ಲಿಂಗಾಯತರಿಗೆ ವರ್ಷದ ಪ್ರತಿ ತಿಂಗಳೂ ಶ್ರಾವಣ ಮಾಸವೆ: ಡಾ. ಜೆ.ಎಸ್.ಪಾಟೀಲ

ಬಸವ ಮೀಡಿಯಾ
ಬಸವ ಮೀಡಿಯಾ

ವಿಜಯಪುರ

ಲಿಂಗಾಯತರು ಇಷ್ಟಲಿಂಗ ಅನುಸಂಧಾನವನ್ನು ಬಿಟ್ಟು ಅನ್ಯದೇವರಿಗೆ ನಡೆದುಕೊಳ್ಳಬಾರದು. ಮಂದಿರ ಸಂಸ್ಕೃತಿಯನ್ನು ನಿರಾಕರಿಸಿಯೆ ಲಿಂಗಾಯತ ಧರ್ಮ ಹುಟ್ಟಿದೆ. ಆ ಕಾರಣದಿಂದ ಲಿಂಗಾಯತರು ಪರಿಶುದ್ಧ ಲಿಂಗಾಯತರಾಗಿ ಬದುಕಬೇಕು ಎಂದು ಶರಣತತ್ವ ಚಿಂತಕ ಡಾ. ಜೆ.ಎಸ್.ಪಾಟೀಲ ಕರೆಕೊಟ್ಟರು.

ಅವರು ವಿಜಯಪುರ ಜಿಲ್ಲೆಯ ಕಗ್ಗೋಡ್ ಗ್ರಾಮದ ರಾಷ್ಟ್ರೀಯ ಬಸವದಳದ ಮುಖಂಡ ಬಸವರಾಜ ಕೊಂಡಗೂಳಿಯವರ ಮನೆಯಲ್ಲಿ ನಡೆದ ಶ್ರಾವಣ ಮಾಸದ ಬಸವಜ್ಯೋತಿ ಕಾರ್ಯಕ್ರಮದಲ್ಲಿ ಅನುಭಾವದ ನುಡಿಗಳನ್ನಾಡುತ್ತಿದ್ದರು.

ಲಿಂಗಾಯತರಿಗೆ ವರ್ಷದ ಪ್ರತಿ ತಿಂಗಳೂ ಶ್ರಾವಣಮಾಸವೆ ಆಗಿದೆ. ಸಮಾಜದಲ್ಲಿನ ಮೌಢ್ಯಗಳು ಲಿಂಗಾಯತರಲ್ಲಿ ಮನೆಮಾಡುತ್ತಿದ್ದು, ಅವರು ಲಿಂಗಾಯತ ಆಚರಣೆಗಳನ್ನು ತೊರೆದು ವೈದಿಕ ಆಚರಣೆಗಳತ್ತ ಮುಖಮಾಡಿ ಲಿಂಗಾಯತ ಧರ್ಮವನ್ನು ಹಾಳುಗೆಡವುತ್ತಿದ್ದಾರೆಂದರು.

ಕಾರ್ಯಕ್ರಮದಲ್ಲಿ ಮೊದಲಿಗೆ ಪ್ರಾರ್ಥನೆ ಹಾಗು ಧರ್ಮಗುರು ಬಸವಣ್ಣನವರ ಪೂಜೆಯನ್ನು ನೆರವೇರಿಸಲಾಯಿತು.

ಹಿರಿಯ ಶರಣಾನುಯಾಯಿ ಶರಣಬಸಪ್ಪ ಆವಜಿಯವರು, ಕಗ್ಗೋಡು ಹಾಗು ಸುತ್ತಮುತ್ತಲಿ ಅನೇಕ ಗ್ರಾಮದ ಬಸವಭಕ್ತರು, ಕೊಂಡಗೂಳಿ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Share This Article
Leave a comment

Leave a Reply

Your email address will not be published. Required fields are marked *