ಇಂದು ಲಭ್ಯವಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಬಸವ ತತ್ವದ ಕಾರ್ಯಕ್ರಮಗಳ ವಿವರ ಮತ್ತು ಫೋಟೋಗಳು. ನಿಮ್ಮ ಕಾರ್ಯಕ್ರಮ ವಿವರ, ಫೋಟೋಗಳನ್ನು basavamedia1@gmail.com ವಿಳಾಸಕ್ಕೆ ಇಮೇಲ್ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮ, ನಿಜಗುಣ ಶಿವಯೋಗಿಗಳ ಮಠದಲ್ಲಿ, ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕ ಘಟಕ, ಬೆಳಗಾವಿ ಹಾಗೂ ಗುರುಬಸವ ಬಳಗ ಹಿರೇಬಾಗೇವಾಡಿ ಇವರ ಸಂಯುಕ್ತಾಶ್ರಯದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆಯನ್ನು ಸಂಚಾರಿ ಗುರುಬಸವ ಬಳಗದ ಸಂಚಾಲಕರಾದ ಮಹಾಂತೇಶ ತೋರಣಗಟ್ಟಿ ನೇತೃತ್ವದಲ್ಲಿ ನೆರವೇರಿಸಲಾಯಿತು. ಅಧ್ಯಕ್ಷ ಬಿ.ಜಿ.ವಾಲಿ ಇಟಗಿ, ಕಾರ್ಯದರ್ಶಿ ಆನಂದ ಯಲ್ಲಪ್ಪ ಕೊಂಡಗುರಿ, ಬಾಬುಗೌಡ ಪಾಟೀಲ, ಎನ್.ಪಿ.ಉಪ್ಪಿನ, ಪ್ರವೀಣ ರೊಟ್ಟಿ, ಸಿ.ಎಂ.ಹುಬ್ಬಳ್ಳಿ, ರಮೇಶ ತಿಗಡಿ ಹಾಗೂ 50ಕ್ಕೂ ಅಧಿಕ ಜನ ಸಾಮೂಹಿಕ ಇಷ್ಟಲಿಂಗ ಪೂಜೆಯಲ್ಲಿ ಪಾಲ್ಗೊಂಡಿದ್ದರು. (ಮಾಹಿತಿ/ಚಿತ್ರ: ಆನಂದ ವೈ.ಕೆ.)

ಕೊಪ್ಪಳ "ಸಂಚಾರಿ ಅರಿವಿನ ಮನೆ" ಅರಿವು ಆಚಾರ ಅನುಭಾವ ಗೋಷ್ಠಿ ಶರಣೆ ಸರೋಜಿನಿ ಸಂಗಮೇಶ ಕಲಹಾಳ ಇವರ ಮನೆಯಲ್ಲಿ ಇಷ್ಟಲಿಂಗ ಶಿವಯೋಗದೊಂದಿಗೆ ನಡೆಯಿತು. ಶರಣ ದೇವಪ್ಪ ಮುದೇನೂರ, ಹನುಮೇಶ ಕಲ್ಮಂಗಿ,ಶೇಖರ ಇಂಗಳದಾಳ, ಅರ್ಚನಾ ಸಸಿಮಠ, ಶಿವಸಂಗಪ್ಪ ಹಾಗೂ ಬಸವಪರ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು. (ಮಾಹಿತಿ/ಚಿತ್ರ: ಶೇಖರ ಇಂಗಳದಾಳ)

ಬೀದರ: ಸ್ವಾತಂತ್ರ್ಯೋತ್ಸವ ಹಾಗೂ ಸಂಗೊಳ್ಳಿ ರಾಯಣ್ಣ ಜನ್ಮದಿನೋತ್ಸವ ಪ್ರಯುಕ್ತ ಬೀದರ ನಗರದ ಹಣ್ಮು ಪಾಜಿ ಗೆಳೆಯರ ಬಳಗದ ವತಿಯಿಂದ, ಬ್ರಿಮ್ಸ್ ಆಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಲಿಂಗಾಯತ ಮಹಾಮಠದ ಪೂಜ್ಯ ಪ್ರಭುದೇವ ಸ್ವಾಮೀಜಿ ರಕ್ತದಾನ ಮಾಡಿದರು. ರಕ್ತದಾನ ಮಹಾದಾನವೆಂದು ತಿಳಿದು ಇಲ್ಲಿಯವರೆಗೆ ೧೦ ಬಾರಿ ರಕ್ತದಾನ ಮಾಡಿದ ಸಂತೋಷ ನನ್ನದಾಗಿದೆಯೆಂದು ಸ್ವಾಮೀಜಿ ತಿಳಿಸಿದರು.
ಗದಗ-ಬೆಟಗೇರಿ ಬಸವದಳ, ಬಸವ ಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ ಸಂಯುಕ್ತಾಶ್ರಯದಲ್ಲಿ, ವಚನ ಶ್ರಾವಣ ಕಾರ್ಯಕ್ರಮವು ಬಸವೇಶ್ವರ ನಗರದ ನಂದಿಬಸಪ್ಪ ಎಚ್ಚಲಗಾರ ಅವರ ಮನೆಯಲ್ಲಿ ಜರುಗಿತು. ವಚನ ಚಿಂತನವನ್ನು ಸನ್ನಿಧಿ ಲಿಂಗದಾಳ, ಚನ್ನಬಸಣ್ಣ ಅಂಗಡಿ, ಗೌರಕ್ಕ ಬಡಿಗಣ್ಣವರ ಮಾಡಿದರು. (ಮಾಹಿತಿ/ಚಿತ್ರ: ಶರಣು ಎಸ್. ಅಂಗಡಿ)

ಬಡ ಪ್ರತಿಭಾವಂತ ವಿದ್ಯಾರ್ಥಿನೊಬ್ಬನ ಎಂಜಿನಿಯರಿಂಗ್ ಶಿಕ್ಷಣಕ್ಕೆ ಬಿ.ಎಲ್.ಡಿ.ಇ ಸಂಸ್ಥೆ ಆರ್ಥಿಕ ನೆರವು ನೀಡಿದೆ. ಮೊದಲ ವರ್ಷದ ಮೊತ್ತ ರೂ.1.20 ಲಕ್ಷದ ಚೆಕ್ ವಿದ್ಯಾರ್ಥಿಗೆ ಸಂಸ್ಥೆಯ ಅಧ್ಯಕ್ಷರು, ಸಚಿವರಾದ ಎಂ.ಬಿ.ಪಾಟೀಲ ವಿತರಿಸಿದರು. ಡಿಪ್ಲೊಮಾ ವಿಭಾಗದಿಂದ ನಡೆದ ಸಿಇಟಿ (ಲ್ಯಾಟರಲ್ ಎಂಟ್ರಿ) ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರಾಂಕ್ ಪಡೆದ ವಿಜಯಪುರ ನಗರದ ಕಿರಣ ಶಂಕರ ಚವ್ಹಾಣ ಫಲಾನುಭವಿ ವಿದ್ಯಾರ್ಥಿಯಾಗಿದ್ದಾರೆ.
ರಾಷ್ಟ್ರೀಯ ಬಸವದಳ ನೈತೃತ್ವದಲ್ಲಿ ಆಗಸ್ಟ್ ೯,೨೦೨೨ರಂದು ಆರಂಭಗೊಂಡ ಸುಪ್ರಭಾತ ಸಮಯದ ಒಂದು ದಿನವೂ ತಪ್ಪದ ನಿರಂತರ ಗೂಗಲ್ ಮೀಟ್ ಬಸವ ಚಿಂತನ ಪ್ರಭೆ ಕಾರ್ಯಕ್ರಮಕ್ಕೆ ಮೂರು ವರ್ಷ ತುಂಬಿದೆ. ರಾಜ್ಯದ ವಿವಿಧ ಕಡೆಗಳಿಂದ ಬಂದಿರುವ ಶರಣ, ಶರಣೆಯರು ಚಿಂತನ ಪ್ರಭೆಯ ಮೂರನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲಾಯಿತು.
ರಾಷ್ಟ್ರೀಯ ಬಸವದಳ ನೈತೃತ್ವದಲ್ಲಿ ಆಗಸ್ಟ್ ೯,೨೦೨೨ರಂದು ಆರಂಭಗೊಂಡ ಸುಪ್ರಭಾತ ಸಮಯದ ಒಂದು ದಿನವೂ ತಪ್ಪದ ನಿರಂತರ ಗೂಗಲ್ ಮೀಟ್ ಬಸವ ಚಿಂತನ ಪ್ರಭೆ ಕಾರ್ಯಕ್ರಮಕ್ಕೆ ಮೂರು ವರ್ಷ ತುಂಬಿದೆ. ರಾಜ್ಯದ ವಿವಿಧ ಕಡೆಗಳಿಂದ ಬಂದಿರುವ ಶರಣ, ಶರಣೆಯರು ಚಿಂತನ ಪ್ರಭೆಯ ಮೂರನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲಾಯಿತು.
ಬೆಳಗಾವಿ ರಾಷ್ಟ್ರೀಯ ಬಸವದಳ ಮತ್ತು ಲಿಂಗಾಯತ ಧರ್ಮ ಮಹಾಸಭಾ ನೇತೃತ್ವದಲ್ಲಿ, 21ನೆಯ ವರ್ಷದ ಮನ ಮನೆಗಳಲ್ಲಿ ವಿಶ್ವಗುರು ಬಸವಜ್ಯೋತಿ ಯಾತ್ರೆಯ 11ನೇ ದಿನದ ಕಾರ್ಯಕ್ರಮ, ಗೋಕಾಕ ತಾಲೂಕಿನ ಗೋಡಚನಮಲ್ಕಿ ಗ್ರಾಮದ ದುಂಡಪ್ಪ ಮಾನಗಾವಿ ಹಾಗೂ ಹುಕ್ಕೇರಿ ತಾಲೂಕಿನ ಶಿರೂರು ಗ್ರಾಮದ ಗುರುಸಿದ್ದಪ್ಪ ಸಿದ್ದಗೌಡರ ಇವರ ಮನೆಗಳಲ್ಲಿ ನೆರವೇರಿತು.

ಧಾರವಾಡ ಬಸವ ಕೇಂದ್ರದ ವತಿಯಿಂದ ಶೇಖರ ಕುಂದಗೋಳ ಅವರ ರಜತಗಿರಿ ಮನೆಯಲ್ಲಿ ವಚನೋತ್ಸವ, ಲಿಂಗಾಯತ ವಿಷಯವಾಗಿ ಚಿಂತನ ಕಾರ್ಯಕ್ರಮ ನಡೆಯಿತು.
ಮೈಸೂರು ತಾಲ್ಲೂಕು ಇಲವಾಲ ಹೋಬಳಿ ಮಾಣಿಕ್ಯಪುರ ಗ್ರಾಮದಲ್ಲಿ ಇಷ್ಟಲಿಂಗ ಧಾರಣೆ, ಶಿವಯೋಗ ಮತ್ತು ಉಪನ್ಯಾಸ ಕಾರ್ಯಕ್ರಮಗಳು ನಡೆದವು. ಪೂಜ್ಯ ಬಸವಯೋಗಿಪ್ರಭು ಸ್ವಾಮೀಗಳು 23 ಜನರಿಗೆ ಇಷ್ಟಲಿಂಗ ಧಾರಣೆ ಮಾಡಿ ಶಿವಯೋಗ ಹೇಳಿಕೊಟ್ಟರು. ಮಕ್ಕಳು ಹಾಕಿಕೊಂಡಿದ್ದ ಯಂತ್ರಗಳನ್ನು ತೆಗೆಸಿ, ಇಷ್ಟಲಿಂಗದ ಮಹತ್ವ ತಿಳಿಸಿಕೊಟ್ಟರು.

ಪ್ರಜಾಪ್ರಭುತ್ವಕ್ಕಾಗಿ ನಾವು - ಸಮಾನ ಮನಸ್ಕರು ಸಂಘಟನೆ ವತಿಯಿಂದ ಸಾಹಿತಿ, ಕಲಾವಿದರು ಬೆಂಗಳೂರಿನಲ್ಲಿಂದು ಸಂವಿಧಾನ ವಿರೋಧಿ ರಾಜ್ಯಪಾಲರ ನಡೆಯ ವಿರುದ್ಧ ಪ್ರತಿಭಟನೆ ನಡೆಸಿದರು.
ಗದಗಿನ ಬಸವದಳದ ೧೬೦೭ನೇ ಶರಣ ಸಂಗಮ ಕಾರ್ಯಕ್ರಮದಲ್ಲಿ ಈಚೆಗೆ ಲಿಂಗೈಕ್ಯರಾದ ಶತಾಯುಷಿ ಲಿಂಗೈಕ್ಯ ವಿ. ಸಿದ್ದರಾಮಣ್ಣ ಶರಣರಿಗೆ ನುಡಿನಮನ ಸಲ್ಲಿಸಲಾಯಿತು. ಶಿವಾನಂದ ನಗರದ ಬಸವ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಬಿಗ ಚೌಡಯ್ಯ ಪ್ರತಿಷ್ಠಾನದ ಸಂಗನಬಸವ ಶ್ರೀಪಾದ ಎಂ. ಹಾದಿಮನಿಯವರು ವಿ.ಸಿದ್ದರಾಮಣ್ಣ ಶರಣರ ವ್ಯಕ್ತಿತ್ವದ ಮೇಲೆ ಉಪನ್ಯಾಸಗೈದರು. ಅಧ್ಯಕ್ಷತೆಯನ್ನು ಬಸವದಳದ ಅಧ್ಯಕ್ಷರಾದ ವಿ.ಕೆ.ಕರೇಗೌಡ್ರ ವಹಿಸಿದ್ದರು. ಪ್ರಕಾಶ ಅಸುಂಡಿ, ಎಸ್.ಎ.ಮುಗದ, ಲಕ್ಷ್ಮೀ ಅಂಗಡಿ, ಗಿರಿಜವ್ವ ಹತ್ತಿಕಾಳ, ಎಂ.ಬಿ.ಲಿಂಗದಾಳ ಮತ್ತೀತರರು ಉಪಸ್ಥಿತರಿದ್ದರು. (ಮಾಹಿತಿ/ಚಿತ್ರ: ಶರಣು ಅಂಗಡಿ)
List of Images
1/17

Leave a comment