ಈ ಮಾತು ಹೇಳಿದ್ದಾರೆ ಮತ್ತು ಅವುಗಳ ನಿಜವಾದ ಅರ್ಥವೇನು ಎಂಬುದನ್ನು ವಿವರಿಸಿ ನಮಗೆ ಬುದ್ದಿ ಹೇಳಬೇಕು. ಈ ನಿಟ್ಟಿನಲ್ಲಿ ಅವರ ಮಾರ್ಗದರ್ಶನದ ಅಗತ್ಯವಿದೆ.

ಬ್ರಿಟೀಶರು ಬಂದು, ವಚನಗಳನ್ನು ಓದಿ ಅರ್ಥೈಸಿ ತಮ್ಮ ಮಾನದಂಡಗಳ ಅನುಸಾರವಾಗಿ ಅವುಗಳ ಗ್ರಹಿಕೆಯನ್ನೇ ತಿರುಚಿದರು ಎಂಬುದು ಪೊಳ್ಳು ವಾದ. ೭೦೦-೮೦೦ ವರ್ಷಗಳಿಂದಲೂ ತಲತಲಾಂತರವಾಗಿ ವಚನಗಳನ್ನು ಓದಿ, ಅವುಗಳ ಒಳಾರ್ಥಗಳ ವಿವರಣೆಯನ್ನು ನಮ್ಮ ಸಮಾಜ ಮಾಡುತ್ತಲೇ ಬರುತ್ತಿದೆ.

ಒಂದು ವೇಳೇ ಬ್ರಿಟೀಶರು ಪೂರ್ವಾಗ್ರಹಪೀಡಿತರಾಗಿ ಅರ್ಥವಿವರಣೆಗಳು ತಿರುಚಿದ್ದೇ ಆಗಿದ್ದರೆ ಅವರು ಹೇಳಿದನ್ನು ಒಪ್ಪಿಕೊಳ್ಳಲ್ಲು ನಮ್ಮ ಹಿರಿಯರಿಗೆ ಬೌದ್ಧಿಕ ದಾರಿದ್ರ್ಯವೇನೂ ಇರಲಿಲ್ಲ.

ಸನಾತನವಾದಿಗಳನ್ನು ದಿಕ್ಕರಿಸಿ ಕಟ್ಟಿದ ಬಸವ ತತ್ವಕ್ಕೆ ವಿರುದ್ಧವಾದ ಚಿಂತನೆಗಳನ್ನು ಅಳವಡಿಸಿರುವ ಈ ಪ್ರಕಟಣೆ
ದುರುದ್ದೇಶಪೂರಕವಾಗಿಯೇ ಮಾಡಿರಬಹುದೇ ಎಂಬ ಅನುಮಾನ ಬರುತ್ತಿದೆ.

ಪರೋಕ್ಷವಾಗಿ ಕೇಸರೀಕರಣಗೊಳಿಸುವ ಪ್ರಯತ್ನಗಳಿರುವ ಇಂತಹ ಪ್ರಕಟಣೆಗಳನ್ನು ಬಸವ-ತತ್ವ-ಪಾಲಕರು
ಎಂದೂ ಒಪ್ಪಿಕೊಳ್ಳಲೇ ಬಾರದು ಮತ್ತು ಈ ಪ್ರಕಟಣೆಯ ಪ್ರಾಮಾಣಿಕತೆಯನ್ನು ಪ್ರಶ್ನಿಸಬೇಕು.

ವರ್ಣಾಶ್ರಮ ವಿರೋಧ ಚಿಂತನೆಗಳಿರುವ ವಚನಗಳನ್ನು ಸನಾತನಿಗಳು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ.
ಸಮಾಜದಲ್ಲಿ ಸಮಾನತೆ ಮತ್ತು ಜಾತಿ ಪದ್ಧತಿ ನಿರಾಕರಣೆಗಳಂತೂ ದೂರದ ಮಾತುಗಳೇ.

Share This Article
Leave a comment

Leave a Reply

Your email address will not be published. Required fields are marked *

ಲೇಖಕರು ಬೆಂಗಳೂರಿನಲ್ಲಿರುವ ಹಿರಿಯ ಲೆಕ್ಕ ಪರಿಶೋಧಕರು