ಗಜೇಂದ್ರಗಡ
ಪಟ್ಟಣದ ಹೊರವಲಯದ ಮೂರು ಕಡೆಯ ಗುಡಿಸಲುವಾಸಿ ಬಡಮಕ್ಕಳಿಗೆ ಹಾಲು ಕುಡಿಸಿ, ಬಿಸ್ಕತ್ತು ತಿನಿಸಿ ‘ಹಾಲು ಕುಡಿಸುವ ಹಬ್ಬ ಬಸವ ಪಂಚಮಿ’ಯನ್ನು ಆಚರಿಸಲಾಯಿತು.
ಜಾಗತಿಕ ಲಿಂಗಾಯತ ಮಹಾಸಭಾ, ಶರಣ ಸಾಹಿತ್ಯ ಪರಿಷತ್ತು ತಾಲೂಕು ಘಟಕಗಳು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದವು.

ಈ ಸಂದರ್ಭದಲ್ಲಿ ಶರಣರಾದ ಕಳಕಯ್ಯ ಸಾಲಿಮಠ, ಬಸವರಾಜ ಅಂಗಡಿ ಹಾಗೂ ಬಸವರಾಜ ಕೊಟಗಿ ಮಾತನಾಡಿ, ಮೌಢ್ಯ ಕಂದಾಚಾರಗಳಿಂದ ಪೌಷ್ಟಿಕ ಆಹಾರ ಹಾಲನ್ನು ಹಾಳು ಮಾಡುವುದನ್ನು ಬಿಟ್ಟು, ಅವಶ್ಯಕತೆ ಇರುವ ಮಕ್ಕಳಿಗೆ ಕುಡಿಸಿ ಬಸವ ಪಂಚಮಿ ಆಚರಿಸುತ್ತಿದ್ದೇವೆ. ಬಸವಾದಿ ಶರಣರ ಆಶಯದಂತೆ ಅವರ ಆದರ್ಶದಂತೆ ನಡೆಯೋಣ ಎಂದರು.

ಸಂಘಟನೆಯ ಮುಖಂಡರಾದ ಗುರುಲಿಂಗಯ್ಯ ಓದಸುಮಠ, ಅಂದಪ್ಪ ರೋಣದ, ಮಹಾಂತೇಶ ಕಡಗದ, ಸಾಗರ ವಾಲಿ, ಶರಣಪ್ಪ ಹಡಪದ, ಶರಣು ಪೂಜಾರ, ಬಾಲು ರಾಠೋಡ ಗುಡಿಸಲುಗಳ ತಾಯಿಂದಿರು, ಮಕ್ಕಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.