ಬೆಂಗಳೂರಿನಲ್ಲಿ ಒಂದು ದಿನದ ಲಿಂಗಾಯತ ಧರ್ಮದ ನಿಜಾಚರಣೆ ಕಮ್ಮಟ ಭಾನುವಾರ ನಡೆಯಿತು.
ವಚನ ಮೂರ್ತಿ ರುದ್ರಪ್ಪ ಪಿ, ಸಿಂಧನೂರು, ಸಂಗೊಳ್ಳಿ ಮಡಿವಾಳಪ್ಪ, ಬೈಲಹೊಂಗಲ, ಶಿವಾನಂದ ಅರಭಾವಿ ಬೈಲಹೊಂಗಲ, ಮಂಜುನಾಥ ಮಡಿವಾಳ, ನೇಗಿನಾಳ್, ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ವಿವಿಧ ಜಿಲ್ಲೆಗಳಿಂದ 130 ಜನ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿದರು ಎಂದು ಬೆಂಗಳೂರು JLM ಅಧ್ಯಕ್ಷ ಪ್ರೊಫೆಸರ್ ವೀರಭದ್ರಯ್ಯ ಹೇಳಿದರು.
ನಿಜ ಆಚರಣೆಗಳ ಬಗ್ಗೆ ಜಾಗೃತಿ ಮೂಡಿಸಲು JLM ಕೇಂದ್ರ ಸಮಿತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಪವಾಡ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮಿಗಳು ಉದ್ಘಾಟಿಸಿದರು. ಮರಲವಾಡಿ ಶ್ರೀ ಬಸವ ಮಠದ ಪರಮಪೂಜ್ಯ ಮೃತ್ಯುಂಜಯ ಸ್ವಾಮೀಜಿ ಮುಕ್ತಾಯ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.