ಅಜಗಣ್ಣ-ಮುಕ್ತಾಯಕ್ಕರ ಲಕ್ಕುಂಡಿಯಲ್ಲಿ ಶ್ರಾವಣ ಕಾರ್ಯಕ್ರಮ

ಗದಗ

ಶಿವನಿಗೆ, ಶಿವನ ಪರಂಪರೆಗೆ, ಶಿವನು ಹುಟ್ಟಿಸಿದ ಸಕಲ ಜೀವಾವಳಿಗೆ ಯಾರು ಲೇಸನ್ನು ಬಯಸುತ್ತಾರೋ ಅವರೇ ನಿಜವಾದ ಶರಣ-ಶರಣೆಯರೆಂದು ಪ್ರಾಚಾರ್ಯ ಎನ್.ಎಂ.ಪವಾಡಿಗೌಡ್ರ ಅವರು ರವಿವಾರ ಹೇಳಿದರು.

ಜಿಲ್ಲಾ ಬಸವದಳ, ಬಸವ ಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ, ಶರಣ ಅಜಗಣ್ಣ-ಮುಕ್ತಾಯಕ್ಕರ ಜನ್ಮಸ್ಥಳ ಲಕ್ಕುಂಡಿ ಗ್ರಾಮದ ವಿರೂಪಾಕ್ಷೇಶ್ವರ ಭಜನಾ ಸಂಘದಲ್ಲಿ ನಡೆದ ವಚನ ಶ್ರಾವಣ ೨೦೨೪, ೧೫ನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಗ್ರ ಜ್ಞಾನದ ಇತಿಹಾಸವನ್ನು ಲಕ್ಕುಂಡಿ ಗ್ರಾಮ ಹೊಂದಿದೆ. ಗ್ರಾಮದವರೇ ಆಗಿದ್ದ ಅಜಗಣ್ಣ-ಮುಕ್ತಾಯಕರನ್ನು ನಾವು ಸರಿಯಾಗಿ ತಿಳಿದುಕೊಂಡರೆ ವಚನಕಾರರ ಶ್ರೇಷ್ಠ ವಿಚಾರಗಳನ್ನು ತಿಳಿದಂತೆ.

ಕೃಷಿಕೃತ್ಯ ಮತ್ತೀತರ ಶ್ರಮದ ಕಾಯಕದ ಜೀವಿಗಳು ಬಸವಣ್ಣನವರ ಅನುಭವ ಮಂಟಪದಲ್ಲಿ ಶರಣರಾಗಿದ್ದರು. ಅಂಥ ಶರಣರ ವಚನಗಳ ಅನುಭಾವದ ಶಾಲೆಗಳನ್ನು ನಾವೀಗ ಎಲ್ಲಾ ಕಡೆ ತೆರೆಯಬೇಕಿದೆ. ಶಿವಶರಣರ ತತ್ವ ಕೇಳುವುದೇ ಒಂದು ಯೋಗವಾಗಿದೆ ಎಂದು ಪವಾಡಿಗೌಡ್ರ ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿ ಬಸವದಳದ ವಿ.ಕೆ.ಕರೇಗೌಡ್ರ ಮಾತಾಡಿದರು.

ಲಕ್ಕುಂಡಿ ವಿರೂಪಾಕ್ಷೇಶ್ವರ ರಚನಾ ಸಂಘದ ಅಧ್ಯಕ್ಷ ವಿರುಪಾಕ್ಷಪ್ಪ ಕಮತರ, ಗ್ರಾಮಸ್ಥರಾದ ವಿರುಪಣ್ಣ ಕಲಕೇರಿ, ಅಶೋಕ ಬೂದಿಹಾಳ, ಹಾಲಪ್ಪ ಮುಸಕಿನಬಾವಿ, ವೀರಪ್ಪ ಸೊಪ್ಪಿನ, ಬುದ್ಧಿವಂತಪ್ಪ ಹಡಗಲಿ, ಸಂಗನಬಸವ ಹಾದಿಮನಿ, ಶೇಖಣ್ಣ ಕವಳಿಕಾಯಿ, ಎಸ್.ಎ.ಮುಗದ,ಪ್ರಕಾಶ ಅಸುಂಡಿ, ಶರಣು ಅಂಗಡಿ, ಎಂ.ಬಿ.ಲಿಂಗದಾಳ, ಗೌರಕ್ಕ ಬಡಿಗಣ್ಣವರ, ರೇಣಕ್ಕ ಕರಿಗೌಡ್ರ, ಮಂಗಳ ಕಾಮಣ್ಣವರ, ಗಂಗಮ್ಮ ಹೂಗಾರ, ಸಹನಾ ಹಲತ್ತಗಿ, ಸೋಮಶೇಖರ ಪುರಾಣಿಕ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Share This Article
Leave a comment

Leave a Reply

Your email address will not be published. Required fields are marked *