ವಿಜಯಪುರ:
ಬಡ ಪ್ರತಿಭಾವಂತ ವಿದ್ಯಾರ್ಥಿನೊಬ್ಬನ ಎಂಜಿನಿಯರಿಂಗ್ ಶಿಕ್ಷಣಕ್ಕೆ ಬಿ.ಎಲ್.ಡಿ.ಇ ಸಂಸ್ಥೆ ಆರ್ಥಿಕ ನೆರವು ನೀಡಿದೆ. ಮೊದಲ ವರ್ಷದ ಮೊತ್ತ ರೂ.1.20 ಲಕ್ಷದ ಚೆಕ್ ವಿದ್ಯಾರ್ಥಿಗೆ ಸಂಸ್ಥೆಯ ಅಧ್ಯಕ್ಷರು, ಸಚಿವರಾದ ಎಂ.ಬಿ.ಪಾಟೀಲ ವಿತರಿಸಿದರು.
ಡಿಪ್ಲೊಮಾ ವಿಭಾಗದಿಂದ ನಡೆದ ಸಿಇಟಿ (ಲ್ಯಾಟರಲ್ ಎಂಟ್ರಿ) ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರಾಂಕ್ ಪಡೆದ ವಿಜಯಪುರ ನಗರದ ಕಿರಣ ಶಂಕರ ಚವ್ಹಾಣ ಫಲಾನುಭವಿ ವಿದ್ಯಾರ್ಥಿಯಾಗಿದ್ದಾರೆ.
ಬೆಂಗಳೂರು ಆರ್. ವಿ.ಕಾಲೇಜಿನಲ್ಲಿ ಸರಕಾರಿ ಕೋಟಾದಡಿ ವಿದ್ಯಾರ್ಥಿ ಸೀಟು ಪಡೆದಿದ್ದರೂ, ಬಡತನದ ಕಾರಣ ಯುವಕನ ಎಂಜಿನಿಯರಿಂಗ್ ಸೀಟು ಕೈ ತಪ್ಪುವ ಸಂಗತಿ ನನ್ನ ಗಮನಕ್ಕೆ ಬಂತು. ಎಂಜಿನಿಯರ್ ಆಗುವ ಕಿರಣ ಶಂಕರ ಚವ್ಹಾಣ ಕನಸಿಗೆ ಬಡತನ ಅಡ್ಡಿಯಾಗದಿರಲಿ. ತನ್ನ ಶಿಕ್ಷಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಬಸವನಾಡಿಗೆ ಕೀರ್ತಿ ತರುವ ಕೆಲಸ ಮಾಡಲೆಂದು ಎಂ.ಬಿ.ಪಾಟೀಲ ಅವರು ವಿದ್ಯಾರ್ಥಿಗೆ ಶುಭ ಹಾರೈಸಿದ್ದಾರೆ.