ಶಂಕರ ಬಿದರಿ ಸುತ್ತೋಲೆಗೆ ಪಂಚಪೀಠಗಳ ಸ್ವಾಗತ
ಧಾರವಾಡ
ಬಸವ ಜಯಂತಿಯಂದು ರೇಣುಕಾಚಾರ್ಯರ ಜಯಂತಿಯನ್ನು ಆಚರಿಸಲು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಜ್ಯಾಧ್ಯಕ್ಷ ಶಂಕರ ಬಿದರಿಯವರು ಕಳಿಸಿರುವ ಸುತ್ತೋಲೆಯನ್ನು ಪಂಚಪೀಠದ ಆಚಾರ್ಯರು ಸ್ವಾಗತಿಸಿದ್ದಾರೆ.
ಮಹಾಸಭೆಯ ನಿಲುವನ್ನು ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರು, ಶ್ರೀಶೈಲ ಜಗದ್ಗುರು ಡಾ. ಚೆನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು, ಕಾಶಿ ಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು, ಕಿರಿಯ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಭಗವತ್ಪಾದರು ಸ್ವಾಗತಿಸಿದ್ದಾರೆ.
ಬಸವ ಜಯಂತಿಯ ಜೊತೆ ಇತರ ಪಂಚಾಚಾರ್ಯರ ಜಯಂತಿಯನ್ನೂ ಆಚರಿಸಿ ಎಂದು
ಪಂಚಪೀಠಗಳ ಆಚಾರ್ಯರು ಕರೆ ಕೊಟ್ಟಿದ್ದಾರೆ.
ಮಾಧ್ಯಮಗಳಿಗೆ ಬಂದಿರುವ ಜಂಟಿ ಹೇಳಿಕೆಯಲ್ಲಿ ಅಕ್ಷಯ ತೃತಿಯ ದಿನ ಆಚರಿಸಲಾಗುವ ಬಸವ ಜಯಂತಿಯ ದಿನವೇ ವೀರಶೈವ-ಲಿಂಗಾಯತ ಧರ್ಮದ ಕೇದಾರ ಪೀಠದ ಶ್ರೀಜಗದ್ಗುರು ಏಕೋರಾಮಾರಾಧ್ಯರ ಜಯಂತಿಯೂ ಬಂದಿದೆ.
ಹಾಗಾಗಿ ಬಸವಾದಿ ಶರಣರ ಜೊತೆ “ರೇಣುಕಾದಿ ಪಂಚಾಚಾರ್ಯರ” ಜಯಂತಿಯನ್ನು ಒಂದೇ ವೇದಿಕೆಯಲ್ಲಿ ಆಚರಿಸಬೇಕೆಂಬ ಅಖಿಲ ಭಾರತ ವೀರಶೈವ–ಲಿಂಗಾಯತ ಮಹಾಸಭೆಯ ರಾಜ್ಯಾಧ್ಯಕ್ಷ ಶಂಕರ ಬಿದರಿಯವರು ಪ್ರಸ್ತಾವನೆ ಸ್ವಾಗತಾರ್ಹವಾಗಿದೆ, ಎಂದು ಹೇಳಿದ್ದಾರೆ.
ಬಹಳ ದೂರದೃಷ್ಟಿಯಿಂದ ಹಾನಗಲ್ಲ ಕುಮಾರ ಸ್ವಾಮಿಗಳು ವೀರಶೈವ ಧರ್ಮದ ಮೂಲ ಆಚಾರ್ಯರನ್ನು ಹಾಗೂ ಬಸವಾದಿ ಶಿವಶರಣರನ್ನು ಒಂದುಗೂಡಿಸಿಕೊಂಡು ಬಂದಿದ್ದನ್ನು ಯಾರೂ ಮರೆಯಬಾರದು.
ಶಂಕರ ಬಿದರಿ ಅವರು ಎಲ್ಲರನ್ನೂ ಭಾವನಾತ್ಮಕವಾಗಿ ಒಗ್ಗೂಡಿಸುವಲ್ಲಿ ತಮ್ಮ ಪ್ರಯತ್ನವನ್ನು ಮುಂದುವರೆಸಿದ್ದಾರೆ. ಬಸವ ಜಯಂತಿಯ ಜೊತೆಯಲ್ಲಿ ಪಂಚಾಚಾರ್ಯರ ಹಾಗೂ 12ನೆಯ ಶತಮಾನದ ಸಮಕಾಲೀನ ಶರಣರೆಲ್ಲರ ಜಯಂತಿಗಳನ್ನು ಏಕಕಾಲಕ್ಕೇ ಆಚರಿಸುವುದರಿಂದ ಸಮಾಜದ ಒಗ್ಗಟ್ಟು ಇಮ್ಮಡಿಯಾಗುತ್ತದೆ ಎಂಬ ಮಹಾಸಭೆಯ ದೂರದೃಷ್ಟಿಯ ವಿಚಾರಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ಪಂಚಪೀಠಗಳ ಆಚಾರ್ಯರು ಸಲಹೆ ನೀಡಿದ್ದಾರೆ.
ಸನಾತನ ಧರ್ಮ
ವೀರಶೈವ-ಲಿಂಗಾಯತ ಧರ್ಮವು ಸನಾತನ ಧರ್ಮವಾಗಿದ್ದು, ಈ ಧರ್ಮದ ಸ್ಥಾಪನೆ ಮತ್ತು ವಿಕಾಸದಲ್ಲಿ ರೇಣುಕಾದಿ ಪಂಚಾಚಾರ್ಯರ ಹಾಗೂ ಬಸವಾದಿ ಶಿವಶರಣರ ಪಾತ್ರ ಬಹಳ ದೊಡ್ಡದಿದೆ. ಬಸವಣ್ಣನವರು ಎಲ್ಲರನ್ನೂ ಅಪ್ಪಿಕೊಂಡು ಪ್ರೀತಿಯಿಂದ ಬದುಕಲು ಸಂದೇಶ ನೀಡಿದ ಶ್ರೇಷ್ಠ ಶರಣರು, ಎಂದು ಹೇಳಿದ್ದಾರೆ.
ಸಮಾಜದ ಒಗ್ಗಟ್ಟು
ಬದಲಾದ ಸನ್ನಿವೇಶದಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಹೆಸರಿನಲ್ಲಿ ‘ಲಿಂಗಾಯತ’ ವನ್ನೂ ಸೇರಿಸಲಾಗಿದೆ. ಇದನ್ನು ಸಮಗ್ರತೆಯಿಂದ ವಿಚಾರಿಸಿ ಸಮಾಜದ ಒಳಿತನ್ನು ಗಮನಿಸಿ ಅದಕ್ಕೆ ಪಂಚಪೀಠಾಧೀಶ್ವರರು ಒಪ್ಪಿಗೆ ಸೂಚಿಸಿದ್ದಾರೆ.
ಆದರೆ ವೀರಶೈವ-ಲಿಂಗಾಯತ ಸಮಾಜದ ಒಗ್ಗಟ್ಟನ್ನು ಗಮನದಲ್ಲಿಟ್ಟುಕೊಳ್ಳದೇ ಪ್ರಸ್ತುತ ಕೆಲವರು ಮಾತ್ರ ವೀರಶೈವವನ್ನು ಮರೆತು ಕೇವಲ ಲಿಂಗಾಯತವನ್ನು ಮಾತ್ರ ಪ್ರತಿಪಾದಿಸಿ ಅಖಂಡ ಸಮಾಜದ ಒಗ್ಗಟ್ಟಿಗೆ ಕೊಡಲಿ ಪೆಟ್ಟು ಹಾಕುತ್ತಿರುವುದು ಬಹಳ ನೋವಿನ ಸಂಗತಿಯಾಗಿದೆ.
ಪ್ರಸ್ತುತ ವೀರಶೈವ-ಲಿಂಗಾಯತರು ತಮ್ಮ ಒಗ್ಗಟ್ಟನ್ನು ಸಾಧಿಸದೇ ಹೋದರೆ ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಹಿನ್ನೆಡೆಯನ್ನು ಅನುಭವಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಪಂಚಾಚಾರ್ಯರ ಹಾಗೂ ಬಸವಾದಿ ಶಿವಶರಣರ ಜಯಂತಿಗಳು ಬೇರೆ ಬೇರೆ ಸಮಯಗಳಲ್ಲಿ ಜರುಗುತ್ತಿದ್ದರೂ ಸಹ ವೀರಶೈವ-ಲಿಂಗಾಯತ ಸಮಾಜದ ಒಗ್ಗಟ್ಟಿನ ಹಿತದೃಷ್ಟಿಯಿಂದ ಎಲ್ಲರ ಜಯಂತಿಗಳನ್ನು ಏಕಕಾಲದಲ್ಲಿ ಮಾಡುವ ವಿಚಾರವು ಅತ್ಯಂತ ಸೂಕ್ತವಾಗಿದೆ, ಎಂದು ಹೇಳಿದ್ದಾರೆ.
ವೀರಶೈವವು ಸನಾತನ ಧರ್ಮದ ಭಾಗವಿರಬಹುದು. ಆದರೆ ಬಸವಾದಿ ಶರಣರು ಸನಾತನ ಧರ್ಮದ ಜಾತಿ ಕಟ್ಟುಪಾಡುಗಳನ್ನ ಸ್ಪಷ್ಟವಾಗಿ ತಿರಸ್ಕರಿಸಿ, ಎಲ್ಲ ವರ್ಗಗಳ ಜನರನ್ನ ಒಂದುಗೂಡಿಸಿ ನಿರ್ಮಿಸಿದ ಅವೈದಿಕ ಧರ್ಮವೇ ಲಿಂಗಾಯತ ಧರ್ಮ.
ಸನಾತನ ಧರ್ಮದಲ್ಲಿ ವರ್ಣಾಶ್ರಮ, ದಾನ, ಮೇಲು, ಕೀಳುಗಳೆಲ್ಲವೂ ಇವೆ.
ಲಿಂಗಾಯತದಲ್ಲಿ ಅವ್ಯಾವಕ್ಕೂ ಜಾಗವಿಲ್ಲ.
ಹುಟ್ಟಿದ ಮನುಷ್ಯರೆಲ್ಲರೂ ದುಡಿದು ತಿನ್ನಬೇಕು ಎನ್ನುತ್ತದೆ ಲಿಂಗಾಯತ ಧರ್ಮ.
ಕಾಯಕ, ದಾಸೋಹ, ಸಮಸಮಾಜ ಲಿಂಗಾಯತದ ಧ್ಯೇಯ.
ಅದು ಹೇಗೆ ಇಂತಹ ಧರ್ಮ ಸನಾತನ ಧರ್ಮದ ಒಂದು ಭಾಗವೆನ್ನುತ್ತಾರೆ ಈ ಕಿರೀಟಧಾರಿ ಸನ್ಯಾಸಿಗಳು..?
ಬಿದರಿಯವರು ರೇಣುಕಾಚಾರ್ಯರನ್ನು ಮಾತ್ರ, ಅದನ್ನು ಸ್ವಾಗತಿಸಿ ಬಸವಜಯಂತಿ ಯೊಡನೆ ಎಲ್ಲಾ ಪಂಚಾಚಾರ್ಯರ ಜಯಂತಿ ಆಚರಿಸುವಂತೆ ಇತರೆ ಪಂಚಾಚಾರ್ಯರ ಬೇಡಿಕೆ. ಏನಿದು ಆಶ್ಚರ್ಯ? ಇವರ್ಯಾರು ಹುಟ್ಟೇ ಇಲ್ಲವೇ? ಹುಟ್ಟಿದ ಸಂವತ್ಸರ,ಮಾಸ,ಪಕ್ಷ,ತಿಥಿ ನಕ್ಷತ್ರ ಗಳು ಇವರಿಗಿಲ್ಲವೇ ಅಥವಾ ದೋಷಪೂರಕ ದಿನದಲ್ಲಿ ಹುಟ್ಟಿದರ. ಬಸವಣ್ಷನವರ ಹುಟ್ಟನ್ನು ಪೂರ್ಣ ಅವರಿಗೆ ಬಿಡದೆ ಅದನ್ನೂ ಸಹ ಹಂಚಿಕೊಳ್ಳಲು ಹಾತೊರೆಯುತಿದ್ದಾರೆ.ಪಾಪ ಅವರ ಪರಿಸ್ತಿಥಿ ಎಲ್ಲಿಗೆ ಬಂತು.
ಬಿದರಿಯವರು ತಿಳಿಸಿದ್ಣು ರೇಣುಕಾಚಾರ್ಯರನ್ನು ಮಾತ್ರ, ಅದನ್ನು ಸ್ವಾಗತಿಸಿ ಬಸವಜಯಂತಿ ಯೊಡನೆ ಎಲ್ಲಾ ಪಂಚಾಚಾರ್ಯರ ಜಯಂತಿ ಆಚರಿಸುವಂತೆ ಇತರೆ ಪಂಚಾಚಾರ್ಯರ ಬೇಡಿಕೆ. ಏನಿದು ಆಶ್ಚರ್ಯ? ಇವರ್ಯಾರು ಹುಟ್ಟೇ ಇಲ್ಲವೇ? ಹುಟ್ಟಿದ ಸಂವತ್ಸರ,ಮಾಸ,ಪಕ್ಷ,ತಿಥಿ ನಕ್ಷತ್ರ ಗಳು ಇವರಿಗಿಲ್ಲವೇ ಅಥವಾ ದೋಷಪೂರಕ ದಿನದಲ್ಲಿ ಹುಟ್ಟಿದರ. ಬಸವಣ್ಷನವರ ಹುಟ್ಟನ್ನು ಪೂರ್ಣ ಅವರಿಗೆ ಬಿಡದೆ ಅದನ್ನೂ ಸಹ ಹಂಚಿಕೊಳ್ಳಲು ಹಾತೊರೆಯುತಿದ್ದಾರೆ.ಪಾಪ ಅವರ ಪರಿಸ್ತಿಥಿ ಎಲ್ಲಿಗೆ ಬಂತು.
ಕಿರೀಟಧಾರಿಗಳ್ ಗೆ ದುರುದ್ದೇಶವಿದೆ, ಬಸವಣ್ಣನನ್ನು ಧರ್ಮ ಗುರು ಎಂದು ಒಪ್ಪಿಕೊಳ್ಳುವ ಮನಸ್ಸಿಲ್ಲ. ತಮ್ಮ ಶ್ರೇ ಷ್ಟತೆ ಯನ್ನು, ಈತರಾ ಮಾಡುತಿದ್ದಾರೆ.
ಆ ಅಯಒಗ್ಯ ಬಿದರಿಗಂತೂ ಬುದ್ದಿಯಿಲ್ಲ.. ಜನಕ್ಕಾದರೂ ಉಗಿದು ಹೇಳಲು ಬರುವುದಿಲ್ಲವೇ??
ಪಂಚಾಚಾರ್ಯರು ಈ ಹೇಳಿಕೆಯನ್ನು ಕೊಟ್ಟು ಲಿಂಗಾಯತರನ್ನು ಮತ್ತು ಬಸವಾನುಯಾಯಿಗಳನ್ನು ದಾರಿತಪ್ಪಿಸುತ್ತಿದ್ದಾರೆ. ಅವರುಗಳ ಈ ಹೇಳಿಕೆಯ ಅರ್ಥ, ಬಸವಣ್ಣನವರನ್ನು *ಧರ್ಮಗುರು* ಎಂದು ಒಪ್ಲಿಕೊಂಡಂತಾಗುತ್ತದೆ
ನೀವು ಏನೆ ಹೇಳಿದರೂ ನಿಮ್ಮ ಆಟ ನಡೆಯುದಿಲ್ಲ ಪಂಚಾಚಾರ್ಯರೆ ಇವಾಗ ಎಲ್ಲರೂ ವಚನ ಸಾಹಿತ್ಯ ಒದಿ ಜಾಗೃತರಾಗುತಿದ್ದಾರೆ. ಗುರು ಬಸವಣ್ಣನವರ ತತ್ವ ಇಡಿ ಜಗತ್ತು ಒಪ್ಪಿಕೊಳ್ಳತಾ ಇದೆ ನಿಮ್ಮ ಮೊಂಡುವಾದ ಬಿಟ್ಟು ಗುರು ಬಸವಣ್ಣನವರೆ ಲಿಂಗಾಯತ ಧರ್ಮಗುರು ಅಂತ ಒಪ್ಪಿಕೊಳ್ಳಿ. ಒಪ್ಪಿಕೊಂಡರೆ ಮಾತ್ರ ಲಿಂಗಾಯತರ ಹೃದಯದಲ್ಲಿ ಜಾಗ ಸಿಗುತ್ತೆ ಇಲ್ಲ ಅಂದರೆ ನಿಮ್ಮ ಅಸ್ತಿತ್ವವೆ ಇರುವುದಿಲ್ಲ ವಿಚಾರ ಮಾಡಿ ಹೇಳಿಕೆ ಕೊಡಿ
ಏನಿದು ಅಪಾಸ್ಯ ನಿಮ್ಮಪ್ಪನ ಜಯಂತಿ ನಮ್ಮಪ್ಪನ ಜಯಂತಿಯ ಜೊತೆ ಮಾಡುವ ಉದ್ದೇಶ ಏನು? ಇದುವರೆವಿಗು ನಿಮ್ಮಪ್ಪನ ಜಯಂತಿ ಮಾಡಿದ ದಿನ ನಿಮ್ಮಪ್ಪ ಹುಟ್ಟಿದ ದಿನವಲ್ಲವೇ? ಏಕೆ ಈ ಬದಲಾವಣೆಯ ಗೊಂದಲ? ನಿಮ್ಮ ಅಪ್ಪ ಹುಟ್ಟಿದ ದಿನ ಎಂದಿನಂತೆ ಮಾಡಿಕೊಂಡು ಹೋಗಿ. ನಾವು ನಮ್ಮಪ್ಪನ ಜಯಂತಿ ನೆಮ್ಮದಿಯಿಂದ ಮಾಡಲು ಬಿಡಿ.
ರೇಣುಕಾಚಾರ್ಯ ರ ಜಯಂತಿ ಸಮಯದಲ್ಲಿ ನಮ್ಮ ಬಸವೇಶ್ವರ ರ ಜಯಂತಿ ಯನ್ನು ಮಾಡಬಹುದಿತ್ತು.ಆದರೆ ತಾವು ರೇಣುಕಾಚಾರ್ಯ ರ ಜಯಂತಿ ಯ ಸಂದರ್ಭದಲ್ಲಿ ಆಹ್ವಾನ ಪತ್ರಿಕೆ ಯ ಮುದ್ರಣ ದ ಸಮಯದಲ್ಲಿ ರೇಣುಕಾಚಾರ್ಯ ರ ಪೋಟೋ ಜೊತೆಗೆ ಬಸವೇಶ್ವರ ಪೋಟೋ ಹಾಕಬೇಕಾಗಿತ್ತು. ಹಾಕಿಲ್ಲ.ಮೊದಲು ರೇಣುಕಾಚಾರ್ಯ ಪೋಟೋ ಜೊತೆಗೆ ಬಸವೇಶ್ವರರ ಪೋಟೋ ಹಾಕಿ. ನಂತರ ನಿಮ್ಮ ಹೇಳಿಕೆಯನ್ನು ಗಮನಿಸೋಣ
ಹುಚ್ಚುತನ ಪರಮಾವಧಿ ಪಂಚಾಚಾರ್ಯರ ಬುದ್ದಿಗೆ ಸ್ವಲ್ಪ ಮಂಕು ಕವಿದಿದೆ
ಅವರು ಬೇಕಾದರೆ ಸನಾತನ ಧರ್ಮದ ಹೆಸರಿನಲ್ಲಿ ಹಿಂದೂಗಳೇ ಆಗಿ ಮುಂದುವರೆಯಲಿ.ಆದರೆ ಬೇತಾಳ ನಂತೆ ವಿಶ್ವಗುರು ಬಸವಣ್ಣ ನವರ ಅನುಯಾಯಿಗಳಾದ ಲಿಂಗಾಯತರ ಬೆನ್ನು ಒತ್ತಾಯಪೂರ್ವಕವಾಗಿ ಏರಿ ಕಾಡುವುದು ಬೇಡ..ಅವರು ಲಿಂಗೀ ಬ್ರಾಹ್ಮಣರಾಗಿ ಮುಂದುವರೆಯಲು ನಮ್ಮ ಅಭ್ಯಂತರ ಇಲ್ಲ. ಇಲ್ಲವೇ ಬಸವಣ್ಣ ಸ್ಥಾಪಿಸಿದ ಲಿಂಗಾಯತ ಧರ್ಮದಲ್ಲಿ ಪೂರ್ಣ ಪ್ರಮಾಣದ ನಂಬಿಕೆ ಇಟ್ಟು , ಬಸವಣ್ಣ ನವರೇ ನಮ್ಮ ಧರ್ಮ ಗುರು ಮತ್ತು ವಚನ ಸಾಹಿತ್ಯವೇ ನಮ್ಮ ಧರ್ಮ ಗ್ರಂಥ ಎಂದು ಒಪ್ಪಿಕೊಂಡು ನಮ್ಮ ಜೊತೆಗೆ ಬರಲಿ. ಗುರು ಮತ್ತು ಭಕ್ತ ಎಂಬ ಭಾವನೆ ಇಟ್ಟುಕೊಳ್ಳುವುದು ಬೇಡ. ಅವರ ಪಂಚಪೀಠಗಳಿಗೆ ಈಗಿನಿಂದಲೇ ಜಂಗಮೇತರರನ್ನು ಸ್ವಾಮೀಜಿಗಳು ಮಾಡಿ ನಾವೆಲ್ಲಾ ಒಂದು ಎಂದು ಸಾಬೀತು ಪಡಿಸಲಿ.
ಪರಾವಲಂಬಿ ಮನಸ್ಥಿತಿ
ವೀರಶೈವ ಜೊತೆ ಸನಾತನ ಹಿಂದೂ ಯಾಕೆ ಸೇರಿಸಿಲ್ಲ. ನಿಮ್ಮದು ಸನಾತನ ಪರಂಪರೆ ಅಲ್ವೆ ?
ಸನಾತನಾ ಅಂದಮೇಲೆ ರಾಮ, ಕೃಷ್ಣ, ಪರುಷರಾಮರ ಜಯಂತಿಯನ್ನು ರೇಣುಕಾಚಾರ್ಯ ಜಯಂತಿಯಂದು ಯಾಕೆ ಆಚರಣೆ ಮಾಡಬಾರದು ?
ಹುಟ್ಟೆ ಇಲ್ಲದ ವೈಕ್ತಿಯ ಜಯಂತಿ ಯಾಕೆ..?? ಅವರಿಗೆ ಡೇಟ್ ಆಫ್ ಬರ್ತ್ ಇಲ್ಲ ಅಂದ್ರೆ,,,, ಜಯಂತಿ ಯಾವ ಉದ್ದೇಶಕ್ಕೆ,,,,,
ರೇಣುಕಾಚಾರ್ಯ ಹೆಸರು ಹೇಳಿದ ಕೂಡಲೇ ಈ ಪಂಪಚರು ಪೀಠಾಧಿಪತಿಗಳು ಟುಂಮಯೆಂದು ನಾವುಗಳು ಇದನ್ನು ಸ್ವಾಗತಿಸುತ್ತೇವೆ ವೆಂದು ಹೇಳುತ್ತಾರೆ ನೋಡಿ. ಹುಗ್ಗಿ ಹೊಡೆಯುವವರು.