ನಂಜನಗೂಡು ಪಟ್ಟಣದಲ್ಲಿರುವ ಅನುರಾಗ ಮಕ್ಕಳ ಮನೆಯಲ್ಲಿ ಸಹಭಾಗಿತ್ವದಲ್ಲಿ ಈ ವರ್ಷದ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಕಾರ್ಯಕ್ರಮ ಗುರವಾರ ನಡೆಯಿತು.
ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜುರವರ ಅನುಪಸ್ಥಿತಿಯಲ್ಲಿ ಪೂಜ್ಯ ಬಸವಯೋಗಿಪ್ರಭುಗಳು ಬಸವಭಾರತ ಪ್ರತಿಷ್ಠಾನದ ಆಶಯಗಳನ್ನು ತಿಳಿಸಿ, ಲಿಂಗಾಯತ ಧರ್ಮ ಹೋರಾಟ ಏಕೆ ಮಾಡಬೇಕು ಮತ್ತು ಅಲ್ಪಸಂಖ್ಯಾತ ಮಾನ್ಯತೆ ಸಿಕ್ಕರೆ ಏನೇನು ಪ್ರಯೋಜನಗಳು ಸಿಗುತ್ತವೆ ಎಂದು ವಿವರವಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಶರಣ ಸಂಸ್ಕೃತಿ ಕೇಂದ್ರದ ಕಾ.ಸು. ನಂಜಪ್ಪನವರು ಬಸವಧರ್ಮದ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಚೌಹಳ್ಳಿ ನಿಂಗರಾಜಪ್ಪನವರು, ಬಸವಭಾರತ ಪ್ರತಿಷ್ಠಾನ ಶಿವರುದ್ರಪ್ಪನವರು ಮತ್ತು ಇನ್ನೂ ಆನೇಕ ಮುಖಂಡರುಗಳು ಉಪಸ್ಥಿತರಿದ್ದರು .
ಅನುರಾಗ ಮಕ್ಕಳ ಮನೆಯ ಅಧ್ಯಕ್ಷ ಸೋಮಶೇಖರ್ ಅವರನ್ನು ಬಸವಭಾರತ ಪ್ರತಿಷ್ಠಾನದವತಿಯಿಂದ ಸನ್ಮಾನಿಸಲಾಯಿತು.
