ಅಲ್ಲಮಪ್ರಭು ದೇವಸ್ಥಾನ ಲೋಕಾರ್ಪಣೆಗೆ 25,000 ರೊಟ್ಟಿ ಅರ್ಪಿಸಿದ ಭಕ್ತರು

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

ತೇರದಾಳ

ಅಲ್ಲಮಪ್ರಭು ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮದ ಅಂಗವಾಗಿ ಇಲ್ಲಿನ ಕಲ್ಲಟ್ಟಿ ಭಾಗದ ಮಹಿಳೆಯರು 25 ಸಾವಿರ ರೊಟ್ಟಿಗಳನ್ನು ಅರ್ಪಿಸಿದ್ದಾರೆ. ನೂರಾರು ಮಹಿಳೆಯರು ರೊಟ್ಟಿ ತಯಾರಿಸಿ, ತಮ್ಮ ತಲೆ ಮೇಲೆ ಹೊತ್ತುಕೊಂಡು ಬಂದು ದೇವಸ್ಥಾನದ ಅನ್ನಪ್ರಸಾದ ವಿತರಣಾ ಸಮಿತಿಗೆ ಸಮರ್ಪಿಸಿದರು.

ತಾವು ತಂದ ರೊಟ್ಟಿಯಲ್ಲಿ ಮಹಿಳೆಯರು “ಶ್ರೀ ಪ್ರಭು ರೊಟ್ಟಿ” ಎಂದು ಬರೆದು ತೋರಿಸಿ ಎಲ್ಲರ ಗಮನ ಸೆಳೆದರು.

ಒಂದು ತಿಂಗಳು ಪರ್ಯಂತ ಅನ್ನಪ್ರಸಾದ ವ್ಯವಸ್ಥೆ ಆರಂಭವಾಗಿದ್ದು, ಭಕ್ತರು ಅದರಲ್ಲೂ ತಮ್ಮ ಪಾಲು ನೀಡಲು ಅಣಿಯಾಗಿದ್ದಾರೆ. ದೇವಸ್ಥಾನ ಲೋಕಾರ್ಪಣೆಯ ಈ ಕಾರ್ಯಕ್ರಮಕ್ಕೆ ಮುಂದೆ ಬಂದು ದೇಣಿಗೆ ನೀಡುತ್ತಿದ್ದಾರೆ.

ತೇರದಾಳದ ಎಲ್ಲ ಸಮುದಾಯಗಳ ಭಕ್ತರು ತರಹೆವಾರಿ ಅಡುಗೆ ತಯಾರಿಸಿ ಅನ್ನಪ್ರಸಾದ ಉಣಬಡಿಸಲು ಅಣಿಯಾಗಿದ್ದಾರೆ.

ಒಂದು ತಿಂಗಳು ಕಾಲ ಬಸವ ಪುರಾಣ ನಡೆಸಿಕೊಡುತ್ತಿರುವ ಶೇಗುಣಿಸಿ ವಿರಕ್ತಮಠದ ಮಹಂತಪ್ರಭು ಸ್ವಾಮೀಜಿ, ತೇರದಾಳ ಹಿರೇಮಠದ ಗಂಗಾಧರ ದೇವರು ‘ಪ್ರಭು ಪರಂ ಜ್ಯೋತಿ’ಯೊಂದಿಗೆ ಪಟ್ಟಣದ ಪ್ರಮುಖ ಬೀದಿಗಳ ಮನೆ ಮನೆಗಳಿಗೆ ಜೋಳಿಗೆ ಹಿಡಿದು “ದುಶ್ಚಟಗಳ ಭಿಕ್ಷೆ ಸದ್ಗುಣಗಳ ದೀಕ್ಷೆ” ನೀಡುತ್ತ ಸಾಗಿದ್ದಾರೆ.

ಹಂದಿಗುಂದದ ಶಿವಾನಂದ ಸ್ವಾಮಿಗಳ ಮಾರ್ಗದರ್ಶನದಲ್ಲಿ ಚಿಮ್ಮಡ ವಿರಕ್ತಮಠದ ಪ್ರಭು ಶ್ರೀ, ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ್ಯ, ರಬಕವಿ ಬ್ರಹ್ಮಾನಂದ ಆಶ್ರಮದ ಗುರುಸಿದ್ದೇಶ್ವರ ಶ್ರೀ ಹಾಗೂ ಹಳಿಂಗಳಿ ಮಠದ ಶಿವಾನಂದ ಶ್ರೀ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

Share This Article
2 Comments
  • ನಿರಂಜನ ಜಗದ್ಗುರು ಅಲ್ಲಮ ಪ್ರಭುದೇವರ ಬಗ್ಗೆ ನಮ್ಮ ಗ್ರಾಮೀಣರಲ್ಲಿ ಇಷ್ಟೊಂದು ಭಕ್ತಿ ಶ್ರದ್ಧೆ ಇರುವುದನ್ನು ಕಂಡು ಹೃದಯದುಂಬಿ ಬಂದಿತು.

  • ನೀಲಕಂಠ ಗೌಡ ಪಾಟೀಲ ,ಗಡ್ಡಿಕರವಿನಕೊಪ್ಪ, ಬೈಲಹೊಂಗಲ ತಾಲೂಕ್. says:

    ಸಹಹ್ರುದಯಿಗಲಿಗೆ ಭಕ್ತಿಯ ಶರಣು ಶರಣಾರ್ಥಿಗಳು.
    ಓಂ ಗುರು ಬಸವ ಜಯ ಬಸವ ಶಿವ ಬಸವ.
    ಬಸವಣ್ಣ ನೇ ತಂದೆ ಬಸವಣ್ಣ ನೇ ತಾಯಿ
    ಬಸವಣ್ಣ ನೇ ಪರಮ ಬಂದು ಎನಗೆ
    ವಸುದೀಶ್ ಕಪಿಲ ಶಿದ್ದ ಮಲ್ಲಿಕಾರ್ಜುನ
    ನಿಮ್ಮ ಹೆಸರಿತ್ತ ಗುರು ಬಸವಣ್ಣ ನಯ್ಯ
    ಅವರ ಶ್ರೀ ಪಾದಕ್ಕೆ ನಮೋ ನಮೋ
    ಎನುತಿರ್ದೆನು…..
    ಓಂ ಶ್ರೀ ಗುರು ಬಸವ ಲಿಂಗಾಯ ನಮಃ 🙏
    ಜೈ ಗುರು ಬಸವ ಜೈ ಲಿಂಗಾಯತ.

Leave a Reply

Your email address will not be published. Required fields are marked *