ಗುರು ಬಸವಣ್ಣನವರು ಬಯಲಾದ ದಿನವೇ ಬಸವ ಪಂಚಮಿ. ಮರ್ತ್ಯದ ಮಣಿಹ ಪೂರೈಸಿದ ದಿನ. ಅವರ ನೆನಹ ಸುಖ ಸಮುದ್ರ. ‘ಬಸವ’ ಎಂಬುದು ಕೇವಲ ಹೆಸರಲ್ಲ.
ಅರಿವು, ಆಚಾರ, ಭಕ್ತಿ ಅನಿಮಿತ್ಯ. ಪ್ರೇಮ, ಭರವಸೆ, ಆಸರೆ ಮುಂತಾದ ಅರ್ಥಗಳುಂಟು. ಮಗುವಿಗೆ ತಾಯಿಯೇ ಸರ್ವಸ್ವವಾಗುವಂತೆ, ಮರ್ತ್ಯಲೋಕಕ್ಕೆ ಗುರು ಬಸವಣ್ಣನವರೆ ಸರ್ವಸ್ವ.
ಮೌಡ್ಯದ ಭಕ್ತಿ, ಬೇಡುವ ಭಕ್ತಿಯನ್ನು ತಿರಸ್ಕರಿಸಿ, ಅರಿವಿನಿಂದ ಕೂಡಿದ ಭಕ್ತಿ ಬಸವ ಕಲಿಸಿದರು. ಕಾಯಕ ಮಾಡಬೇಕು ದಾಸೋಹ ನೀಡಬೇಕೆಂಬುದು ಅವರ ನಿಲುವಾಗಿತ್ತು.
ಬಸವ ಪಂಚಮಿಯ ದಿನದಂದು ಹುತ್ತಕ್ಕೆ ಹಾಲು ಸುರಿದು ಹಾಳು ಮಾಡುವದು ಬಸವ ಸಂಸ್ಕೃತಿಯಲ್ಲ. ಉಂಬ ಉಡುವ ಕೂಡಲಸಂಗಮದೇವ ಜಂಗಮ ಮುಖದಲ್ಲಿ ಎಂಬ ಗುರು ವಾಣಿಯಂತೆ ರೋಗಿಗಳಿಗೆ, ಅನಾಥರಿಗೆ, ಬಡಮಕ್ಕಳಿಗೆ ಹಾಲು ಕುಡಿಸಿ ಸಂಭ್ರಮಿಸಬೇಕೆ ವಿನಹ ಹಾಳು ಮಾಡಬಾರದು.
ಪ್ರಭುದೇವ ಸ್ವಾಮೀಜಿ
ಲಿಂಗಾಯತ ಮಹಾಮಠ, ಬೀದರ