ಗದಗ
ಪಂಚಮಸಾಲಿ ಪೀಠಗಳ ಮೂಲ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳನ್ನು ಕೈಬಿಡುವ ಸಮಯ ಬರಬಹುದು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಬಾಗಲಕೋಟೆ ಜಿಲ್ಲಾಧ್ಯಕ್ಷ ಆಶೋಕ ಬರಗುಂಡಿ ಅವರು ಎಚ್ಚರಿಕೆ ನೀಡಿದ್ದಾರೆ.
ಬಸವ ಮೀಡಿಯಾದೊಂದಿಗೆ ಸೋಮವಾರ ಮಾತನಾಡುತ್ತ ವಚನಾನಂದ ಶ್ರೀಗಳು ಪಂಚಮಸಾಲಿ ಪೀಠಗಳ ಮೂಲ ಆಶಯ, ಹುಟ್ಟಿದ ಸಂಧರ್ಭ ಮರೆತು ಮಾತನಾಡುತ್ತಿದ್ದಾರೆ ಎಂದು ಆಪಾದಿಸಿದರು.
ಲಿಂಗಾಯತರ ಒಳಗೆ ವೈದಿಕತೆ ಸುಳಿದು ಜಂಗಮ ತತ್ವ ಜಾತಿಯಾಗಿ ಬದಲಾಯಿತು. ಇದಕ್ಕೆ ಪ್ರತಿಯಾಗಿ ಎಲ್ಲರೂ ಜಂಗಮರಾಗಬಹುದು ಎಂದು ತೋರಿಸಲು ಕೂಡಲ ಸಂಗಮ ಮತ್ತು ಹರಿಹರದಲ್ಲಿ ಪಂಚಮಸಾಲಿ ಪೀಠ ಸೃಷ್ಟಿಯಾಯಿತು.
ಪಂಚಮಸಾಲಿ ಮೂಲದವರಿಗೆ ಜಂಗಮ ದೀಕ್ಷೆ ಕೊಟ್ಟು ಸ್ವಾಮಿಗಳನ್ನಾಗಿ ಮಾಡಿ ಗೌರವದಿಂದ ನೋಡುವ, ವ್ಯಕ್ತಿ ಘನತೆಯನ್ನು ಎತ್ತಿ ಹಿಡಿಯುವ ಉದಾತ ಉದ್ದೇಶಗಳಿಂದ ಹುಟ್ಟಿದ ಮಹತ್ವದ ಪೀಠಗಳಿವು, ಎಂದು ಹೇಳಿದರು.
ಆದರೆ ಇದಕ್ಕೆ ವಿರುದ್ಧವಾಗಿ ವಚನಾನಂದ ಶ್ರೀಗಳು ಮತ್ತೆ ಹಿಂದೂ ಧರ್ಮದ ಶ್ರೇಣೀಕೃತ ಸಮಾಜದ ಬೆನ್ನತ್ತಿ ಮತ್ತೆ ಶೂದ್ರರಾಗಲು ಪ್ರಯತ್ನಿಸುತ್ತಿದ್ದಾರೆ. ಇದೇ ರೀತಿ ಪೀಠಗಳ ಮೂಲ ಆಶಯಗಳಿಗೆ ಅಪಚಾರ, ಸಮಾಜಕ್ಕೆ ಅಪಮಾನ ಮಾಡುವುದು ಮುಂದುವರೆಸಿದರೆ ಮುಂದೊಂದು ದಿನ ಸಮಾಜ ಅವರನ್ನು ತಿರಸ್ಕಾರ ಮಾಡುವ ಸಮಯ ಬರಬಹುದು, ಎಂದು ಎಚ್ಚರಿಸಿದರು.
ವಚನ ದರ್ಶನ ಪುಸ್ತಕದ ಬಿಡುಗಡೆಯ ಬೆಂಬಲಕ್ಕೆ ನಿಂತು ಲಿಂಗಾಯತರೆಲ್ಲಾ ಹಿಂದೂಗಳು ಎಂದು ಪ್ರತಿಪಾದಿಸುತ್ತಿರುವ ವಚನಾನಂದ ಶ್ರೀಗಳ ವಿರುದ್ಧ ಲಿಂಗಾಯತ ಸಮಾಜದಿಂದ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗುತ್ತಿದೆ.
👍👌🙏🙏🪔🌹 yes ಸರಿ ಇದೆ
ನೀವು ಹೇಳಿದ ವಿಚಾರ ತುಂಬಾ ನಿಕಟವಾಗಿದೆ. ಯಾವ ಧರ್ಮಗಳಲ್ಲೂ ಲಿಂಗಾಯತ ಧರ್ಮದಲ್ಲಿ ಗುರುಆದಂತೆ ಸುಲಭವಾಗಿ ಆಗಲು ಸಾಧ್ಯವಿಲ್ಲ. ಶರಣರ ವಿಚಾರಧಾರೆಯಲ್ಲಿ ಸರ್ವರೂ ಸಮಾನರು. ಹಾಗಂತ ಎಲ್ಲರೂ ಗುರುಸ್ಥಾನ ಅಲಂಕರಿಸಲಾಗದು. ಕೆಲವು ಅರ್ಹತೆಯನ್ನು ಗಮನಿಸಿ ಸಮಾಜ ಆ ಜವಾಬ್ದಾರಿಯನ್ನು ನೀಡುತ್ತದೆ. ಈ ವಿಷಯದಲ್ಲಿ ವಚನಾನಂದರು ಅಪ್ರಭುಧ್ದತೆಯನ್ನು ಮೆರೆದಿರುವದು ಎಲ್ಲರಿಗೂ ತಿಳಿದ ವಿಚಾರ. ಕೆಲವರು ನಮಗೇಕೆ ಆ ಗೊಡವೆ ಎಂದು ಸುಮ್ಮನಿದ್ದಾರೆ, ಇನ್ನು ಕೆಲವರು ಆಸಾಮಿ ನಾವು ಹೇಳಿದಂತೆ ಕುಣಿಯುತ್ತಿದೆ ಎಂದು ಅವರಿಂದ ಅಧಿಕಾರದ ದುರುಪಯೋಗ ಮಾಡಿಸುತ್ತಿದ್ದಾರೆ. ಪಂಚಮಸಾಲಿಗಳು ಇನ್ನಾದರು ಸ್ವಧರ್ಮ ಪರಿಪಾಲನೆಯನ್ನು ಬಸವಾದಿ ಪ್ರಮಥರು ಹಾಕಿಕೊಟ್ಟ ಮಾರ್ಗದಲ್ಲಿ ಮಾಡಲಿ. ನಾವೇನೂ ಕಡಿಮೆಯಿಲ್ಲ ಎಂದು ಸಂಖ್ಯಾಬಲ ತೋರಿಸಹೊರಟರೆ ಸ್ವಾಮಿಗಳಾದವರು ಅಸ್ತಿತ್ವ ಕಳೆದುಕೊಂಡು ಆ ಸಮಾಜಕ್ಕೆ ಹಿನ್ನಡೆ ಎಸಗಿ, ಚೇತರಿಕೆಗೆ ತುಂಬಾ ಸಮಯ, ಸಂಯಮ ನೀಡಬೇಕಾದೀತು..