ಮಹಿಳೆಯರು ಮನಸ್ಸು ಮಾಡಿದರೆ ಬಸವ ತತ್ವ ಉಳಿಯುತ್ತದೆ: ವಿಶ್ವರಾಧ್ಯ ಸತ್ಯಂಪೇಟೆ

ಬಸವ ಮೀಡಿಯಾ
ಬಸವ ಮೀಡಿಯಾ

ಸಿಂಧನೂರು

ಸಿಂಧನೂರಿನ ಬಸವಕೇಂದ್ರ ಹಾಗೂ ಬಸವಪರ ಸಂಘಟನೆಗಳ ಸಹಯೋಗದಲ್ಲಿ “ಸಂಸ್ಕಾರದ ಬದುಕಿಗಾಗಿ ವಚನ ಶ್ರವಣ” ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮ ನೀಲಾಂಬಿಕಾ ಪ್ರಸಾದ ನಿಲಯದಲ್ಲಿ ಭಾನುವಾರ ಜರುಗಿತು.

ಅಧ್ಯಕ್ಷತೆಯನ್ನು ಕರೇಗೌಡ್ರು ಕುರುಕುಂದ ವಹಿಸಿದ್ದರು. ವೇದಿಕೆಯಲ್ಲಿ ಶರಣಪ್ಪ ಸಾಹುಕಾರ, ಶರಣಪ್ಪಣ್ಣ ತೆಂಗಿನಕಾಯಿ, ಶಿವಣ್ಣ ಇಜೇರಿ ಶಹಾಪುರ, ಸುಮಂಗಲಕ್ಕ ಚಿಂಚರಕಿ ಉಪಸ್ಥಿತರಿದ್ದರು. ಬಸವಲಿಂಗಪ್ಪ ಬಾದರ್ಲಿ ಸ್ವಾಗತಿಸಿದರು. ನಾರಾಯಣಪ್ಪ ಮಾಡಸಿರವಾರ ಮತ್ತು ಸಂಗಡಿಗರು ಪ್ರಾರ್ಥನೆ ನೆಡೆಸಿಕೊಟ್ಟರು.

ಪ್ರಾಸ್ತಾವಿಕವಾಗಿ ವೀರಭದ್ರಪ್ಪಣ್ಣ ಕುರುಕುಂದ ಮಾತನಾಡುತ್ತ ನಾವೆಲ್ಲ ಬಸವ ತಂದೆಯ ಮಕ್ಕಳು. ಅವರ ವಚನಗಳೇ ಸಂಸ್ಕಾರದ ಆಗರ. ನಮ್ಮ ಮಾತು, ನಡೆ, ವರ್ತನೆ ಹೇಗಿರಬೇಕು ಎಂಬುದನ್ನು ತಿಳಿಯುವುದು ಸಂಸ್ಕಾರದ ಒಂದು ಭಾಗ. ಸಂಸ್ಕಾರಕ್ಕೆ ಶಿಕ್ಷಣ ಕಡ್ಡಾಯವಲ್ಲ. ನಮ್ಮ ಪುರಾತನರು ನಿರಕ್ಷರಿಗಳಾಗಿದ್ದರೂ ಸಂಸ್ಕಾರಿಗಳಾಗಿದ್ದರು. ಲಿಂಗವಶದಿಂದ ಬಂದ ನಡೆಗಳು ಮತ್ತು ನುಡಿಗಳು ಸಂಸ್ಕಾರಯುತವಾಗಿರುತ್ತವೆ ಎಂದು ನುಡಿದರು.

ಅನುಭಾವಿಗಳಾಗಿ ವಿಶ್ವರಾಧ್ಯ ಸತ್ಯಂಪೇಟೆಯವರು ಬಸವಣ್ಣನವರು ಕಟ್ಟಬಯಸಿದ ಸಮಾಜ ವಿಷಯವಾಗಿ ಮಾತನಾಡುತ್ತ. ಮಹಿಳೆಯರು ಮನಸ್ಸು ಮಾಡಿದರೆ ತತ್ವ ಉಳಿಯುತ್ತದೆ. ಬಸವಾದಿ ಶರಣರ ವಚನಗಳು ಅದರಕ್ಕೆ ಕಹಿ ಉದರಕ್ಕೆ ಸಿಹಿ ಎನ್ನುವಂತೆ ಇವೆ. ಕೆಲವರು ವಚನ ದರ್ಶನ ಎಂಬ ಹೆಸರಿನಲ್ಲಿ ಅದರಕ್ಕೆ ಸಿಹಿ ಕೊಟ್ಟು ಉದರಕ್ಕೆ ಕಹಿ ಮಾಡುತ್ತಿದ್ದಾರೆ. ನಮಗೆ ಗೊತ್ತಿಲ್ಲದಂತೆ ವಿಷ ಬೀಜ ಬಿಟ್ಟುತ್ತಿದ್ದಾರೆ ಎಚ್ಚರದಿಂದ ಇರಬೇಕಾಗಿದೆ.

ಬಸವಣ್ಣನವರ ಕನಸಿನ ಸಮಾಜ ಸಾಕಾರಗೊಳ್ಳಬೇಕಾಗಿದೆ. ಇನ್ನು ಸಾಕಾರಗೊಂಡಿಲ್ಲ ಒಂಬತ್ತು ನೂರು ವರ್ಷ ಕಳೆದು ಹೋಯಿತು. ಜೋತಿಷ್ಯ ಅವಶ್ಯಕತೆ ಇಲ್ಲ ವೇದ ಅವಶ್ಯಕತೆ ಇಲ್ಲ. ಧರ್ಮವೆಂಬುದು ವ್ಯಾಪಾರವಾಗಿದೆ. ಆಚರಣೆ ಮತ್ತು ಸಂಪ್ರದಾಯದ ನೆಪದಲ್ಲಿ ಲೂಟಿ ನಡೆಯುತ್ತಿದೆ. ವಚನ ಸಾಹಿತ್ಯ ಹೃದಯ ಶ್ರೀಮಂತಿಕೆಯನ್ನು ಹೆಚ್ಚಿಸುತ್ತದೆ. ನಮ್ಮ ಬುದ್ದಿಯನ್ನು ಇನ್ನೊಬ್ಬರ ಕೈಗೆ ಕೊಟ್ಟಿದ್ದೇವೆ. ಪ್ರೀತಿ ಅಂತಕರಣ ವನ್ನು ಬಿಟ್ಟು ಭಯಗೊಂಡು ದೇವರಲ್ಲಿ ಮೊರೆ ಹೋಗುವುದು ದುರದುಸ್ಟಕರ. ದೇಹವೇ ದೇವಾಲಯ. ನಮ್ಮ ಅರಿವೇ ಗುರು ಮತ್ತು ದೇವರು. ದೇವರು ಕೆಟ್ಟದ್ದನ್ನು ಮಾಡುವುದಿಲ್ಲ ಕೆಟ್ಟದ್ದನ್ನು ಮಾಡುವವ ದೇವರೇ ಅಲ್ಲ. ಇಷ್ಟ ಲಿಂಗ ಕಷ್ಟ ಲಿಂಗವಾಗಬಾರದು. ನಮ್ಮಲ್ಲಿ ದೇವರಿದ್ದಾನೆ ತೋರಬಲ್ಲ ಗುರು ಸಿಗುತ್ತಿಲ್ಲ.ಕರಗುವ, ಊಳುವ, ದೇವರು ದೇವರೇ ಅಲ್ಲ.

ಬಸವಣ್ಣ ಕಟ್ಟ ಬಯಸಿದ ಸಮಾಜದಲ್ಲಿ ಮಹಿಳಾ ಪ್ರಾತಿನಿಧ್ಯವಿದೆ. ಕೆಲವು ದೇವರು ಮಹಿಳೆಯರ ಕೈಯಲ್ಲಿನ ಆಹಾರ ಸೇವಿಸಲ್ಲ. ಬಸವಣ್ಣ ಮಹಿಳೆ ಸಾಕ್ಷಾತ್ ದೇವರೆಂದ. ಎಂದು ನುಡಿದರು.

Share This Article
Leave a comment

Leave a Reply

Your email address will not be published. Required fields are marked *