ವಿಜಯನಗರ ಸಾಮ್ರಾಜ್ಯದ ಪೂರ್ವದಲ್ಲಿ ಹಿಂದು ಪದದ ಬಳಕೆ ಶಾಸನಗಳಲ್ಲಿ ಇಲ್ಲ.
ಅಲ್ಲಿರುವುದು ಶೈವ,ವೈಷ್ಣವ, ಜೈನ, ಬೌದ್ಧ, ವೈದಿಕ, ಸನಾತನ, ವರ್ಣಾಶ್ರಮ ಹಾಗೂ ಚಾತುರ್ವರ್ಣ ಧರ್ಮ ಮಾತ್ರ.
ಇನ್ನೂ ಕೆಲವರು ಇದ್ಯಾವುದಕ್ಕೂ ಸೇರದೆ ನಿಸರ್ಗ ಧರ್ಮದ ಪಾಲನೆ ಮಾಡುತ್ತಿದ್ದರು. ನಮ್ಮ ಪೂರ್ವಜರು ಇದರಲ್ಲಿ ಯಾವುದೋ ಒಂದಕ್ಕೆ ಸೇರಿದವರಾಗಿದ್ದರು.
ಶಾಸನಗಳಲ್ಲಿ ಶೈವ v/s ವೈಷ್ಣವ, ಶೈವ v/s ಜೈನ, ಶೈವ v/s ಬೌದ್ಧ, ಜೈನ v/s ವೈಷ್ಣವ, ಜೈನ v/s ಬೌದ್ಧ ಹೀಗೆ ಪರಸ್ಪರವಾಗಿ ದಾಳಿ ಮಾಡಿ ಕೊಂಡಿರುವುದು ದಾಖಲಾಗಿದೆ.
ಜೈನ, ಬೌದ್ಧರ ಮೇಲೆ ದಾಳಿಯಾದಂತೆ ೧೨ ಶತಮಾನದಲ್ಲಿ ಲಿಂಗಾಯತ ಧರ್ಮದ ಮೇಲೆ ಕೂಡ ದಾಳಿಯಾಗಿದೆ.
ವಿಜಯನಗರ ಸಾಮ್ರಾಜ್ಯದ ಆರಂಭದ ನಂತರದಲ್ಲಿ ಈ ಮೇಲಿನ ಪದಗಳ ಜೊತೆಗೆ ಹಿಂದು ಪದ ಸೇರ್ಪಡೆ ಆಗಿದೆ.
ಇದಕ್ಕೆ ಕಾರಣ ಮುಸ್ಲಿಂರ ದಾಳಿ. ಆಗ ಬಂದ ಮುಸ್ಲಿಂರು ಇಲ್ಲಿ ಇರುವವರನ್ನೆಲ್ಲಾ ಹಿಂದು ಎಂದು ಕರೆಯಲು ಆರಂಭಿಸಿದರು. ಅದನ್ನು ಇವರೆಲ್ಲರೂ ಅವರನ್ನು ವಿರೋಧಿಸುವ ಸಲುವಾಗಿ ಹಾಗೂ ಒಗ್ಗಟ್ಟು ಸಾಧಿಸಲು ಈ ಪದವನ್ನು ಒಪ್ಪಿ ಹೆಚ್ಚು ಪ್ರಚಲಿತಗೊಳಿಸಿದರು.
ಆಗ ಶೈವ,ವೈಷ್ಣವ, ಜೈನ, ಬೌದ್ಧ,ಲಿಂಗಾಯತ ಪದಗಳು ಮುಂಚೂಣಿಯಿಂದ ಹಿಂದೆ ಸರಿದು ಹಿಂದು ಪದ ಹೆಚ್ಚು ಪ್ರಚಲಿತಕ್ಕೆ ಬರಲು ಸಾಧ್ಯವಾಯಿತು. ಆದರೂ ಗ್ರಾಮೀಣ ಪ್ರದೇಶಗಳಲ್ಲಿ ಜಾತಿಯಿಂದ ಗುರುತಿಸಿಕೊಳ್ಳುತ್ತಿದ್ದರು. ಅವರಿಗೆ ಹಿಂದು ಪದ ಅಷ್ಟಾಗಿ ಹೃದಯದ ಆಳಕ್ಕೆ ಇಳಿಯಲೇ ಇಲ್ಲ.
ಯೂರೋಫಿಯನ್ನರ ಆಗಮನದಿಂದ ಕ್ರೈಸ್ತ ಬೆಳೆಯಿತು. ಆಗ ಮತ್ತಷ್ಟು ಪ್ರಖರವಾಗಿ ಹಿಂದು ಪದ ಮುನ್ನೆಲೆಗೆ ಬರಲು ಆರಂಭಿಸಿತು. ಆರೆಸ್ಸಸ್ ಕಾರಣದಿಂದಾಗಿ ಹಿಂದು ಪದ ಪ್ರತಿ ವ್ಯಕ್ತಿಯ ಮೇಲೆ ಪ್ರಭಾವ ಬೀರಿತು. ಹೀಗೆ ಹಿಂದು ಪುರಾಣ ಹುಟ್ಟಿ ಕೊಂಡಿತು.